`ಅಂತರಿಕ್ಷದಲ್ಲಿ ವಿಹಾ’ ಮಕ್ಕಳ ವೈಜ್ಞಾನಿಕ ಫ್ಯಾಂಟಸಿಯ ಲೋಕ: ಮಂಡಲಗಿರಿ ಪ್ರಸನ್ನ ಬರಹ
ವಿಹಾ ಮತ್ತು ಆಕೆಯ ಗೆಳೆಯ ಚಿಂಟು ಅವರ ಕೆಲ ವೈಜ್ಞಾನಿಕ ಸಂಭಾಷಣೆಗಳು ಆಸಕ್ತಿದಾಯಕ. ನಿದ್ದೆಯಲ್ಲೂ ಅಂತರಿಕ್ಷ, ರಾಕೇಟ್, ಪ್ಯಾರಾಚೂಟ್….. ಎಂದೆಲ್ಲ ಬಡಬಡಿಸುವ ವಿಹಾ, ಸ್ವೀಟೋ ಏಲಿಯನ್ಸ್ ಜೊತೆ ನಡೆಸುವ ಸಂಭಾಷಣೆ ಮಕ್ಕಳ ಯೋಚನಾ ಲಹರಿಯ ವಿಸ್ತಾರಕ್ಕೆ ಇಂಬುಕೊಟ್ಟಂತಿದೆ. ವಿಹಾಳ ಕನಸು, ಸ್ವೀಟೋ ಬಂದ ದಿನ, ಫ್ಲೈಯಿಂಗ್ ಸಾಸರ್‌ನಲ್ಲಿ ಏಲಿಯನ್ಸ್, ಅಂತರಿಕ್ಷದಲ್ಲಿ ವಿಹಾ, ಮೊದಲಾದ ಅಧ್ಯಾಯಗಳಲ್ಲಿ ವಿಹಾಳ ಸಾಹಸ, ಆಕೆಯ ಕಲ್ಪನಾ ಶಕ್ತಿ, ಧೈರ್ಯ, ಹೊಸತನ್ನು ಕಲಿಯಬೇಕು, ಮಾಡಬೇಕೆನ್ನುವ ಹಂಬಲದ ತುಡಿತವಿದೆ.
ವಸು ವತ್ಸಲೆ ಬರೆದ `ಅಂತರಿಕ್ಷಾದಲ್ಲಿ ವಿಹಾʼ ಮಕ್ಕಳ ಕೃತಿಯ ಕುರಿತು ಮಂಡಲಗಿರಿ ಪ್ರಸನ್ನ ಬರಹ