ಚಿತ್ತಾಲರ ಕಾದಂಬರಿ ಪ್ರಪಂಚದಲ್ಲಿ ಒಂದೆರಡು ಹೆಜ್ಜೆ
ಕಥಾನಾಯಕ ಪುರುಷೋತ್ತಮ, ಆತನ ತಾಯಿ ಮತ್ತು ಬಳಗದ ನಡುವೆ ನಡೆಯುವ ಕಥಾನಕಗಳೇ ಈ ಕಾದಂಬರಿಯ ವಸ್ತು. ಜೊತೆಗೆ ಒಂದು ಮಹಾನಗರ ಮತ್ತೂ ದೊಡ್ಡದಾಗಿ ವಿಸ್ತರಣೆಯಾಗಬೇಕಾದರೆ ನಡೆಯುವ ತಲ್ಲಣಗಳು, ಹಣ ಅಧಿಕಾರದ ಮುಂದೆ ಮಾನವೀಯತೆ ಗೌಣವಾಗಿ ತನ್ನ ಸ್ವಾರ್ಥಕ್ಕಾಗಿ ಯಾವ ಕೆಲಸಕ್ಕೂ ಇಳಿಯಬಹುದಾದ ಮನುಜನ ಕ್ರೂರತನ, ತನ್ನ ಪ್ರೀತಿಯ ನೆಲವನ್ನು ಉಳಿಸಿಕೊಳ್ಳಲು ಎಲ್ಲಾ ಸ್ವಾರ್ಥಗಳ ಬಿಟ್ಟು ಮಾಡುವ ಹೋರಾಟ ಎಲ್ಲವೂ ಬಹಳ ಸುಂದರವಾಗಿ ನಿರೂಪಿತಗೊಂಡಿದೆ
ಓದುವ ಸುಖ ಅಂಕಣದಲ್ಲಿ ಯಶವಂತ ಚಿತ್ತಾಲರ ಮೂರು ಕೃತಿಗಳ ಕುರಿತು ಬರೆದಿದ್ದಾರೆ ಗಿರಿಧರ್ ಗುಂಜಗೋಡು