ಸಂರಚನೆಯಲ್ಲಿ ಹೊಸತನ ಹುಡುಕುವ ಕಥೆಗಳು: ಎನ್.ಎಸ್.ಶ್ರೀಧರ ಮೂರ್ತಿ ಬರಹ
‘ಅಂತರ್ಗತ’ ದಲ್ಲಿ ಕಥೆಯಲ್ಲಿದ್ದಾತ ಎದುರಿಗೂ ಬರುತ್ತಾನೆ, ಚಿತ್ತಾಲರ ಕಥೆಯಂತೆ ಸೃಜನಶೀಲತೆಯ ನೆಲೆಗಳನ್ನು ಪರಿವೀಕ್ಷಿಸುವ ಇದು ಆ ಮೂಲಕ ಬದುಕಿನ ಮೂಲ ಆತಂಕಗಳನ್ನೂ ಗುರುತಿಸುತ್ತದೆ. ‘ತಾರೆ’ಕತೆಯಲ್ಲಿ ಕೂಡ ಇಂತಹ ಸೂಕ್ಷ್ಮಗಳನ್ನು ಗಮನಿಸ ಬಹುದು. ಅಜಿತ್ ಅವರ ಕಥನದ ಹಿರಿಮೆಯೆಂದರೆ ಅವರಿಗೆ ಓದುಗರ ಗ್ರಹಿಕೆಯ ಕುರಿತು ಇರುವ ನಂಬಿಕೆ. ಕಥನದ ಹಲವು ನೆಲೆಗಳನ್ನು ಅವರು ಮುಕ್ತವಾಗಿರಿಸಿ ಅವು ಓದುಗರ ಮನೋಭೂಮಿಕೆಯಲ್ಲಿ ಬೆಳೆಯಲು ಬಿಡುತ್ತಾರೆ. ‘ತುಂಬೀತೆ ಒಲವು’ ಈ ನೆಲೆಯಲ್ಲಿ ಬಹು ಯಶಸ್ವಿಯಾದ ಕಥೆ.
ಡಾ. ಅಜಿತ್ ಹರೀಶಿ ಹೊಸ ಕಥಾ ಸಂಕಲನ “ಉಪರಿ”ಯ ಕುರಿತು ಎನ್.ಎಸ್.ಶ್ರೀಧರ ಮೂರ್ತಿ ಬರಹ