ಹೀಗೊಂದು ‘ಭಿನ್ನ ಸಾಮಾನ್ಯ’ರ ಪ್ರೇಮಚರಿತೆ
‘ಜೀವನದಲ್ಲೊಂದು ಘಳಿಗೆ ಬಂದಿತು. ನಾನೊಬ್ಬ ಗೇ ಎನ್ನುವುದೇ ನನ್ನ ಟ್ರು ಐಡೆಂಟಿಟಿ ಎಂದು ಅನಿಸೋಕೆ ಶುರುವಾಯಿತು. ಆಗ ನಾನು ನನ್ನ ತಂದೆ ತಾಯಿಗೆ ಹೇಳಲೇಬೇಕಾಯಿತು. ಅಪ್ಪ ಮೊದಲಿಗೆ ನೀನು ಮನೆಗೆ ವಾಪಸ್ ಬರಬೇಕೆಂದರೆ ಅದೆಲ್ಲ ಬಿಡಬೇಕು ಎಂದರು. ಬಿಡುವುದಕ್ಕೆ ಅದೇನದು? ನನ್ನನ್ನ ನಾನಿರುವ ಹಾಗೆ ಒಪ್ಪಿಕೊಳ್ಳದಿದ್ದರೆ ನಾನು ಬರುವುದಿಲ್ಲ ಎಂದಿದ್ದೆ. ಕೂಡಲೇ ಫೋನ್ ಕಟ್ ಮಾಡಿದ್ದರು. ಆಮೇಲೇನಾಯಿತೋ ಏನೋ ಮತ್ತೆ ಅವರಿಂದ ಫೋನ್ ಬಂದಿತು… ನಾವಿಬ್ಬರು ಬೆಂಗಳೂರಿನಲ್ಲಿ ಜೊತೆಗಿರಲು ಶುರುಮಾಡಿದಾಗ ನಿನಗೊಬ್ಬಳು ಹೆಂಗಸು ಬೇಕೇ ಬೇಕು ಅಂದ್ರು.’
Read More