Advertisement
ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

ಮಧು ವೈ.ಎನ್.‌ ಹೊಸ ಕಾದಂಬರಿ “ಇಂತಿ, ಪೂರ್ವಿ”ಯ ಕೆಲವು ಪುಟಗಳು

ಆ ಪದ ಕಿವಿಗೆ ಬೀಳುತ್ತಿದ್ದಂತೆ ಸೈಫೈ ಸಿನಿಮಾಗಳಲ್ಲಿ ರೋಬೋಗಳು ಬ್ಯಾಟರಿ ಡೌನಾಗಿ ತಾನಾಗೆ ಕುಸಿದಂತೆ ಶರತ್ ಕುಸಿದ. ಅವಳು ಹಂಗೇ, ಹಿಂದೆ ಮುಂದೆ ನೋಡದೇ ಅಂದುಬಿಡ್ತಿದ್ದಳು. ಜ್ಯಾಮಿಟ್ರಿ ಬಾಕ್ಸ್‌ ಮುಚ್ಚಳವನ್ನು ಹಲ್ಲುಗಳನ್ನೆಟ್ಟಿ ತೆಗೆಯುತ್ತಿದ್ದಳು. ಅಸೆಂಬ್ಲಿನಲ್ಲಿ ಆಕಳಿಸುವಾಗ ತುಟಿ ಹರಿಯುವಷ್ಟು ಅಗಲ ಬಾಯಿ ತೆರೆಯುತ್ತಿದ್ದಳು. ಕಿರುನಾಲಗೆಯಿಂದ ಎಂಜಲನ್ನು ಮೋಟಾರಿನಂತೆ ಹಾರಿಸುತ್ತಿದ್ದಳು. ಇಡೀ ಕ್ಲಾಸಿಗೆ ರಾಣಿ, ರೌಡಿ ಎರಡೂ ಆಗಿದ್ದಳು. ಶರತ್‌ಗೆ ಆಳದಲ್ಲಿ ಅವಳೆಂದರೆ ಭಯ. ತಾನು ಸುಮ್ಮನಿದ್ದರೂ ಆಗಿತ್ತು; ಇಂಥಾ ಬಜಾರ್‌ಗಿತ್ತಿಯನ್ನು ಕೆಣಕಿ ʼಕಳ್ಳʼ ಅನ್ನಿಸ್ಕೊಳಂಗಾಯ್ತಲ್ಲ ಎಂದು ಕೈಹಿಸುಕಿಕೊಂಡ.
ಮಧು ವೈ.ಎನ್.‌ ಹೊಸ ಕಾದಂಬರಿ “ಇಂತಿ, ಪೂರ್ವಿ”ಯ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಚಿತ್ರಾ ವೆಂಕಟರಾಜು ಅನುವಾದಿಸಿದ ಅಮೃತಾ ಪ್ರೀತಂ ಎರಡು ಕವಿತೆಗಳು

“ಬೆಳ್ಳಂಬೆಳಗ್ಗೆ ನಾವು
ಕಾಗದದ ಚೂರುಗಳಂತೆ
ಸಂಧಿಸಿದೆವು
ನನ್ನ ಕೈಗಳಿಂದ ಅವನ ಕೈಗಳನ್ನು
ಹಿಡಿದೆ
ಅವನು ತನ್ನ ತೋಳುಗಳಿಂದ
ನನ್ನ ಭುಜಗಳನ್ನು ಬಳಸಿದ” -ಚಿತ್ರಾ ವೆಂಕಟರಾಜು ಅನುವಾದಿಸಿದ ಅಮೃತಾ ಪ್ರೀತಂ ಎರಡು ಕವಿತೆಗಳು

Read More

ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

“ಇಲ್ಲಿ
ಈ ಕ್ಷಣದಲ್ಲಿ
ಯಾವ ಓಲೆಗಳೂ
ಶೂನ್ಯವ ಹೊತ್ತು ಸಾಗುವುದಿಲ್ಲ
ಉಮ್ಮಳಿಸುವ ಪದಗಳ ಭಾರದಲ್ಲಿ
ದಣಿಯುತ್ತವೆ
ದಣಿಸುತ್ತವೆ
ಇನ್ನಿಲ್ಲವಾಗುವ ನನ್ನ ಗುರುತುಗಳ ಅಳಿಸುತ್ತ” -ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

Read More

ಅಮ್ಮಮ್ಮನಾದ ಹೊತ್ತು…: ಡಾ. ಎಚ್.ಎಸ್.‌ ಅನುಪಮಾ ಮಾತುಗಳು

ಅಲ್ಲಿಂದ ಇಲ್ಲಿಯವರೆಗೆ ಅನುದಿನ ಪುಟ್ಟನ ಸುದ್ದಿ, ನೆನಪುಗಳಿಂದಲೇ ಬೆಳಕು ಹರಿಯುತ್ತದೆ, ಕತ್ತಲಾಗುತ್ತದೆ. ಅವ ಮಗುಚಿದ, ಕೂತ, ತೊದಲು ಮಾತನಾಡಿದ, ಎದ್ದ, ನಿಂತ ಎನ್ನುವುದೆಲ್ಲ ನಮ್ಮದೇ ಸಾಧನೆ ಎಂಬಂತಾಗಿದೆ. ಹಲ್ಲು ಕಡಿದು ಮುದ್ದು ಮಾಡುತ್ತ ಮಾಡುತ್ತ ಮುಂದಿನ ಹಲ್ಲು ಸವೆದೇ ಹೋದಂತಿದೆ! ಸಣ್ಣ ಅವಕಾಶ, ಪುರುಸೊತ್ತು ಸಿಕ್ಕರೂ ಬೆಂಗಳೂರಿಗೆ ಹೋಗಿ ಪುಟ್ಟನ ಕಂಡುಬರುವಾ ಅನಿಸುತ್ತದೆ. ಈ ಅಮ್ಮ ತಮ್ಮನ್ನಿಷ್ಟು ಪ್ರೀತಿಸಿದ್ದಳೋ ಇಲ್ಲವೋ ಎಂದು ನಮ್ಮ ಮಕ್ಕಳು ಶಂಕಿಸಬಹುದಾದಷ್ಟು ಬದುಕು ಸೂರ್ಯಮಯವಾಗಿದೆ!
ಡಾ. ಎಚ್.ಎಸ್.‌ ಅನುಪಮಾ ಕವನ ಸಂಕಲನ “ಅಮ್ಮಮ್ಮನ ಕವಿತೆಗಳು” ಕೃತಿಯ ಕುರಿತು ಅವರ ಬರಹ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ