ಅಪೂರ್ಣವಲ್ಲ… ಪೂರ್ಣತೆಯೆಡೆಗೆ ಸಾಗುವ ದಾರಿ
ಕೊನೆಗೌಡ ಮತ್ತು ಪ್ರೀತಿ ಎಂಬ ಕಥೆ ವಿಶಿಷ್ಟವಾದದ್ದು. ಪ್ರೀತಿ ಎನ್ನುವುದು ಕೇವಲ ಮೇಲ್ವರ್ಗದ ಸೊತ್ತಲ್ಲ, ಪ್ರೀತಿಯ ನಿಜವಾದ ರೂಪ ಕಾಣಿಸುವುದು ಸಂಸಾರ ಆರಂಭವಾದ ಮೇಲೆ ಎಂಬುದನ್ನು ಸುಂದರವಾಗಿ ತಿಳಿಸಿಕೊಡುವ ಕಥೆ. ಅನಾಥನಾಗಿದ್ದ ಕಥಾನಾಯಕ ಹೆಂಡತಿಯನ್ನೇ ಸರ್ವಸ್ವವೆಂದು ಬಗೆದು ಅವಳಿಗೆ ಪ್ರೀತಿಯನ್ನು ಧಾರೆಯೆರೆಯುವ ಪರಿ ಮನೋಜ್ಞವಾಗಿ ಚಿತ್ರಿತವಾಗಿದೆ. ವೃದ್ಧಾಪ್ಯದಲ್ಲೂ ಪ್ರೀತಿ ಬಾಡದೆ ಮಾಗುತ್ತದೆ ಎಂಬುದನ್ನು ಲೇಖಕಿ ಸಮರ್ಥವಾಗಿ ನಿರೂಪಿಸಿದ್ದಾರೆ. ಕಾಲವು ಬರುವುದು ಒಂದು ದಿನ ಎಂಬ ಕೊನೆಯ ಕಥೆ ಸಾಮಾಜಿಕ ಸುಧಾರಣೆಯನ್ನು ಮಾಡಹೋಗಿ ಬಹಿಷ್ಕಾರಕ್ಕೆ ಒಳಗಾದವನ ಕಥೆ.
ಸುಧಾ ಎಂ. ಚೊಚ್ಚಲ ಕಥಾ ಸಂಕಲನ “ಅಪೂರ್ಣವಲ್ಲ” ಕುರಿತು ಮಹಾಬಲ ಭಟ್ ಅವರ ಬರಹ