Advertisement

ದೇವಿಕಾ ನಾಗೇಶ್

ದಾದಾಪೀರ್ ಜೈಮನ್ ಅನುವಾದಿಸಿದ ವೆಲ್ಷ್ ಭಾಷಾ ಕವಿ ಶಾನ್ ಮೆಲಾಂಗಲ್ ಡ್ಯಾಫಿಡ್ ಕವಿತೆ

“ಇಡೀ ಜಗತ್ತಿನ ಹೊಟ್ಟೆಯೇ ಅದರೊಳಗೆ ಮುದ್ರೆಯೊತ್ತಿದ ಹಾಗೆ! ಜೀವದ ಗುರುತು. ಜೀವನದ ಗುರುತು. ಒಂದೊಂದೇ ಒದೆತ. ಒಂದೊಂದೇ ಬಾರಿ. ಆ ಒದೆತಗಳೆಲ್ಲವೂ ಚಾಕುವಿನೊಳಗೆ ತೂರಿ ಮನೆ ಮಾಡಿದ ಹಾಗೆ! ರಾತ್ರಿ ಊಟ ಮಾಡುವಾಗ ಕೈಗೆಲ್ಲಾ ಅನ್ನ ಸಾರಿನ ತುತ್ತಿನೆಂಜಲಂಟಿರುವಾಗ ಕಥೆ ಅವಳೊಳಗಿಂದ ಹೊಮ್ಮಿ ಬರುತ್ತದೆ. ಧಡೂತಿ ಹೆಂಗಸು. ಈ ಚಾಕು ಅವಳ ಹಳೆಯ ದೋಸ್ತಿ. ಇಡೀ ಜಗತ್ತಿನ ಉದರವೇ ಅದರೊಳಗೆ ಬೆಳೆಯುತ್ತಿರುವ ಬೆರಗು. ಈ ಚಾಕು. ಅಮ್ಮನ ಕೊನೆಯ ದಿನಗಳ ಹೊತ್ತಿಗೆ ಈ ಜಗತ್ತು ಮಾತ್ರ ಉಳಿದಿರುತ್ತದೆ. ಚಾಕು ಸವೆದಿರುತ್ತದೆ.” -ದಾದಾಪೀರ್ ಜೈಮನ್ ಅನುವಾದಿಸಿದ ವೆಲ್ಷ್ ಭಾಷೆಯ  ಶಾನ್ ಮೆಲಾಂಗಲ್ ಡ್ಯಾಫಿಡ್ ಕವಿತೆ

Read More

ದಾದಾಪೀರ್ ಜೈಮನ್ ಬರೆದ ಈ ದಿನದ ಕವಿತೆ

“ನಿಂತ ನೆಲ ಕಾಲ ಕೆಳಗೆ ಕುಸಿಯುವಾಗ ಆಕಾಶಕ್ಕೆ ಮುಖಮಾಡಿ ಮರವಾಗಿ ರೆಕ್ಕೆಬಿಚ್ಚುವ ವಿಶ್ವಾಸದಲ್ಲಿ
ಮಿಣುಕುಹುಳುಗಳ ಸಂಗ ಕಟ್ಟುವಾಗ ಅವರ ತವರ ಕತ್ತಲ ನೆನಪನ್ನೂ ಸೇರಿಸಿಕೊಳ್ಳುವ ಮಮತೆಯಲ್ಲಿ
ಎಂಥದೆಂತು ಘನಕಾರ್ಯಗಳ ಚರ್ಚೆ ಮುನಿಸುಗಳೆಲ್ಲ ಕೂಡಿ ಅನ್ನ ಬೇಯಿಸುವಾಗ ಆವಿಯಾಗುವ ಘಳಿಗೆಗಳಲ್ಲಿ
ಸ್ನೇಹಿತರ ಜೊತೆ ಹರಟುವ ಮೆಹಫಿಲ್ಲಿನಲ್ಲಿ ಆರಾಮಾಗಿ ಕವಿತೆ ಓದುವ ನಿನ್ನ ಪ್ರೀತಿಯಲ್ಲಿ” -ದಾದಾಪೀರ್ ಜೈಮನ್ ಬರೆದ ಈ ದಿನದ ಕವಿತೆ

Read More

ದಾದಾಪೀರ್ ಜೈಮನ್ ಬರೆದ ಈ ದಿನದ ಕವಿತೆ

“ನಾವು ಹೀಗೆ ಜೋಗಿ ಜಂಗಮರ ಹಾಗೆ
ಜಗವ ಸುತ್ತುವ ನಡುವೆ
ಚಾಯಿಗೋ ಅನ್ನಕ್ಕೋ
ಮುದ್ದಿಗೋ ನಿದ್ರೆಗೋ
ಕಾಮಕ್ಕೊ ಕನಸಿಗೋ
ಎಲ್ಲೋ ಒಂದು ಕಡೆಗೆ
ನಿಂತು
ಒಬ್ಬರನ್ನೊಬ್ಬರು ಕಂಡು
ಕೇಳಿಕೊಂಡಾಗ
ಹೇಳಬಹುದು ನೀನು”- ದಾದಾಪೀರ್ ಜೈಮನ್ ಬರೆದ ಈ ದಿನದ ಕವಿತೆ

Read More

ಬೆಂಕಿಯ ಮಳೆ

ಉಮಾ ಅವರಿದ್ದ ಓಣಿಯ ಬಳಿ ಹೋಗಿ ಒಬ್ಬ ಹೆಂಗಸನ್ನು ‘ಇಲ್ಲಿ ಉಮಾ ಅನ್ನೋರ ಮನೆ ಎಲ್ಲಿ ಬರತ್ತೆ?’ ಅಂತ ಕೇಳಿದೆ. ಅದಕ್ಕವರು ‘ಓಹ್, ಶಾಹೀನಾ ಬೇಗಂ ಮನೆನಾ? ಬನ್ನಿ ಬನ್ನಿ. ನಮ್ಮ ಮನೆ ಪಕ್ಕದ ಮನೆನೇ ಶಾಹೀನಕ್ಕನದು. ನನ್ನ ಹೆಸರು ನಾಗವೇಣಿ. ಅಕಿ ನನ್ನ ಗೆಣತಿ ಅದಾಳೆ.’ ಎನ್ನುತ್ತಾ ನನ್ನನ್ನ ಹಿಂಬಾಲಿಸಿ ಎಂಬುವಂತೆ ಮುಂದೆ ಮುಂದೆ ನಡೆದಳು. ಸ್ವಲ್ಪ ಹೊತ್ತು ನಡೆದ ಮೇಲೆ ಒಂದು ಪುಟ್ಟ ಜನತಾ ಮನೆಯಂತಿದ್ದ ಮನೆಯ ಮುಂದೆ ನಿಂತು ‘ಶಾಹೀನಕ್ಕ, ನಿನ್ನ ನೋಡೋಕೆ ಯಾರೋ ಬಂದಾರೆ…’ ಎಂದು ಕೂಗಿದಳು. ದಾದಾಪೀರ್‌ ಜೈಮನ್‌ ಬರೆಯುವ ಅಂಕಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ