Advertisement

ಎಸ್. ಗಂಗಾಧರಯ್ಯ

ಶಬ್ದ ಸಂವೇದನೆಯ ಒಳ ವಿನ್ಯಾಸ “ಘಾಚರ್ ಘೋಚರ್”: ದೇವಿಕಾ ನಾಗೇಶ್‌ ಬರಹ

“ಘಾಚರ್ ಘೋಚರ್” ಒಂದು ‘ನೀಳ್ಗತೆ ಎಂದು ಕೃತಿಯ ಲೇಖಕ ವಿವೇಕ ಶಾನಭಾಗ ಕರೆದರೂ ಇದು ಎರಡು ತಲೆಮಾರಿನ ಜೀವನಪಯಣದ ಓಟದಲ್ಲಿನ ಏಳುಬೀಳುಗಳನ್ನು ಪಲ್ಲಟವನ್ನೂ ಅಮೂಲಾಗ್ರವಾಗಿ ದಾಖಲಿಸುತ್ತದೆ. ‘ಘಾಚರ್ ಘೋಚರ್ʼ ಈ ಯುಗಳ ಪದ ನಮ್ಮ ಇಡೀ ಬದುಕೆ ಗೋಜಲಾಗಿರುವ ಕ್ರಮಕ್ಕೆ ಭಾವ ಪ್ರತಿನಿಧಿಯಂತೆ ಅನುರಣನಗೊಳ್ಳುತ್ತದೆ’ ಎಸ್. ಆರ್. ವಿಜಯಶಂಕರ್ ಮಾತಿದು. ಆದರೆ ಎಪ್ಪತ್ತು ಪುಟಗಳ ಕಿರು ಕಾದಂಬರಿ ಗಾತ್ರದ ಈ ಕಥೆಯ ಪಾತ್ರಗಳು ಒಂದು ಕುಟುಂಬದ ಭೂಮಿಕೆಯಿಂದ ಹೊರ ಜಗತ್ತಿಗೆ ವಿಸ್ತರಿಸಿಕೊಳ್ಳುತ್ತ ಸಾಗುವ ಚಲನೆ ಮೂಡಿಸುವ ತಲ್ಲಣ ದಂಗು ಬಡಿಸುವಂತಿದೆ.
ವಿವೇಕ ಶಾನಭಾಗ ಕಥಾಸಂಕಲನ “ಘಾಚರ್‌ ಘೋಚರ್”‌ ಕುರಿತು ದೇವಿಕಾ ನಾಗೇಶ್‌ ಬರಹ

Read More

ಭವದ ಮೆರವಣಿಗೆಯಲ್ಲಿ ಭಕ್ತಿ ಮತ್ತು ಭಜನೆ: ದೇವಿಕಾ ನಾಗೇಶ್‌ ಬರಹ

ಭಕ್ತಿ ಪಂಥವು ಸೇವೆಯ ಉದ್ದೇಶಕ್ಕಾಗಿ ದೇವಸ್ಥಾನ, ಗುರು ಶಾಲೆ ಅಥವಾ ಸಮುದಾಯಭವನಗಳಿವೆ ಎಂದು ತಿಳಿದಿತ್ತು. ಭಾರತದಲ್ಲಿ  ದೇವಾಲಯ, ಮಠ, ಮಂದಿರಗಳು, ಚರ್ಚ್, ಮಸೀದಿಗಳು ನೈಸರ್ಗಿಕ ವಿಕೋಪದ ನಂತರ ಸಂತ್ರಸ್ತರಿಗೆ ಪರಿಹಾರ, ಬಡ ಮತ್ತು ಕನಿಷ್ಠ ರೈತರಿಗೆ ಸಹಾಯ ಮಾಡುವುದು,  ಬಡವರಿಗೆ ಮನೆಗಳನ್ನು ನೀಡುವುದು, ಬಡ ಮಕ್ಕಳಿಗೆ ಉಚಿತ ಹಾಸ್ಟೆಲ್‌… ಇತ್ಯಾದಿ ಸೇವಾ ಕೈಂಕರ್ಯ ಕ್ಕೆ ತೊಡಗಿಕೊಳ್ಳುವುದು  ಇವತ್ತಿಗೂ ಮಾಡುತ್ತಿದೆ. 
ಭಕ್ತಿ ಚಳವಳಿಯ ಕುರಿತು ದೇವಿಕಾ ನಾಗೇಶ್‌ ಬರಹ ನಿಮ್ಮ ಓದಿಗೆ

Read More

ಶತಮಾನ ಕಂಡ ವಿಸ್ಮಯ; ಅನ್ನಪೂರ್ಣಾ ದೇವಿ: ದೇವಿಕಾ ನಾಗೇಶ್‌ ಬರಹ

“ಯಾವುದೇ ಜ್ಞಾನಾರ್ಥಿ ನಿನ್ನನ್ನು ಹುಡುಕಿ ಬಂದರೆ ನೀನು ಎರಡನೆಯ ಯೋಚನೆ ಮಾಡದೆ ನಿನ್ನಲ್ಲಿರುವ ಜ್ಞಾನವನ್ನು ಹಂಚಬೇಕು. ತನ್ನ ಕುಟುಂಬದ ಸದಸ್ಯರಲ್ಲದವರಿಗೆ ಸಂಗೀತ ಹೇಳಿಕೊಡಲು ಹಿಂಜರಿಯುವ ಉಸ್ತಾದರನ್ನು ನಾನು ನನ್ನ ಬದುಕಿನಲ್ಲಿ ಕಂಡಿದ್ದೇನೆ. ಬೇರೆ ಬೇರೆ ಗುರುಗಳಿಂದ ಕಲಿಯುವಾಗ ನಾನು ಅನುಭವಿಸಿದ ತೊಂದರೆ, ನೋವು ಮತ್ತು ಕಷ್ಟ ನಿನ್ನಿಂದ ಊಹಿಸಲು ಸಾಧ್ಯವಿಲ್ಲ. ಎಲ್ಲ ಕಷ್ಟಗಳ ನಡುವೆಯೂ ನನ್ನ ಭಿಕ್ಷಾ ಪಾತ್ರೆಯಲ್ಲಿ ಏನನ್ನು ಸಂಗ್ರಹಿಸಲು ಸಾಧ್ಯವಾಯಿತು ಅದನ್ನು ನಾನು ಧಾರಾಳವಾಗಿ ಹಂಚಿದ್ದೇನೆ.”
ಅಪೂರ್ವ ಸಂಗೀತಗಾರ್ತಿ ಅನ್ನಪೂರ್ಣಾ ದೇವಿಯವರ ಕುರಿತು ಅತುಲ್‌ ಮರ್ಚಂಟ್‌ ಜಟಾಯು ಬರೆದ “ಅನ್ನಪೂರ್ಣಾ ದೇವಿ” ಕೃತಿಯನ್ನು ಎನ್‌. ಸಂಧ್ಯಾರಾಣಿ ಕನ್ನಡಕ್ಕೆ ತಂದಿದ್ದು, ಈ ಕೃತಿಯ ಕುರಿತ ದೇವಿಕಾ ನಾಗೇಶ್‌ ಬರಹ ಇಲ್ಲಿದೆ.

Read More

ನೀರ ಮೇಲಣ ಗುಳ್ಳೆ-ಡಾಟರ್ ಆಫ್ ಪರ್ಷಿಯ: ದೇವಿಕಾ ನಾಗೇಶ್ ಬರಹ

ಈಕೆ ತನ್ನ ನೆಲದ ಸ್ಥಿತಿವಂತರು ಇಲ್ಲದವರ ಜೀವನ ಮಟ್ಟ ಸುಧಾರಣೆಗೆ ಕೈಜೋಡಿಸಿದರೆ ಸಾಮಾಜಿಕ, ರಾಜಕೀಯ, ಆಡಳಿತಾತ್ಮಕ ಬದಲಾವಣೆಗಳನ್ನು ತರಲು ಸಾಧ್ಯವಿದೆ… ಎನ್ನುವ ನಂಬಿಕೆ ಇದ್ದವರಾಗಿದ್ದಳು. ಈ ಹಿನ್ನೆಲೆಯಲ್ಲಿ ಅದ್ಭುತ ಯೋಜನೆಗಳನ್ನು ಹಾಕಿಕೊಂಡಿದ್ದಳು.. ಆಗ ಸ್ಪಂದಿಸಿದ ಹಲವರು ಈ ಸಾಧ್ಯತೆಯ ಪರಿಧಿಗಳನ್ನು ವಿಸ್ತರಿಸಿಕೊಂಡು ಆ ದೆಸೆಯಲ್ಲಿ ಸಕ್ರಿಯವಾದರು… ಇವಳ ಯೋಜನೆಗೆ ಕೈಜೋಡಿಸಿದರು.
ಸಟ್ಟರೆಹ್ ಫಾರ್ಮನ್ ಫರ್ಮ ಆತ್ಮಕಥೆ “ಡಾಟರ್ ಆಫ್ ಪರ್ಷಿಯಾ” ಕುರಿತು ದೇವಿಕಾ ನಾಗೇಶ್‌ ಬರಹ

Read More

“ಚಾಂಡಾಳನೊಬ್ಬನ ಆತ್ಮ ವಿಮರ್ಶೆ”: ದೇವಿಕಾ ನಾಗೇಶ್‌ ಬರಹ

ಬಂಗಾಳದ ರಕ್ತ ಚರಿತ್ರೆಯನ್ನು ಲಕ್ಷಾಂತರ ಜನರ ನಿತ್ಯ ನರಕವನ್ನು ಪ್ರಭುತ್ವಗಳ ನಾಚಿಕೆಗೇಡಿನ ಹುಸಿತನವನ್ನು ಯಾವುದೇ ಮುಚ್ಚುಮರೆಯಿಲ್ಲದೆ ಈ ಕೃತಿ ತೆರೆದಿಡುತ್ತದೆ. ಹಳೆಯ ಕಳೆದ ಶತಮಾನದ ಕೊನೆಯಲ್ಲಿ ನಮ್ಮ ದೇಶದಲ್ಲಿ ಹಲವು ಹೆಸರಾಂತ ರಾಜಕಾರಣಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಡೆಸಿದ ತಂತ್ರಗಾರಿಕೆಯನ್ನು ಅವರ ಅಸಲಿ ಮುಖವನ್ನು ತೆರೆದಿಡುತ್ತದೆ. “ವಿರೋಧಿಗಳು ನನಗೆ ಪ್ರೀತಿ ತೋರಿಸಿದಾಗ ಸಾಧ್ಯವಾಗದ್ದು, ಕೋಪ ತೋರಿಸಿದಾಗ ಸಾಧ್ಯವಾಗಿದೆ. ನನ್ನ ಕೋಪವನ್ನು ಅವರು ಜೀವಂತವಾಗಿಟ್ಟಿದ್ದಾರೆ. ಅವರ ಕೋಪದ ಫಲ ಶ್ರುತಿಯೇ ನನ್ನ ಪುಸ್ತಕ.” ಬ್ಯಾಪಾರಿಯವರ ಮಾತಿದು.
ಮನೋರಂಜನ್‌ ಬ್ಯಾಪಾರಿಯವರ ಆತ್ಮಕತೆಯನ್ನು ಡಾ. ಎಚ್. ಎಸ್.ನಾಗಭೂಷಣ “ಚಾಂಡಾಳನೊಬ್ಬನ ಆತ್ಮ ವಿಮರ್ಶೆ” ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದು ಇದರ ಕುರಿತು ದೇವಿಕಾ ನಾಗೇಶ್‌ ಬರಹ ನಿಮ್ಮ ಓದಿಗೆ

Read More
  • 1
  • 2

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ