“ಚಾಂಡಾಳನೊಬ್ಬನ ಆತ್ಮ ವಿಮರ್ಶೆ”: ದೇವಿಕಾ ನಾಗೇಶ್ ಬರಹ
ಬಂಗಾಳದ ರಕ್ತ ಚರಿತ್ರೆಯನ್ನು ಲಕ್ಷಾಂತರ ಜನರ ನಿತ್ಯ ನರಕವನ್ನು ಪ್ರಭುತ್ವಗಳ ನಾಚಿಕೆಗೇಡಿನ ಹುಸಿತನವನ್ನು ಯಾವುದೇ ಮುಚ್ಚುಮರೆಯಿಲ್ಲದೆ ಈ ಕೃತಿ ತೆರೆದಿಡುತ್ತದೆ. ಹಳೆಯ ಕಳೆದ ಶತಮಾನದ ಕೊನೆಯಲ್ಲಿ ನಮ್ಮ ದೇಶದಲ್ಲಿ ಹಲವು ಹೆಸರಾಂತ ರಾಜಕಾರಣಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಡೆಸಿದ ತಂತ್ರಗಾರಿಕೆಯನ್ನು ಅವರ ಅಸಲಿ ಮುಖವನ್ನು ತೆರೆದಿಡುತ್ತದೆ. “ವಿರೋಧಿಗಳು ನನಗೆ ಪ್ರೀತಿ ತೋರಿಸಿದಾಗ ಸಾಧ್ಯವಾಗದ್ದು, ಕೋಪ ತೋರಿಸಿದಾಗ ಸಾಧ್ಯವಾಗಿದೆ. ನನ್ನ ಕೋಪವನ್ನು ಅವರು ಜೀವಂತವಾಗಿಟ್ಟಿದ್ದಾರೆ. ಅವರ ಕೋಪದ ಫಲ ಶ್ರುತಿಯೇ ನನ್ನ ಪುಸ್ತಕ.” ಬ್ಯಾಪಾರಿಯವರ ಮಾತಿದು.
ಮನೋರಂಜನ್ ಬ್ಯಾಪಾರಿಯವರ ಆತ್ಮಕತೆಯನ್ನು ಡಾ. ಎಚ್. ಎಸ್.ನಾಗಭೂಷಣ “ಚಾಂಡಾಳನೊಬ್ಬನ ಆತ್ಮ ವಿಮರ್ಶೆ” ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದು ಇದರ ಕುರಿತು ದೇವಿಕಾ ನಾಗೇಶ್ ಬರಹ ನಿಮ್ಮ ಓದಿಗೆ