Advertisement

ಅಲಕಾ ಕಟ್ಟೆಮನೆ

ಮರಗಳೂ ಮಾತಾಡುತ್ವೆ ಗೊತ್ತಾ!: ಕ್ಷಮಾ ವಿ.ಭಾನುಪ್ರಕಾಶ್ ಬರೆಯುವ ಕಥಾ ಸರಣಿ

“ಈ ವೀವಿಲ್ ಆಗ್ಲೀ, ಅಥವಾ ಯಾವುದೇ ಪ್ರಭೇದದ ಕೀಟವಾಗ್ಲೀ, ಅದರ ಬಾಯನ್ನು ಎಲೆಗಳಿಗೋ, ಹಣ್ಣು-ಕಾಯಿಗಳಿಗೋ ಹಾಕಿದ ಕ್ಷಣವೇ, ಅದರ ಜೊಲ್ಲು ಅಥವಾ ಎಂಜಿಲಿರತ್ತಲ್ಲಾ? ಅದರ ರುಚಿಯನ್ನ ಗುರುತಿಸಿದ ಮರಗಳು, ಕರೆಕ್ಟಾಗಿ ಅದು ಯಾವ ಪ್ರಭೇದದ ಕೀಟ ಅಂತ ಕಂಡುಹಿಡಿದು ಬಿಡತ್ವೆ. ಪ್ರತೀ ಜೀವಿಯ ಜೊಲ್ಲೂ ಜೀವರಾಸಾಯನಿಕವಾಗಿ ವಿಶಿಷ್ಟವೇ. ಈ ಜೊಲ್ಲಿನ ರುಚಿಯನ್ನು ಗುರುತಿಸಿದ ಮರಗಳು, ಆ ಕೀಟವನ್ನ ಓಡಿಸಿ, ತಮ್ಮ ಎಲೆಗಳನ್ನ, ಕಾಯಿಗಳನ್ನ ಕಾಪಾಡಿಕೊಳ್ಳೊಕೆ ಒಂದು ಪ್ಲಾನ್ ಮಾಡತ್ವೆ. ಏನು ಪ್ಲಾನ್ ಇರ್ಬಹುದು ಹೇಳಿ ನೋಡೋಣ?” ಎಂದು ಪ್ರಶ್ನಿಸಿದಳು.
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಒಂಭತ್ತನೆಯ ಕತೆ

Read More

ಬಿಸಿಬೆಳಕು -ತಂಪುಬೆಳಕಿನ ಸಂಗಮ, ಸಂಭ್ರಮ!: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ಝಗ್ಗನೆ ‘ಸೀರಿಯಲ್ ಸೆಟ್’ ಹತ್ತಿಕೊಂಡಂತೆ ಹತ್ತಿಕೊಂಡು, ಮತ್ತೆ ರಪ್ಪನೆ ಆಫ್ ಆಗಿ, ಮಿಂಚುಹುಳುಗಳ ಈ ಮಾಯಕ ಮೋಡಿಯಲ್ಲಿ ಸಮಯ ಉರುಳುತ್ತಿದ್ದುದೇ ತಿಳಿಯಲಿಲ್ಲ; ಅದರಲ್ಲೂ ಲಕ್ಷಾಂತರ ಮಿಂಚುಹುಳುಗಳ ಈ ನರ್ತನವನ್ನು ಮೊದಲಬಾರಿಗೆ ಕಣ್ದುಂಬಿಸಿಕೊಳ್ಳುತ್ತಿದ್ದ ಕಾವ್ಯಳ ಕುಟುಂಬ, ಬಿಟ್ಟ ಬಾಯಿ ಬಿಟ್ಟಂತೆಯೇ ಈ ಅಮೋಘ ಅನುಭವದಲ್ಲಿ ಕಳೆದುಹೋಗಿದ್ದರು. ನಡುನಡುವೆ ವಿಜ್ಞಾನದ, ಪರಿಸರದ ಬಗ್ಗೆ ಮಾತುಕತೆ, ಮತ್ತೆ ಅಚಾನಕ್ಕಾಗಿ ಮೌನ ಮತ್ತು ಮಾಯೆ! ಹೀಗೇ ಸಾಗಿತ್ತು.
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಎಂಟನೆಯ ಕತೆ

Read More

ಕೇಳಿದ್ದು ಸುಳ್ಳಾಗಬಹುದು, ರುಚಿಸಿದ್ದೂ ಸುಳ್ಳಾಗಬಹುದೇ?: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ಗೆಳತಿಯ ಜಾಣ ಪ್ರಶ್ನೆಗೆ ಉತ್ತರಿಸುತ್ತಾ “ಅದು ಹೇಗೆ ಗೊತ್ತಾ? ಈ ನಿಂಬೆ, ಹುಣಸೆಯಂತಹ ಹುಳಿ ಅಂಶ ಇರೋ ಆಹಾರಗಳಲ್ಲಿ ‘ಆಸಿಡ್’ ಅಂದ್ರೆ ‘ಆಮ್ಲ’ಗಳಿರತ್ವೆ ಅಲ್ವಾ? ಅಂತಹ ಹುಳಿಯಾದ ಆಹಾರ, ನಾಲಗೆಗೆ ತಗುಲಿದಾಗ, ನಾಲಗೆಯ ಆಮ್ಲೀಯತೆ ಹೆಚ್ಚುತ್ತೆ; ಈ ಬದಲಾದ ಸ್ಥಿತಿಯಲ್ಲಿ, ನಮ್ಮ ‘ಮಿರಾಕ್ಯುಲಿನ್’ ಇದ್ಯಲ್ಲ? ಅದು ರಾಸಾಯನಿಕವಾಗಿ ಪ್ರತಿಕ್ರಯಿಸಿ, ಸಿಹಿಯನ್ನು ಗುರುತಿಸುವ ರುಚಿಸಂವೇದಕಗಳನ್ನು ಆಕ್ಟಿವೇಟ್ ಮಾಡತ್ತೆ. ಹಾಗಾಗಿ, ಹುಳಿಯಂಶದ್ದೆಲ್ಲಾ ಸಿಹಿಯೆನಿಸೋಕೆ ಶುರುವಾಗತ್ತೆ. ಆದ್ರೆ ಈ ಎಫೆಕ್ಟ್ ಒಂದು ಅರ್ಧ ಘಂಟೆ, ೧ ಘಂಟೆ ಇರ್ಬಹುದಷ್ಟೇ. ನಮ್ಮ ಬಾಯಲ್ಲಿನ ಜೊಲ್ಲು ನಾಲಗೆಯ ಮೇಲಿದ್ದ ಈ ‘ಮಿರಾಕ್ಯುಲಿನ್’ ಅನ್ನೋ ‘ಗ್ಲೈಕೋಪ್ರೋಟೀನ್’ನ್ನ ತೊಳೆದು ಹಾಕಿ, ನಮ್ಮ ನಾಲಗೆ ಮೊದಲಿನ ಸ್ಥಿತಿಗೆ ಬರೋ ಹಾಗೆ ಮಾಡತ್ತೆ. ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಏಳನೆಯ ಕತೆ

Read More

ದೊಡ್‌’ ಅಮ್ಮ, ಚಿಕ್’ ಅಮ್ಮ!:  ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

“ಸಾಮಾನ್ಯವಾಗಿ ‘ಚಿಕನ್ ಪಾಕ್ಸ್’ ಒಮ್ಮೆ ಬಂದ್ರೆ ಮತ್ತೊಮ್ಮೆ ಬರಲ್ಲ ಕಾವ್ಯ. ಇದು ವೈರಲ್ ಜ್ವರ ಅಲ್ವಾ? ಮುಂಚೆ ನನಗೂ, ಅಕ್ಕನಿಗೂ, ಬಾವನಿಗೂ ನಮ್ಮ ನಮ್ಮ ಬಾಲ್ಯದಲ್ಲಿ ಈ ಚಿಕ್ಕ ‘ಅಮ್ಮ’ ಬಂದಿತ್ತು. ನಮ್ಮ ದೇಹಕ್ಕೆ, ನಮ್ಮ ರೋಗ ನಿರೋಧಕ ವ್ಯವಸ್ಥೆಗೆ ಈ ‘ವೈರಸ್’ನ ನೆನಪು ಖಂಡಿತವಾಗಿ ಇರತ್ತೆ. ಈ ವೈರಸ್ ಪುನಃ ಬಂದ್ರೆ, ಯಾವ ರೀತಿ ಅದನ್ನ ಹೊಡೆದು ಉರುಳಿಸಬೇಕು ಎಂಬ ಯುದ್ಧನೀತಿ ಗೊತ್ತಿರೋ ‘ಬಿ ಮತ್ತು ಟಿ ಮೆಮೊರಿ ಸೆಲ್ಸ್’ ಈಗಾಗ್ಲೇ ನಮ್ಮ ದೇಹದಲ್ಲಿ ಇರತ್ವೆ.”
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ಯಲ್ಲಿ ಆರನೆಯ ಕತೆ

Read More

ಬರ ನೀಗುವ ಕೆರೆಗೇಕೆ ಬರೆ: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ಇದನ್ನೆಲ್ಲಾ ಕೇಳುತ್ತಿದ್ದ ವಿದ್ಯಾರ್ಥಿಗಳಿಗಂತೂ, ತಮ್ಮ ತಮ್ಮ ಊರನ್ನು ಉಳಿಸಿಕೊಳ್ಳಲು, ತಮ್ಮ ಊರಿನ ಪರಿಸರ, ಕೆರೆ-ಕಟ್ಟೆಗಳನ್ನು ಕಾಪಾಡಲು ಪಣತೊಡಲೇಬೇಕು, ಕೈಲಾದದ್ದು ಮಾಡಲೇಬೇಕೆಂಬ ಉತ್ಕಟ ಉಮೇದು ಹುಟ್ಟಿತು. ವಿಚಾರ ಸಂಕಿರಣದ ಮುಖ್ಯ ಭಾಗವಾಗಿ ವಿದ್ಯಾರ್ಥಿಗಳಿಂದ ವಿಚಾರ ವಿನಿಮಯ, ತಮ್ಮ ಯೋಜನೆಗಳ ವಿವರಣೆ, ಸಾಕ್ಷ್ಯಚಿತ್ರ ಪ್ರದರ್ಶನ ಬಾಕಿಯಿತ್ತು. ಇಂತಹ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಮನಸ್ಪೂರ್ತಿಯಾಗಿ ಸಂಜೆಯವರೆಗೂ ಭಾಗವಹಿಸಿದ ಕಾವ್ಯ, ತನ್ನ ಮುಂದಿನ ಲೇಖನದಲ್ಲಿ ಕೆರೆಗಳ ಬಗ್ಗೆ ಏನು ಬರೆಯಬೇಕೆಂದು ತನ್ನ ನೋಟ್ ಬುಕ್ಕಿನಲ್ಲಿ ಗುರುತುಹಾಕಿಕೊಂಡಳು.
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ಯಲ್ಲಿ ಐದನೆಯ ಕತೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ