ಭಾರತಿ ಹೆಗಡೆ ಬರೆದ ಈ ದಿನದ ಕವಿತೆ
“ಎಂದೂ ಮುಗಿಯದ ಹಾದಿಯ ತಿರುವಿನ ಪಥಿಕನೇ
ನಿನ್ನ ವಿಷದ ಬಟ್ಟಲಿನಲ್ಲದ್ದಿದ
ಗುಲ್ಕುಂದದ ಸಿಹಿ ನನ್ನ ಆವರಿಸುವುದಕ್ಕಿಂತ ಮುಂಚೆ
ದಯಪಾಲಿಸು ನನ್ನೇ ನಾ ಮರೆಯುವ
ಅಮಲಿನಂತಹ ಹೂವ ಪರಿಮಳವನ್ನು” -ಭಾರತಿ ಹೆಗಡೆ ಬರೆದ ಈ ದಿನದ ಕವಿತೆ
Posted by ಭಾರತಿ ಹೆಗಡೆ | Apr 4, 2026 | ದಿನದ ಕವಿತೆ |
“ಎಂದೂ ಮುಗಿಯದ ಹಾದಿಯ ತಿರುವಿನ ಪಥಿಕನೇ
ನಿನ್ನ ವಿಷದ ಬಟ್ಟಲಿನಲ್ಲದ್ದಿದ
ಗುಲ್ಕುಂದದ ಸಿಹಿ ನನ್ನ ಆವರಿಸುವುದಕ್ಕಿಂತ ಮುಂಚೆ
ದಯಪಾಲಿಸು ನನ್ನೇ ನಾ ಮರೆಯುವ
ಅಮಲಿನಂತಹ ಹೂವ ಪರಿಮಳವನ್ನು” -ಭಾರತಿ ಹೆಗಡೆ ಬರೆದ ಈ ದಿನದ ಕವಿತೆ
Posted by ಭಾರತಿ ಹೆಗಡೆ | Dec 16, 2021 | ದಿನದ ಪುಸ್ತಕ |
‘ಈಗ ಈ ಊರು ಶರಾವತಿ ನದಿಯ ನಡುವೆ ಅಲ್ಲಲ್ಲಿ ಇರುವ ಗುಡ್ಡವೊಂದರ ಮೇಲೆ ನಿರುಮ್ಮಳವಾಗಿ ಕೂತ ಪುಟ್ಟದೊಂದು ದ್ವೀಪದಂತೆ ಕಾಣುತ್ತದೆ. ಈಗ ಅಂದರೆ ಲಿಂಗನಮಕ್ಕಿ ಡ್ಯಾಮ್ ಆಗಿ ಶರಾವತಿ ನದಿಗೆ ಅಣೆಕಟ್ಟು ಕಟ್ಟಿದ ಮೇಲೆ ಜಲದ ರಾಶಿಯೇ ಒಂದೆಡೆ ನಿಂತಂತೆ ಭಾಸವಾಗುತ್ತದೆ. ಆದರೆ ಆಗ ಹಾಗಿರಲಿಲ್ಲ. ಶರಾವತಿ ಇಲ್ಲಿ ಸ್ವಚ್ಛಂದವಾಗಿ ಹರಿಯುತ್ತಿದ್ದಳು. ಅದರ ಸುತ್ತ ಕಾಡು, ಎದುರಿಗೆ ತೋಟ, ಅಂತಹ ಒಂದು ಸುಂದರ ಪ್ರದೇಶವದು. ಎಲ್ಲಿಗೇ ಹೋಗುವುದಿದ್ದರೂ ಒಂದೆರಡು ಮೈಲು ದೂರ ನಡೆದೇ ಹೋಗಬೇಕು’ – ವಿದ್ಯುತ್ ಹುಟ್ಟುವ ಮುನ್ನ ಶರಾವತಿ ನದಿ ದಂಡೆ ಹೇಗಿತ್ತು ಎಂಬುದನ್ನು ‘ಹರಿವ ನದಿ’ ಆತ್ಮಕತೆ ನಿರೂಪಿಸುತ್ತದೆ. ಭಾರತಿ ಹೆಗಡೆ ನಿರೂಪಿಸಿದ ಮೀನಾಕ್ಷಿ ಭಟ್ಟರ ಈ ಆತ್ಮಕತೆ ನಾಳೆ ಸಿದ್ಧಾಪುರದಲ್ಲಿ ಬಿಡುಗಡೆಯಾಗಲಿದ್ದು, ಈ ನಾಡು ವಿದ್ಯುತ್ ಲೋಕಕ್ಕೆ ತೆರೆದುಕೊಂಡ ಪಲ್ಲಟಗಳ ವಿವರವಾದ ನಿರೂಪಣೆಯಿದೆ. ಪುಸ್ತಕದ ಮತ್ತೊಂದು ಅಧ್ಯಾಯ ಇಲ್ಲಿದೆ.
Read MorePosted by ಭಾರತಿ ಹೆಗಡೆ | Dec 9, 2021 | ದಿನದ ಪುಸ್ತಕ |
ಶರಾವತಿ ನದಿಗೆ ಅಣೆಕಟ್ಟು ಕಟ್ಟುತ್ತಾರಂತೆ, ನಮ್ಮೂರು ಮುಳುಗುತ್ತದಂತೆ, ನಾಡಿಗೇ ಬೆಳಕು ದೊರೆಯಲಿದೆಯಂತೆ ಎಂಬೆಲ್ಲ ಸುದ್ದಿಗಳನ್ನು ಕೇಳುವಾಗ, ಮೀನಾಕ್ಷಿಯವರಿಗಿನ್ನೂ ಸಣ್ಣ ಹರೆಯ. ಈ ಎಲ್ಲ ಹೇಳಿಕೆಗಳ ನಡುವೆ ಒಂದಕ್ಕೊಂದು ಸಂಬಂಧವಿಲ್ಲ ಎಂದೆನಿಸುತ್ತಿತ್ತು. ಆದರೆ ಹುಟ್ಟಿದೂರು ತೊರೆಯಲೇಬೇಕಾಯಿತು. ಮುಂದಕ್ಕೆ ಎಷ್ಟೊಂದು ಊರುಗಳಲ್ಲಿ, ಕಷ್ಟಗಳ ಮೆಟ್ಟಿಲೇರಿ ಬದುಕನ್ನು ಕಟ್ಟಿಕೊಳ್ಳಬೇಕಾಯಿತು ಎಂಬುದೇ ‘ಹರಿವ ನದಿ’ಯಲ್ಲಿರುವ ಜೀವನಗಾಥೆ. ಅಮ್ಮ ಮೀನಾಕ್ಷಿ ಭಟ್ಟರ ಜೀವನದಲ್ಲಿ ಎದುರಾದ ಸವಾಲುಗಳು ಮಗಳು ಭಾರತಿ ಹೆಗಡೆಗೆ ಇಂದಿಗೂ ಸ್ಫೂರ್ತಿ. ಲೇಖಕಿಯೂ ಆಗಿರುವ ಅವರು ಅಮ್ಮನ ದನಿಗೆ ಅಕ್ಷರ ರೂಪ ನೀಡಿದ್ದಾರೆ. ಈ ಆತ್ಮಕತೆಯ ಒಂದು ಅಧ್ಯಾಯ ಕೆಂಡಸಂಪಿಗೆ ಓದುಗರಿಗಾಗಿ ಇಲ್ಲಿದೆ.
Read MorePosted by ಭಾರತಿ ಹೆಗಡೆ | Jul 26, 2021 | ವ್ಯಕ್ತಿ ವಿಶೇಷ |
ಕಮಲಕುಮಾರಿಯಾಗಿದ್ದ ಅವರು ಬಳ್ಳಾರಿ ಮೂಲದವರು. ಜಯಂತಿ ಎಂಬ ಹೆಸರಿನೊಂದಿಗೆ ಸಿನಿಮಾ ಲೋಕ ಪ್ರವೇಶಿಸಿದ ಬಳಿಕ, ಕನ್ನಡದ ಕ್ಲಾಸಿಕ್ಸ್ ಎಂದು ಗುರುತಿಸಿಕೊಳ್ಳುವ ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿಯೂ ನಟಿಸುವ ಅವಕಾಶ ಅವರಿಗೆ ದೊರೆತಿತ್ತು. ಅವರ ಸುದೀರ್ಘವಾದ ಸಿನಿಮಾ ಪಯಣವನ್ನು ನೆನಪಿಸಿಕೊಂಡು ಭಾರತಿ ಹೆಗಡೆ ಬರೆದ ಲೇಖನ ಇಲ್ಲಿದೆ.
Read MorePosted by ಭಾರತಿ ಹೆಗಡೆ | Aug 16, 2019 | ಸರಣಿ |
“ಎಡಬಟ್ಟು ಎಡಬಟ್ಟು ಮಾತನಾಡುವ, ಸೀರೆ ಉಟ್ಟುಕೊಳ್ಳುವ, ಕಳ್ಳ ನಾಟಾ ಸಾಗಿಸುವ ಈ ಶಾಮಣ್ಣ ಮಹಾನ್ ಯಕ್ಷಗಾನ ಪ್ರೇಮಿ. ಯಕ್ಷಗಾನಕ್ಕೆಂದು ಆ ಊರಿಗೆ ಬಂದವರೆಲ್ಲ ಇವರ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದರು. ಇಂದಿರಾ ಆ ತೋಟದ ಮನೆಗೆ ಬರುವುದಕ್ಕಿಂತ ಮುಂಚೆ ಅದು ಕಳ್ಳಕಾಕರ ಬೀಡಾಗಿತ್ತು. ಯಕ್ಷಗಾನ ಮೇಳ ಬಂದಾಗ ಯಕ್ಷಗಾನದವರಿಗಾಗಿ ಬಿಟ್ಟುಕೊಡುತ್ತಿದ್ದ.”
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
