Advertisement
ಡಾ. ಎಂ. ವೆಂಕಟಸ್ವಾಮಿ

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.

ಕನ್ನಡಿಗರ ಕೈಯಲ್ಲಿರಲಿ ಒಂದು ಕನ್ನಡ ಪುಸ್ತಕ….

ಕನ್ನಡ ಭಾಷೆಯನ್ನು ಬಳಸುವುದೂ ಹಾಗೂ ಕನ್ನಡ ಕೃತಿಗಳನ್ನು ಓದುವುದೂ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ, ಕನ್ನಡ ಭಾಷೆಗೆ ಹಾಗೂ ಅದರ ಓದಿಗೆ ಕನ್ನಡಿಗರನ್ನು ಸೆಳೆಯಲು “ವೀರಲೋಕ”‌ ಪ್ರಕಾಶನದ ಸಂಸ್ಥೆ ಹಲವು ವಿಶಿಷ್ಠ ಪ್ರಯತ್ನಗಳನ್ನು ಮಾಡುತ್ತಿದ್ದು, ಅದರ ಭಾಗವಾಗಿ ನವೆಂಬರ್ ೧೫,೧೬, ಮತ್ತು ೧೭ರಂದು ಬೆಂಗಳೂರಿನಲ್ಲಿ “ಪುಸ್ತಕ ಸಂತೆ”ಯನ್ನು ಆಯೋಜಿಸಿದೆ. ಇದರ ಕುರಿತು ವೀರಲೋಕದ ಪ್ರಕಾಶಕರಾದ ವೀರಕಪುತ್ರ ಶ್ರೀನಿವಾಸ್‌ ಅವರೊಂದಿಗೆ ರೂಪಶ್ರೀ ಕಲ್ಲಿಗನೂರ್‌ ನಡೆಸಿದ ಸಂದರ್ಶನ ನಿಮ್ಮ ಓದಿಗೆ…

Read More

ಬದುಕಿಗಿಷ್ಟು ಸಾಕೆಂದರೆ ಆಗುವುದಿಲ್ಲವೆ?: ರೂಪಶ್ರೀ ಕಲ್ಲಿಗನೂರ್‌ ಬರಹ

ನಾನು ನಾನೆಂದು ಬದುಕಿದ ನನ್ನ ಬದುಕು ಎಲ್ಲಿ ಹೋಗುತ್ತದೆ… ಸಿಟ್ಟಿಗೆ, ಸಂತೋಷಕ್ಕೆ, ತ್ಯಾಗಕ್ಕೆ, ಭೋಗಕ್ಕೆ… ಏನಾದರೂ ಅರ್ಥ ಉಳಿಯಬಹುದ? ಕೆಟ್ಟವನಾಗಿದ್ದರೆ ನಾಲ್ಕು ಜನರೊಂದಿಗೆ ಸಿಟ್ಟು, ಒಳ್ಳೆಯವನಾಗಿದ್ದರೆ ಅದೇ ನಾಲ್ಕು ಜನರೊಂದಿಗೆ ಪ್ರೀತಿ… ಅಷ್ಟೇ… ಇಷ್ಟು ಬದುಕಿನಲ್ಲಿ ನಮಗಾಗಿ ನಾವು ಏನು ಮಾಡಿಕೊಂಡರೂ, ಅದೂ ನಮ್ಮ ಜೀವಿತಾವಧಿಯ ನೆಮ್ಮದಿಗಾಗಿ ಅಷ್ಟೇ ಅಲ್ಲದೇ ಬೇರೇನೂ ಅಲ್ಲ.
ಬದುಕಿನ ಕುರಿತು ರೂಪಶ್ರೀ ಕಲ್ಲಿಗನೂರ್‌ ಬರಹ ನಿಮ್ಮ ಓದಿಗೆ

Read More

ಜೀವಕ್ಕೊಂದು ಜೀವ…. : ರೂಪಶ್ರೀ ಕಲ್ಲಿಗನೂರ್‌ ಬರಹ

ಈಗ ಆಂಟಿ ಮಿಕ್ಕಿಯನ್ನು ವಾಕಿಂಗಿಗೆ ಕರೆದುಕೊಂಡು ಹೋಗುವುದಿಲ್ಲ. ಅಂಕಲ್‌ ಸಮಯ ಮಾಡಿಕೊಂಡು ಬೇಗ ಬಂದು ಆ ಕೆಲಸವನ್ನು ತಾವೇ ಮಾಡುತ್ತಾರೆ. ಆದರೆ ಚಂದೂ ಆಂಟಿಯ ಪ್ರೀತಿಯಿಂದ ಮಾತ್ರ ಮಿಕ್ಕಿಗೆ ರಿಯಾಯಿತಿ ದೊರೆತಿಲ್ಲ… ಯಾಕೆಂದರೆ ನಾಯಿಗಾಗಲೀ, ಮನುಷ್ಯನಿಗಾಗಲಿ ಯಾವತ್ತೂ ಯಾರದ್ದಾದರೂ ಸಾಂಗತ್ಯ ಬೇಕೆಬೇಕು. ಈಗ ವಯಸ್ಸಾದ ಕಾಲಕ್ಕೆ ಆಂಟಿಯೊಟ್ಟಿಗೆ ಬಹುತೇಕ ಇರುವುದು ಆ ನಾಯಿಯೆ. ಆದರೆ ಈಗ ಆ ನಾಯಿಗೂ ವಯಸ್ಸಾಗುತ್ತಿದೆ ಎನ್ನುವಾಗ, ಅವರ ಕಣ್ಣಲ್ಲಿ ತೆಳುವಾಗಿ ನೀರ ಪರದೆ ಕಾಣುತ್ತದೆ.
ರೂಪಶ್ರೀ ಕಲ್ಲಿಗನೂರ್‌ ಬರಹ ನಿಮ್ಮ ಓದಿಗೆ

Read More

ಮಂಜುನಾಯಕ ಚಳ್ಳೂರ ಕಥಾಲೋಕ…

“ಧಾರವಾಡದಲ್ಲಿ ಪಿಯುಸಿಯಲ್ಲಿದ್ದಾಗ ‘ಗಾಳಿಪಟ’ ಎಂಬ ಕತೆ ಬರೆದಿದ್ದೆ‌‌. ಅದಕ್ಕೂ ಮುನ್ನ ‘ಗೋಧಾವರಿ’ ಎಂಬ ಕತೆಯನ್ನು ಬರೆದು ಸ್ನೇಹಿತರ ಮುಂದೆ ಇಟ್ಟಾಗ, ಹಾಸ್ಟೇಲಿನ ದೋಸ್ತರೆಲ್ಲ ಅದನ್ನು ಓದಿ “ಚೊಲೋ ಬರ್ದಿ” ಎಂದು ಬೆನ್ನುತಟ್ಟಿದ್ದರು‌. ತುಷಾರ ಕಥಾ ಸ್ಪರ್ಧೆಗೆಂದು ಬರೆದಿದ್ದ ಕತೆ ಅದು. ಕೈಬರಹದಲ್ಲಿದ್ದ ಆ ಕತೆಯ ಪ್ರತಿಯನ್ನು, ಮತ್ತೊಮ್ಮೆ ಓದಿ ಕೊಡುವುದಾಗಿ ನನ್ನಿಂದು ಇಸಿದುಕೊಂಡು ಹೋದ ದೋಸ್ತ ಇನ್ನೂ ವಾಪಸ್ ಕೊಟ್ಟಿಲ್ಲ. ಮಂಜುನಾಯಕ ಚಳ್ಳೂರರ “ಫೂ” ಕಥಾಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಸಿಕ್ಕಿದ್ದು ಇದೇ ಸಂದರ್ಭದಲ್ಲಿ ಅವರ ಕಥಾಲೋಕದ ಕುರಿತು ರೂಪಶ್ರೀ ಕಲ್ಲಿಗನೂರ್‌ ಬರಹ

Read More

ಲೇಖಕರ ಮತ್ತು ಓದುಗರ ನಡುವಿನ ಕೊಂಡಿ ಹೊಸೆಯುತ್ತಾ…

ಪ್ರಕಾಶಕರು, ಲೇಖಕರ ಮತ್ತು ಓದುಗರ ನಡುವಿನ ಬಹುಮುಖ್ಯ ಕೊಂಡಿ. ಅವರ ಸಹಾಯವಿಲ್ಲದೇ ಯಾವುದೇ ಲೇಖಕರ ಕೃತಿಯು ಓದುಗರನ್ನು ತಲುಪಲು ಸಾಧ್ಯವಿಲ್ಲ. ನಮ್ಮ ಭಾಷೆಯಲ್ಲಿ ಯಾವೆಲ್ಲ ತರಹದ ಸಾಹಿತ್ಯ ಕೃಷಿ ನಡೆಯುತ್ತಿದೆ ಅನ್ನುವುದನ್ನು ಓದಿ, ಓದುಗರ ಮುಂದಿಟ್ಟಾಗಲೇ ಒಬ್ಬ ಓದುಗನಿಂದ ಮತ್ತೊಂದು ಓದುಗ ಹುಟ್ಟಿಕೊಳ್ಳುವುದು. ಅದರ ಜೊತೆಗೇ ಎಂಥ ಪ್ರಕಾರದ ಪುಸ್ತಕವನ್ನು ಓದುಗರ ಕೈಗಿಡಬೇಕು, ಮತ್ತೆ ಓದುಗನಿಗೆ ಪುಸ್ತಕ ತಲುಪಿಸುವ ಮಾರ್ಗಗಳೇನು ಎಂಬುದೂ ಈ ಹೊತ್ತಿನಲ್ಲಿ ಚರ್ಚಿಸಬೇಕಾದ ವಿಷಯ. ರೂಪಶ್ರೀ ಕಲ್ಲಿಗನೂರ್‌ ಬರಹ ಇಲ್ಲಿದೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ