Advertisement

Month: April 2026

ಮನುಷ್ಯ ಬದುಕಿನೊಂದಿಗೆ ಮುಖಾಮುಖಿಯಾಗುವ ಪದ್ಯಗಳು: ಕಲ್ಲೇಶ್ ಕುಂಬಾರ್ ಬರಹ

ಕವಿಯಾಗಿ ಮಾಲತಿಯವರಿಗೆ ಕತ್ತಲು ಮತ್ತು ಬೆಳಕಿನ ಕುರಿತಾಗಿ ವಿಶಿಷ್ಟವಾದ ಆಕರ್ಷಣೆಯಿದೆ ಎನ್ನಬಹುದು. ಈ ಮಾತಿಗೆ ಸಾಕ್ಷಿಯಾಗಿ ಈ ಕವನಸಂಕಲನದಲ್ಲಿ ‘ಅಜ್ಜಿ ಮತ್ತು..’ ಎಂಬ ಪದ್ಯವೊಂದಿದೆ. ಇಲ್ಲಿ, ಕತ್ತಲು–ಬೆಳಕಿನ ಆಟವನ್ನು ಕೇಂದ್ರವಾಗಿರಿಸಿಕೊಂಡು ಮನುಷ್ಯ ಬದುಕಿನ ಕ್ರಿಯೆಗಳನ್ನು ಅವರು ಶೋಧಿ‌ಸಲು ಪ್ರಯತ್ನಿಸಿದ್ದಾರೆ.‌ ಈ ಪದ್ಯದ ಶೀರ್ಷಿಕೆಯಲ್ಲಿರುವ ‘ಅಜ್ಜಿ’ ಬೇರಾರೂ ಆಗಿರದೇ ನಮ್ಮೊಳಗಿನ ಅರಿವಿನ ಕೇಡು ಕಳೆಯಲೆಂದು ನಮ್ಮ ಎದೆಯಂಗಳದಲ್ಲಿ ಮುಡಿಸಿಟ್ಟ ಅರಿವಿನ ದೀವಿಗೆಯೇ ಆಗಿದ್ದಾಳೆ!
ಮಾಲತಿ ಗೋರೆಬೈಲ್ ಬರೆದ “ಗುಬ್ಬಿ ಲಾಟೀನು” ಕವನ ಸಂಕಲನದ ಕುರಿತು ಕಲ್ಲೇಶ್‌ ಕುಂಬಾರ್‌ ಬರಹ

Read More

ಕುಸುಮಾ ಆಯರಹಳ್ಳಿ ಬರೆದ ಈ ಭಾನುವಾರದ ಕತೆ

ಮಹೇಶ ಅಷ್ಟು ಸಲ ವಿಧಾನಸೌಧಕ್ಕೆ ಹೋಗಿಬಂದು ಕೆಲಸ ಆಗಲಿಲ್ಲ ಅಂತ ಬೇಸರ ಮಾಡಿಕೊಂಡು, ಅಲ್ಲಿನ ವ್ಯವಸ್ಥೆ ಬಗ್ಗೆ ಹೇಳುವಾಗೆಲ್ಲ ನನಗೆ ಕೋಪ ಬರ್ತಿತ್ತು ಮೇಷ್ಟ್ರೇ. ಪ್ರಜೆಗಳನ್ನ ಬಾಗ್ಲಲ್ಲಿ ನಿಲ್ಸಿ ಜಾತಿ ಯಾವುದಯ್ಯಾ ಒಳಗೋಗಕೆ? ಅಂತ ಕೇಳಕಾ ಆ ಪುಣ್ಯಾತ್ಮರು ದೇಶಾ ಕಟ್ಟಿದ್ದು? ಅಂತ ಕೋಪ ಉಕ್ಕುಕ್ಕಿ ಬರದು. ರಾತ್ರಿ ನಿದ್ದೆ ಬರ್ತಿರಲಿಲ್ಲ. ಆಚೆ ಭಾಷಣದಲ್ಲಿ ಹೇಳೋದು ಒಂದು. ಒಳಗ್ ಮಾಡದೊಂದು. ಇದಕ್ಕೇ ಏನಯ್ಯಾ ನಿಮಗೆ ಸಂವಿಧಾನ ಬರ್ಕೊಟ್ಟಿದ್ದು? ನೊಂದವರೇ ನೋಯಿಸಿದರೆ ಅದಕ್ಕಿಂತಾ ಕೇಡುಂಟಾ ಲೋಕದಲ್ಲಿ?
ಕುಸುಮಾ ಆಯರಹಳ್ಳಿ ಬರೆದ “ಕಪಿಲೆ ಕಂಡ ಕತೆಗಳು” ಕಥಾಸಂಕಲನ ಇಂದು ಬಿಡುಗಡೆಯಾಗಲಿದ್ದು ಈ ಕೃತಿಯ “ದೈತ್ಯ” ಕತೆ ನಿಮ್ಮ ಓದಿಗೆ

Read More

ಅಚ್ಚರಿಯ “ಅಭಯಾ” ತೊಟ್ಟ ಮನಸ್ಸು: ದರ್ಶನ್‌ ಜಯಣ್ಣ ಸರಣಿ

ಮನಸಿನಲ್ಲಿ ಯಾಕೋ ತಳಮಳ ಶುರುವಾಯಿತು. ಇವರಾರೋ ಫೋನ್ ನಂಬರ್ ಶೇರ್ ಮಾಡುತ್ತಿಲ್ಲ, ಐಡೆಂಟಿಟಿ ಶೇರ್ ಮಾಡುತ್ತಿಲ್ಲ, ಕೇವಲ ನನ್ನ ವಿವರ ಪಡೆದು, ಇಲ್ಲಿಗೆ ಕರೆಸಿಕೊಂಡಿದ್ದಾರೆ, ಈಗಲೂ ಕಾಯಿಸುತ್ತಿದ್ದಾರೆ ಎಂದುಕೊಳ್ಳುವಷ್ಟರಲ್ಲಿ ಯಾರೋ ಪುಸ್ತಕಗಳನ್ನು ಹೊತ್ತು ಬರುತ್ತಿರುವುದು ಕಾಣಿಸಿತು. “ಓಹ್, ಇವರೋ ಅಭಯಾ ತೊಟ್ಟ ಮಹಿಳೆ!” ತಮ್ಮ ಮುಖವೊಂದನ್ನ ಕಾಣುವಹಾಗೆ ಬಿಟ್ಟು ಇಡೀ ದೇಹಕ್ಕೆ ಅಭಯಾ ತೊಟ್ಟಿದ್ದಾರೆ. ಕಾರಿನಿಂದ ಹೊರಗಡೆ ಇಳಿದೆ. “ಬುಕ್ಸ್?” ಎಂದು ಕೇಳಿದರು. “ಎಸ್” ಎಂದೆ. ನಲವತ್ತು ರಿಯಾಲ್ ಕೊಡಲು ಹೇಳಿದರು, ಕೊಟ್ಟೆ. ಹಣಪಡೆದು ಪುಸ್ತಕಗಳನ್ನು ಕೊಟ್ಟು ಹೊರಟುಬಿಟ್ಟರು!
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿಯ ಐದನೆಯ ಕಂತು

Read More

ಮಾತು ಹೆಪ್ಪುಗಟ್ಟಿ ಕಾವ್ಯವಾದ ಬಗೆ: ಡಾ.ಎ.ರಘುರಾಂ ಬರಹ

ಮಂಜುನಾಥ್ ಪಾಳ್ಯ ಅವರ ಎಲ್ಲ ಕವಿತೆಗಳನ್ನು ಓದಿದಾಗ ಅಲ್ಲಿನ ಭಾಷೆ, ವಸ್ತು, ನಿರ್ವಹಣೆಯ ಬಗ್ಗೆ ನೋಡಬೇಕು. ವಸ್ತು ಸಾಮಾಜಿಕವೇ ಆದರೂ ಕೂಡ ನಿರ್ವಹಣೆಯ ಸಂದರ್ಭದಲ್ಲಿ ಅದು ಭಿನ್ನ ಪಾತಳಿಗಳನ್ನು ಕಾಣುತ್ತದೆ. ಕವಿ ಪ್ರತಿಭಟಿಸುವಲ್ಲಿ ಕಾವ್ಯ ಬಂಡಾಯದ ಚಾಟಿ ಬೀಸುತ್ತದೆ. ಮೌನವಾಗಿ ಪ್ರೇಮಕ್ಕೆ ಮರುಳಾದಾಗ ಅಲ್ಲಿನ ಭಾಷೆ ತೀರ ಕೋಮಲವಾಗಿಬಿಡುತ್ತದೆ. ಭ್ರಷ್ಠತೆ, ಅತ್ಯಾಚಾರ, ಶೋಷಣೆ ವಿಚಾರಗಳು ಬಂದರೆ ಭಾಷೆ ಸ್ವಲ್ಪ ಒರಟಾಗಿಬಿಡುತ್ತದೆ. ಕಾವ್ಯ ಹೀಗೆ ಭಿನ್ನ ಪಾತಳಿಗೆ ಒಳಗಾಗುವುದು ಕವಿಯ ಸಂವೇದನಾಶೀಲ ಗುಣವನ್ನು ತೋರುತ್ತದೆ.
ಡಾ. ಮಂಜುನಾಥ ಪಾಳ್ಯ ಬರೆದ ‘ಹೆಪ್ಪುಗಟ್ಟಿದ ಮಾತುಗಳು’ ಕವನ ಸಂಕಲನದ ಕುರಿತು ಡಾ. ಎ. ರಘುರಾಂ ಬರಹ

Read More

ಕಲಾತ್ಮಕ ಕಟ್ಟಣೆಯ ‘ಅಸೀಮರೂಪಿ’ ಕತೆಗಳು: ರೇವಣಸಿದ್ಧಪ್ಪ ಜಿ.ಆರ್. ಬರಹ

ಯುವತಿಯೊಬ್ಬಳ ಮೆದುಳು ಅಪಘಾತದಿಂದಾಗಿ ಜರ್ಝರಿತವಾಗಿ ಬ್ರೈನ್ ಡೆಡ್ ಆಗಿ ಅವಳ ಉಸಿರು ನಿಲ್ಲುವುದು ಖಾತ್ರಿಯಾದಾಗ, ಮುದಿಯಾಗಿದ್ದ ತನ್ನ ದೇಹದಿಂದ ಆಕೆಯ ದೇಹಕ್ಕೆ ಬ್ರೈನ್ ಟ್ರಾನ್ಸ್ ಪ್ಲಾಂಟೇಷನ್ ಮಾಡುವ ಪ್ರಯೋಗಕ್ಕೆ ಒಳಗಾಗುತ್ತಾನೆ. ಮಾನಸಿಕವಾಗಿ ಗಂಡಾಗಿ, ದೈಹಿಕವಾಗಿ ಹೆಣ್ಣಾಗಿರುವ ಈತ ಒಂದು ವಿಷಮ ಗಳಿಗೆಯಲ್ಲಿ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯೂ ಆಗಿಬಿಡುತ್ತಾನೆ. ಕೊನೆಗೆ ತನ್ನ ಮನೆಯವರಿಂದಲೇ ಅವಜ್ಞೆಗೆ ಈಡಾಗುತ್ತಾನೆ….
ಕಂನಾಡಿಗಾ ನಾರಾಯಣ ಬರೆದ “ಅಸೀಮರೂಪಿ” ಕಥಾ ಸಂಕಲನದ ಕುರಿತು ರೇವಣಸಿದ್ಧಪ್ಪ ಜಿ.ಆರ್. ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ