ದೂರ ದೂರ ಹೋದರೆ…
ನಾಯಕಿ ನೇಯ್ಗೆ ಮಾಡಿದ ಕೆಂಪು ವಸ್ತ್ರವನ್ನು ಶಾಲಾ ಕಟ್ಟಡದಲ್ಲಿ ಕಟ್ಟಲಾಗುತ್ತದೆ. ಈ ಎಲ್ಲ ಘಟನೆಗಳು ಜರುಗಿದರೂ ಒಮ್ಮೆಯೂ ನಾಯಕ-ನಾಯಕಿಯರ ಮುಖಾಮುಖಿಯಾಗಿರುವುದಿಲ್ಲ. ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವುದರಿಂದ ಉಂಟಾಗುವ ಕಲರವವನ್ನು ಮನೆಯಲ್ಲಿರುವ ನಾಯಕಿ ತನ್ನಜ್ಜಿಯ ಜೊತೆಗೆ ಕೇಳಿಸಿಕೊಳ್ಳುತ್ತ ತನ್ನಷ್ಟಕ್ಕೆ ಸಂಭ್ರಮಿಸುತ್ತಾಳೆ. ಶಿಕ್ಷಕ ನಾಯಕನಿಗೆ ಪ್ರತಿದಿನ ಮಕ್ಕಳ ಜೊತೆ ಊರಾಚೆ ಓಡಾಡುವುದು ವಾಡಿಕೆ. ಅವನು ಹೀಗೆ ಮಾಡುವುದನ್ನು ನಿರೀಕ್ಷೆಯಿಂದ ಕಾಯುವ ಆತಂಕ, ಲಜ್ಜೆ ಸಂತೋಷ ಇವುಗಳನ್ನು ಒಳಗೊಂಡ ನಾಯಕಿಗೆ ನಾಯಕನ ಪ್ರಥಮ ಭೇಟಿಯಾಗುತ್ತದೆ.
ಎ.ಎನ್. ಪ್ರಸನ್ನ ಬರೆಯುವ ಸಿನಿಮಾ ಸರಣಿ