ಬದುಕಿನ ಪ್ರಶ್ನೆಗಳು..ಪರೀಕ್ಷೆಗಳು
ಅವನಿಗೆ ಮೊದಲಿನಿಂದಾನು ಮನೆಕಡೆಯಿಂದ ಸಮಸ್ಯೆ ಇತ್ತು. ಅಮ್ಮ, ಅಪ್ಪ, ವಿಕಲ ಚೇತನ ಅಣ್ಣ, ಮನೆಯಲ್ಲಿ ಸದಾ ಇರುವ ಜಗಳಗಳು ನೆನಪಾದವು. ನನಗೆ ನನ್ನ ಮನೆಯಲ್ಲಿರುವ ಬಡತನ, ರಿಸರ್ವಶನ್ ಕೊಟ್ಟರೂ ಇವಕ್ಕೆ ಮುಂದೆ ಬರೋದಕ್ಕೆ ಗೊತ್ತಿಲ್ಲ ಎಂಬ ಕುಹಕಗಳು ಕುದಿಯುತ್ತಿದ್ದವು. ಎರಡು ಮಗ್ಗಿನಲ್ಲಿ ಚಾ ಬಗ್ಗಿಸಿಕೊಂಡು ಕೋಣೆಗೆ ಬಂದರೆ ಅವನು ಹಾಸಿಗೆಯಿಂದೆದ್ದು ಗೋಡೆಗಾತು ಯಾವುದೋ ಮ್ಯಾಗಜಿನ್ ಹಿಡಿದು ಕೂತಿದ್ದ. ಮೊಬೈಲು, ಬ್ಯಾಟರಿ ದಿಕ್ಕಿಗೊಂದೊಂದು ಬಿದ್ದಿದ್ದವು.
ದಾದಾಪೀರ್ ಜೈಮನ್ ಬರೆಯುವ “ಜಂಕ್ಷನ್ ಪಾಯಿಂಟ್” ಅಂಕಣ