ಬಾನು ಮುಷ್ತಾಕ್ ಕತೆಗಳ ಅನುವಾದದ ಬಗ್ಗೆ ಕೆಲವು ಟಿಪ್ಪಣಿಗಳು: ಬಿ.ವಿ.ರಾಮಪ್ರಸಾದ್ ಬರಹ
ದೀಪಾ ಅವರ ರೀತಿಯಲ್ಲೇ ಬಾನುರವರು ಕೆಲವು ಉರ್ದು ಪದಗಳನ್ನು ಯಾವುದೇ ವಿವರಣೆ ಇಲ್ಲದೇ ಅನುವಾದ ಮಾಡದೇ ಬಳಸುತ್ತಾರೆ. ಉದಾಹರಣೆಗೆ ಸಂಬಂಧ ಸೂಚಕ ಪದಗಳಾದ ಭಾಬಿ, ಅಮ್ಮಿ, ಆಪ, ಬೇಟಾ, ಅಮ್ಮಿಜಾನ್, ದಾದಿಮಾ. ಆದರೆ ಸಾಕಷ್ಟು ಬಾರಿ ಇವುಗಳ ಬದಲು ಅತ್ತಿಗೆ, ಅಮ್ಮ, ತಂದೆ, ಅನ್ನುವ ಕನ್ನಡ ಪದಗಳನ್ನೇ ಬಳಸಿದ್ದಾರೆ. ಇಸ್ಲಾಮ್‌ಗೆ ಸಂಬಂಧಿಸಿದ ಆಜಾನ್, ಮುತವಲ್ಲಿ, ಕಫನ್, ಗುಸುರ್, ದಫನ್, ಖಬರ್‌ಸ್ತಾನ್, ಇವುಗಳೂ ಕೂಡ ವಿವರಣೆಯಿಲ್ಲದೆ ಕೆಲವೊಮ್ಮೆ ಉರ್ದು ಮೂಲ ರೂಪದಲ್ಲಿ, ಕೆಲವೊಮ್ಮೆ ಉರ್ದು ಮೂಲರೂಪದ ಜೊತೆಗೆ ಕನ್ನಡದ ವಿವರಣೆಯೊಂದಿಗೆ ಬರುತ್ತವೆ.
ಬಾನು ಮುಷ್ತಾಕ್ ಕತೆಗಳ ಅನುವಾದದ ಕುರಿತು ಬಿ.ವಿ.ರಾಮಪ್ರಸಾದ್ ಬರಹ
