Advertisement

ಎಸ್. ಗಂಗಾಧರಯ್ಯ

ಸೇವೆಯಲ್ಲಿ ಜೀವ ಸವೆಸುವ ಜೀವಗಳು…: ದೇವಿಕಾ ನಾಗೇಶ್‌ ಬರಹ

ಪ್ರತಿಯೊಂದು ಜೀವಿ ತನ್ನ ಅಸ್ತಿತ್ವದಿಂದ ವಿಶೇಷ ಅನ್ನಿಸಿಕೊಳ್ಳುವುದು ತಾನು ಮಾಡುವ ಸೇವೆಯಿಂದ ಎಂದು ನಂಬಿ ನಡೆಯುವ ಈ ಸನ್ಯಾಸಿನಿಯರು ಜಗತ್ತಿನ ಪಾಪ ತುಳಿಯುವ ಕಾಯಕ ತಮ್ಮದು ಎಂದು ನಂಬಿದವರು. ಹಾಗೆ ನೋಡಿದರೆ ಲಲ್ಲೇಶ್ವರಿ, ಅಕ್ಕಮಹಾದೇವಿ, ಮೀರಾ, ಸೂಫಿ ಸಂತ ಮಹಿಳೆಯರಾದ ಉಲೇಮ ರಬಿಯ ನಫೀಜಾ ತಮ್ಮ ಬದುಕಿನಲ್ಲಿ ಎದುರಾದ ಸಂಕಷ್ಟಗಳಿಗೆ ಮುಖಾಮುಖಿಯಾಗುತ್ತಲೇ ಜನ ಜೀವನದ ಸಂಕಷ್ಟಗಳಿಗೆ ಸ್ಪಂದಿಸುತ್ತ ಸಾಧನೆಯ ಪಥದಲ್ಲಿ ಮುನ್ನಡೆದವರು.
ಬಿ.ಎಂ. ರೋಹಿಣಿ ಹಾಗೂ ಮೋಲಿ ಮಿರಾಂದ ಬರೆದ “ಧರ್ಮ ಭಗಿನಿಯರು” ಕೃತಿಯ ಕುರಿತು ದೇವಿಕಾ ನಾಗೇಶ್‌ ಬರಹ

Read More

ಬೇರಿನಿಂದ ಬೆಳಕಿಗೆ: ಮಿತ್ರಾ ವೆಂಕಟ್ರಾಜ ಅನುವಾದಿತ ಕಾದಂಬರಿಯ ಕುರಿತು ದೇವಿಕಾ ನಾಗೇಶ್‌ ಬರಹ

‘ಒಂದು ಪುರಾತನ ನೆಲದಲ್ಲಿʼ ಕೃತಿ ಭಾರತ ಮತ್ತು ಈಜಿಪ್ಟ್‌ನಂತಹ ಎರಡು ಪುರಾತನ ನೆಲದ ಸಂಸ್ಕೃತಿಯ ತಾಯಿ ಬೇರುಗಳ ಸಂಶೋಧನೆಯ ಅತ್ಯುನ್ನತ ದಾಖಲೆಯಾಗಿದೆ. ಕಳೆದ ಆರು ಶತಮಾನಗಳಿಂದ ವಿಸ್ಮೃತಿಯೆಡೆಗೆ ದಾಪುಗಾಲಿಡುತ್ತಿರುವ ಕಡಲ ತೀರದ ಕೆಲವು ಮುಖ್ಯ ವ್ಯಾಪಾರ ಕೇಂದ್ರಗಳಲ್ಲಿನ, ಜನಜೀವನದ, ಸಾಂಸ್ಕೃತಿಕ ಸಾಮಾಜಿಕ ಬದುಕಿನ ಚಿತ್ರಣವನ್ನು ಪಾತ್ರಗಳ ಮೂಲಕ ಕಟ್ಟಿಕೊಡುವ ಇಲ್ಲಿನ ಕ್ರಮ ವಿನೂತನವಾಗಿದೆ.
ಹಿರಿಯ ಕಾದಂಬರಿಕಾರ್ತಿ ಮಿತ್ರಾ ವೆಂಕಟರಾಜ್ ಅನುವಾದಿಸಿರುವ ‘ಒಂದು ಪುರಾತನ ನೆಲದಲ್ಲಿʼ ಕಾದಂಬರಿಯ ಕುರಿತು ದೇವಿಕಾ ನಾಗೇಶ್‌ ಬರಹ

Read More

ದೇವಿಕಾ ನಾಗೇಶ್‌ ಬರೆದ ಈ ಭಾನುವಾರದ ಕತೆ

ಸಬಿತ ಚಿಕ್ಕಿಗೆ ಬರೆಯುವ ಪತ್ರದಲ್ಲಿ ಪದ್ದಜ್ಜನ ಮಾಮೂಲಿನ ಕ್ಷೇಮ ಸಮಾಚಾರ, ಉಭಯ ಕುಶಲೋಪರಿ, ಅಳಿಯಂದಿರಿಗೆ ಮೊಮ್ಮಕ್ಕಳಿಗೆ ಆಶೀರ್ವಾದದ ಜೊತೆಗೆ ಪತ್ರ ಮುಗಿಯುತಿದ್ದರೆ ಬಾಗಿದೊಡ್ಡನಿಗೆ ಬರೆಯಲು ಬಾಕಿ ಇನ್ನೊಂದಷ್ಟು ವಿಚಾರಗಳು ಇರುತ್ತಿದ್ದವು.
ದೇವಿಕಾ ನಾಗೇಶ್‌ ಬರೆದ ಈ ಭಾನುವಾರದ ಕತೆ “ಕತೆ ಕತೆ ಕಾರಣ” ನಿಮ್ಮ ಓದಿಗೆ

Read More

ಅಜ್ಜರಕಾಡು ಮತ್ತು ಅಜ್ಜ

ಆಸ್ಪತ್ರೆಗೆ ಸೇರಿಸಿದ ಒಂಬತ್ತು ದಿನದವರೆಗೆ ಶೆಟ್ರು ಅರೆ ಪ್ರಜ್ಞಾವಸ್ಥೆಯಲ್ಲಿದ್ದರು. ಅವರು ನಂಬಿಕೊಂಡು ಬಂದ ಮನೆ ದೈವವಾದ ಅಬ್ಬಗ-ದಾರಗೆಯ ದಿನನಿತ್ಯದ ಪೂಜೆ ಪುನಸ್ಕಾರ ಮಾತ್ರವಲ್ಲದೆ ವರ್ಷಾವಧಿ ಜಾತ್ರೆಯ ಎಲ್ಲ ವಿಧಿ ವಿಧಾನಗಳನ್ನು ನಿಷ್ಠೆಯಿಂದ ಮಾಡಿಕೊಂಡು ಬಂದವರು. ಈಗ ಆ ದೇವಾಲಯದ ಪೂಜೆ ಮಾಡುವ ಭಟ್ರು ವಿಠ್ಠಲಶೆಟ್ಟಿಗಾಗಿ ವಿಶೇಷ ಹೂವಿನ ಪೂಜೆಯನ್ನು ಮಾಡಿ ಅದರ ಗಂಧ ಪ್ರಸಾದವನ್ನು ಆಸ್ಪತ್ರೆಗೆ ತಂದು ವಿಠಲ ಶೆಟ್ರ ಹಣೆಗೆ ಹಚ್ಚಿದ ನಂತರ ಅವರ ದೇಹಸ್ಥಿತಿಯಲ್ಲಿ ತುಸು ತುಸುವೇ ಬದಲಾವಣೆ ಆಗಿ ಅವರು ಚೇತರಿಸತೊಡಗಿದ್ದರು.
ದೇವಿಕಾ ನಾಗೇಶ್‌ ಬರೆದ ಪ್ರಬಂಧ ನಿಮ್ಮ ಓದಿಗೆ

Read More
  • 1
  • 2

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ