Advertisement

ಕೀರ್ತಿ ಬೈಂದೂರ್

ಜರ್ಕುಂ ಬುರ್ಕುಂ ಏನಜ್ಜೀ?: ಕೆ.ವಿ. ತಿರುಮಲೇಶ್ ಬರಹ

“ಕೇರಳದಿಂದ ಬರುವ ಈ ಚೂರಿಗಳ ಒಂದು ಬ್ರಾಂಡಿಗೆ ಹೆಚ್ಚಿನ ಬೇಡಿಕೆಯಿತ್ತು. ‘ಮುಂದಿನ ಸಲ ಬರುವಾಗ ನನಗೊಂದು ತಂದುಕೊಡಿ’ ಎನ್ನುತ್ತಿದ್ದರು. ಬಹುಶಃ ‘ತೋಟರ’ ಎನ್ನುವ ಬ್ರಾಂಡಿನದು. ಯಾಕೆ ಇಂಥ ಬೇಡಿಕೆಯೆಂದರೆ ನಮ್ಮೂರಿನ ತಯಾರಿಕೆಗಳಿಂತ ಇದು ಎಷ್ಟೋ ಮುಂದುವರಿದಿತ್ತು. ಇದಕ್ಕೆ ಬಳಸಿದ ಕಬ್ಬಿಣಕ್ಕೆ ಬೇಗ ತುಕ್ಕು ಹಿಡಿಯುತ್ತಿರಲಿಲ್ಲ. ಬಾಯಿ ಹರಿತವಾಗಿತ್ತು. ಅಲ್ಲದೆ ಇದರ ಹಿಡಿ ಉಳೆಕ್ಕೊಂಬಿನಿಂದ ಮಾಡಿದುದಾಗಿತ್ತು.”

Read More

ನಾವು ಮತ್ತು ನಮ್ಮ ಪಾತ್ರೆ ಪಗಡೆಗಳು: ಕೆ. ವಿ. ತಿರುಮಲೇಶ್ ಬರಹ

“ಹೀಗೆ ಟೊಣೆಯುವಾಗ ಒಳ್ಳೆ ಸಂಗೀತದ ಸ್ವರ ಬರಬೇಕು! ನಾನು ಕೇವಲ ‘ಸಾಕ್ಷಿ ಪ್ರಜ್ಞೆ’. ಆಮೇಲೆ ಸುರುವಾಗುವುದು ನಿಜವಾದ ಚೌಕಾಶಿ. ಅವರು ಕೊಡರು, ಇವರು ಬಿಡರು! ಆದರೆ ಮಾತ್ರ ವ್ಯಾಪಾರ ಎರಡೂ ಕಡೆಯವರಿಗೆ ಬೇಕು. ಹೊರಗಿನಿಂದ ಬರುವವರೆಲ್ಲ ನಮ್ಮನ್ನು ಸೋಲಿಸುತ್ತಾರೆ ಎನ್ನುವುದು ಅಮ್ಮನ ಭಯವಾಗಿತ್ತು. ಇದು ಬಹುಪಾಲಿಗೆ ನಿಜವಾದರೂ, ಈ ಬಡ ಕುಂಬಾರರು ಪಾಪದವರೇ ಎನ್ನುವುದು ನನ್ನ ನಂಬಿಕೆ.”

Read More

ಕೇಶವಿನ್ಯಾಸ: ಕೆ. ವಿ. ತಿರುಮಲೇಶ್ ಬರಹ

“ಆಗ ನಮ್ಮೂರಿನಲ್ಲಿ ಕ್ಷೌರದ ಅಂಗಡಿ ಇರಲಿಲ್ಲ. ಕ್ಷೌರಿಕರಿದ್ದರು. ಕ್ಷೌರ ಮಾಡಿಸಿಕೊಳ್ಳಬೇಕಾದವರು ಒಂದೋ ಕ್ಷೌರಿಕರ ‘ಕೊಟ್ಟಿಗೆ’ಗೆ ಹೋಗಬೇಕಾಗಿತ್ತು, ಇಲ್ಲವೇ ಅವರಿಗೆ ಹೇಳಿಕಳಿಸಬೇಕಾಗಿತ್ತು. ಹಳ್ಳಿಗಳಲ್ಲಿ ಕ್ಷೌರಿಕರಿಗೆ ಪಾರಂಪರ್ಯವಾಗಿ ನಿಗದಿಯಾದ ಗಡಿಗಳಿದ್ದುವು; ಆ ಗಡಿಯೊಳಗೇ ಅವರು ತಂತಮ್ಮ ಕಾರ್ಯ ನಿರ್ವಹಿಸುತ್ತಿದ್ದುದು. ಅವರು ಕೇವಲ ವೃತ್ತಿಯಿಂದಲೇ ಜೀವನ ಸಾಗಿಸುತ್ತಿದ್ದವರೂ ಅಲ್ಲ; ಅವರಿಗೆ ಅಲ್ಪ ಸ್ವಲ್ಪ ಹೊಲ ಮನೆಗಳೂ ಇದ್ದುವು. ಕ್ಷೌರಿಕರು ಹೆಚ್ಚಾಗಿ ಹಳ್ಳಿಯಲ್ಲಿ ತಮ್ಮ ಸಲಕರಣೆ ಚೀಲಗಳನ್ನು ಕಂಕುಳಲ್ಲಿರಿಸಿಕೊಂಡು ರೌಂಡ್ ಸುತ್ತುತ್ತಿದ್ದರು.”

Read More

ಫಿಯಟ್ ಲಕ್ಸ್…. ಬೆಳಕಾಗಲಿ: ಕೆ.ವಿ. ತಿರುಮಲೇಶ್ ಲೇಖನ

“ಈಗ ಈ ಚಿಮಿಣಿ ಕೈದೀಪಕ್ಕೆ ಬಂದರೆ, ಇದು ಬಹೂಪಯೋಗಿಯಾಗಿದ್ದರೂ, ಇದಕ್ಕೆ ಕೆಲವು ಮಿತಿಗಳೂ ಇದ್ದುವು. ಇದು ಗಾಳಿಗೆ ನಿಲ್ಲುವುದಿಲ್ಲವಾದ ಕಾರಣ, ಮನೆಯ ಹೊರಗೆ ಉಪಯೋಗವಿಲ್ಲ; ಮನೆಯೊಳಗೂ ಗಾಳಿ ಹೆಚ್ಚು ಬಂದರೆ ಇದು ಇದೀಗ ನಂದೀತು ಎನ್ನುವ ಆತಂಕ ಉಂಟುಮಾಡುತ್ತ ಇರುತ್ತದೆ. ಹತ್ತಿರ ಇರಿಸಿ ಪುಸ್ತಕ ಓದಲು ಪರವಾಯಿಲ್ಲ. ರಾತ್ರಿ ಊಟದ ಸಮಯ ನಾವು ಚಿಮಿಣಿಯ ತೂಗುದೀಪವನ್ನು ಉಪಯೋಗಿಸುತ್ತಿದ್ದೆವು.”

Read More

ಕೆ. ವಿ. ತಿರುಮಲೇಶ್ ಅನುವಾದಿಸಿದ ಮಿರೋಸ್ಲಾವ್ ಹೋಲುಬ್ ನ ಐದು ಕವಿತೆಗಳು

“ಇನ್ನೂ ಎಷ್ಟು ಚೆನ್ನಾಗಿರಬಹುದು ಈಲಿಯಡ್
ಅಗಮೆಮ್ನೋನ್ ಗೆ ಅವನದೇ ಚಹರೆಯಿತ್ತೆಂದು
ಸಿದ್ಧವಾದರೆ ಅಥವ ಹೆಲೆನಳ ಜೀವಶಾಸ್ತ್ರ
ಸಮಕಾಲೀನ ವಾಸ್ತವಗಳ ಪ್ರತಿಬಿಂಬಿಸಿದರೆ.”- ಕೆ. ವಿ. ತಿರುಮಲೇಶ್ ಅನುವಾದಿಸಿದ ಮಿರೋಸ್ಲಾವ್ ಹೋಲುಬ್ ನ ಐದು ಕವಿತೆಗಳು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ