ಮಳೆಗಾಲದ ಆ ದಿನದ ನೆನಪು: ಮಾರುತಿ ಗೋಪಿಕುಂಟೆ ಸರಣಿ
ಬರಗೂರು ತಲುಪುವಷ್ಟರಲ್ಲಿಯೆ ಧಾರಾಕಾರವಾಗಿ ಮಳೆಸುರಿಯಲಾರಂಭಿಸಿತು. ರಾತ್ರಿಯ ಭಯಂಕರವಾದ ಕತ್ತಲೆ ಬಸ್ಸು ಇಳಿಯುವಷ್ಟರಲ್ಲಿ ಸ್ವಲ್ಪ ಮಳೆ ಕಡಿಮೆಯಾಗಿತ್ತು. ಸ್ವಲ್ಪ ದೂರಹೋಗುವಷ್ಟರಲ್ಲಿ ಇನ್ನಷ್ಟು ಮಳೆ ಕಡಿಮೆಯಾಯಿತು. ಎಲೆಯು ನೆನೆಯುವಂತಿರಲಿಲ್ಲ. ಬರಗೂರನ್ನು ಬಿಟ್ಟು ಸ್ವಲ್ಪ ಹತ್ತಾರು ಮಾರು ದೂರ ಹೋಗಿದ್ದೆವು. ಪಶ್ಚಿಮದ ದಿಕ್ಕಿನಿಂದ ಗಾಳಿಯ ಮೋಡಗಳು ದಟ್ಟವಾಗಿ ಬರುತ್ತಿವೆ. ಒಂದಕ್ಕಿಂತ ಒಂದು ಪದರು ಪದರಾಗಿ ಬರುತ್ತಿವೆ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹನ್ನೊಂದನೆಯ ಕಂತು ನಿಮ್ಮ ಓದಿಗೆ