ಮೌನ ಕಣಿವೆ…
ಯಾವುದಕ್ಕೆ ಅರ್ಥವಿದೆ?
ಅವಳ ನಗುವಿಗೆ? ಅವಳ ಮೌನಕ್ಕೆ?
ಅವಳ ಮಾತಿಗೆ? ಅವಳ ರೀತಿಗೆ?
ಯಾವ ಬುದ್ಧಿಮತ್ತೆಯ ಬೆನ್ನು ಹತ್ತಿದರೂ
ಯಾವ ಭಾಷಾಂತರದ ಕೋಶದೊಳಗಿಳಿದರೂ
ಹೊಳೆಯುವುದಿಲ್ಲ ಅರ್ಥ!
ಹೊಳೆದರೂ,
ಸತ್ಯವೋ? ಮಿಥ್ಯವೋ?
ಹೌದೋ? ಅಲ್ಲವೋ?
ಬರೀ ಸಂಶಯ, ಅನುಮಾನಗಳೇ
ಏಕಮುಖವಾಗಿ ಓಡುವ ಚಿಂತೆಗಳಿಗೆ
ಯಾವುದೇ ನಿಲ್ದಾಣವಿಲ್ಲ
ಗಾಳಿಗೆ ಗುದ್ದುವ ಚಟದ ಹಿಂದೆ
ಭ್ರಮಾಲೋಕದ ಆಯುಧಗಳೇ!
ಹೋಗಲಿ ಬಿಡು
ಒಂದು ನಿಟ್ಟುಸಿರು, ನಿರಾಳ!
ಎಲ್ಲ ಮರೆಸುವ ಕಾಲಕ್ಕೂ
ಗೊಂದಲವಿದೆ
ಅದೊಂದು ಮೌನ ಕಣಿವೆಯ
ಡೆಡ್ ಎಂಡ್!
ನಗುತ್ತೇನೆ, ಅಳುತ್ತೇನೆ
ಮಾತನಾಡುತ್ತೇನೆ, ಜೊತೆ ಇರುತ್ತೇನೆ ಕೂಡಾ!
ಆದರೆ,
ಎದೆಕೊರೆವ ಹುಳ ಮಾತ್ರ
ಸಾಯುತ್ತಿಲ್ಲ!
ನಾಗರಾಜ ಕಾಂಬಳೆ ಬೆಳಗಾವಿ ಜಿಲ್ಲೆಯವರು
ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಸಹಶಿಕ್ಷಕರು
ಓದುವುದು, ಕತೆ0ಕವಿತೆ ಬರೆಯುವುದು ಇವರ ಹವ್ಯಾಸಗಳು

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

