ದೈನಿಕತೆಯಲ್ಲೆ ದೈವಿಕತೆ..
ಕಾಯ್ಕಿಣಿಯವರ ಕಾವ್ಯಗಳಲ್ಲಿ ದಂತಗೋಪುರದ ವಾಸಿ, ವಿಲಾಸಿ, ಪ್ರವಾಸಿಗರು ಕಾಣಸಿಗಲಾರರು; ಏಕೆಂದರೆ, ನಮ್ಮ-ನಿಮ್ಮ ನಡುವೆ, ಆಚೆ-ಈಚೆ, ಕಣ್ಣಿಗೆ ಬಿದ್ದರೂ ಬೀಳದಂತಿರುವ, ಅಥವಾ ನಾವು ನೋಡಿದರೂ ನೋಡದಂತೆ ಮುಂದೆ ಸಾಗುವುದಕ್ಕೆ ಯಾವ ಆಕ್ಷೇಪಣೆಯನ್ನೂ ಮಾಡದ- ಕಷ್ಟವೋ-ಕಾರ‍್ಪಣ್ಯವೋ ಎಲ್ಲಕ್ಕೂ ಎದೆಗೊಡುತ್ತ ಕಾಲ್ಪನಿಕ ರೇಖೆಗಳನ್ನು ಧಿಕ್ಕರಿಸುತ್ತ, ಅಲ್ಲಗಳೆಯುತ್ತ, ತಮ್ಮದೇ ಜೀವನಚಿತ್ರವ ಮೂಡಿಸುವ ಜೀವಭಂಡಾರಿಗಳು- ಕಾಯ್ಕಿಣಿಯವರ ಕಾವ್ಯಪ್ರಪಂಚವನ್ನು ನಿರಾಯಾಸ, ನಿರಪೇಕ್ಷ್ಯವಾಗಿ ಧರಿಸುತ್ತಾರೆ; ಭರಿಸುತ್ತಾರೆ.
ಜಯಂತ ಕಾಯ್ಕಿಣಿಯವರ “ವಿಚಿತ್ರಸೇನನ ವೈಖರಿ” ಕವನ ಸಂಕಲನದ ಕುರಿತು ಗೀತಾ ಹೆಗಡೆ ಬರಹ