ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ
“ಮನಸೆಂಬ ಮಾಯದ ಕನ್ನಡಿ
ಕನಸೆಂಬ ಬದುಕಿನ ಸೂರಿನಡಿ
ಇಂದು ಹೊಸತು
ಮನದ ನೋವುಗಳ ಹೊರದೂಡಿ
ಸಂತಸದ ಹೊಸ ತಂಪು ಹರಡಿ
ಮೈಯೊಳಗಿನ ಶೃಂಗಾರ
ಎದೆ ತುಳುಕಿ ಹೊರಗಿಣುಕಿರುವಾಗ
ಗೊತ್ತಿದ್ದರೆ ಹೇಳು, ಬಿಡುಗಡೆ ಬೇಡದ
ನನ್ನೀ ನೋವನುಂಡವರೆಷ್ಟು ಮಂದಿ?” -ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ