Advertisement

ಸುಕನ್ಯಾ ಕನಾರಳ್ಳಿ

ಇಲ್ಲಿ ಎಲ್ಲವೂ ಸರಕೇ!: ಸುಕನ್ಯಾ ಕನಾರಳ್ಳಿ ಅಂಕಣ

ಕೆಲವೇ ನಿಮಿಷಗಳಲ್ಲಿ ಕಳ್ಳತನದಿಂದ ಅವರನ್ನು ಒಳಗೆ ಕರೆದುಕೊಂಡು ಒಳಗಿಂದ ಬಾಗಿಲು ಜಡಿದುಕೊಂಡು ಇಡೀ ಕಟ್ಟಡಕ್ಕೆ ಆಧಾರವಾಗಿರುವ ಗೋಡೆಯ ಭಾಗವನ್ನು ಉರುಳಿಸಿದಳು. ಮುಂದಿನದೆಲ್ಲ ರಣರಂಪ. ಅದರ ಕೆಳಗೆ ಮತ್ತು ಮೇಲೆ ಇದ್ದ ಫ್ಲಾಟಿನವರು ಬಂದು ಏನು ಏನು ಎಂದು ನೋಡುವ ಹೊತ್ತಿಗೆ ಗೋಡೆ ಉರುಳಿತ್ತು. ನಮ್ಮ ಕಾಲವೇ ಹಾಗೆ ಅಂತನ್ನಿಸುತ್ತೆ. ಉರುಳಿಸುವುದಾದರೆ ದಕ್ಷತೆಗೇನು ಕಮ್ಮಿ!
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಹದಿನಾಲ್ಕನೆಯ ಬರಹ

Read More

ಮುನ್ನೂರು ರಾಮಾಯಣಗಳು ಮತ್ತು…: ಸುಕನ್ಯಾ ಕನಾರಳ್ಳಿ ಬರಹ

ಶತಮಾನಗಳ ಅವಧಿಯಲ್ಲಿ ಈ ಭಾಷಾಪಟ್ಟಿಯಲ್ಲಿರುವ ಕೆಲವಂತೂ ಒಂದಕ್ಕಿಂತ ಹೆಚ್ಚು ರಾಮನ ಕಥೆಗಳನ್ನು ಹೊಮ್ಮಿಸಿವೆ. ಸಂಸ್ಕೃತ ಒಂದರಲ್ಲೇ ಕಾವ್ಯ, ಪುರಾಣಗಳ ರೂಪದಲ್ಲಿ ಇಪ್ಪತ್ತೈದಕ್ಕಿಂತಲೂ ಹೆಚ್ಚು ರಾಮಕಥೆಗಳಿವೆ. ಶಾಸ್ತ್ರೀಯ ಮತ್ತು ಜಾನಪದೀಯ ನೆಲೆಗಳೆರಡರಲ್ಲೂ ನಾಟಕ, ನೃತ್ಯ-ನಾಟಕ ಮತ್ತು ಇತರ ರೂಪಗಳನ್ನು ಸೇರಿಸಿದರೆ ಅದರ ಸಂಖ್ಯೆ ಇನ್ನೂ ಹೆಚ್ಚು. ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಸಂಸ್ಕೃತಿಗಳಲ್ಲಿ ಇರುವ ಎಲ್ಲ ಶಿಲ್ಪ, ಉಬ್ಬುಶಿಲ್ಪ, ಮುಖವಾಡ, ನೆರಳಿನಾಟ, ಮತ್ತು ಚಕ್ಕಳಗೊಂಬೆ ಪ್ರದರ್ಶನಗಳನ್ನೂ ಸೇರಿಸಬೇಕು.
ಎ. ಕೆ. ರಾಮಾನುಜನ್ನರ ಸಂಶೋಧನಾ ಲೇಖನ ‘ಮುನ್ನೂರು ರಾಮಾಯಣಗಳು, ಐದು ಉದಾಹರಣೆಗಳು ಮತ್ತು ಅನು-ವಾದದ ಬಗೆಗಿನ ಮೂರು ಚಿಂತನೆಗಳು’ ಕುರಿತು ಸುಕನ್ಯಾ ಕನಾರಳ್ಳಿ ಬರಹ

Read More

ಬುದ್ಧನಿಲ್ಲ ಇಲ್ಲಿ!: ಸುಕನ್ಯಾ ಕನಾರಳ್ಳಿ ಅಂಕಣ

ಮೂರನೆಯ ದಿನದ ಹೊತ್ತಿಗೆ ಹಕ್ಕಿಯಂತೆ ಹಾರಿದರೆ ಮತ್ತೆ ಮರಳುವುದಿಲ್ಲ ಎಂದು ನೂರು ಬಾರಿ ಶಪಥ ಮಾಡಿದ್ದೆ. ಅಷ್ಟರ ಹೊತ್ತಿಗೆ ಇಂಗ್ಲಿಷ್ ಪ್ರವಚನ ಯಾಕೋ ಕೃತಕವೆನ್ನಿಸಿತ್ತು. ಅದೇ ದನಿ ಹಿಂದಿಯಲ್ಲಿ ಕೇಳಿಸಿಕೊಳ್ಳುತ್ತಿದ್ದವರ ಕಡೆಯಿಂದ ಬಂದಾಗ ಅರೆ, ಇದರಲ್ಲಿ ಸಾಕಷ್ಟು ಜೀವಂತಿಕೆ ಇದೆಯಲ್ಲ ಅಂತನ್ನಿಸಿ ಕೊನೆಯ ಪ್ರವಚನವನ್ನು ಕೇಳಲು ಹಿಂದಿಯ ಕಡೆಗೆ ಹೋಗಲು ಪ್ರಯತ್ನಿಸಿದೆ. ‘ಆಚಾರ್ಯರನ್ನು ಕೇಳಿ,’ ಎಂಬ ಆದೇಶ ಬಂತು. ಸರಿ, ಕೇಳಿದೆ. ಪ್ರೈಮರಿ ಸ್ಕೂಲಿನಲ್ಲಿ ‘ಮಿಸ್, ಮಿಸ್, ನಂಗೆ ಬಾತ್ ರೂಮಿಗೆ ಹೋಗಬೇಕು, ಅರ್ಜೆಂಟೂ…’ ನೆನಪಿಗೆ ಬಂದು ಮುಖದಲ್ಲಿ ನಗು ಮೂಡಿತ್ತು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಹದಿಮೂರನೆಯ ಬರಹ

Read More

ಅಪ್ಪಿಕೋ ಭೂತಾಯಿ ಗೌರಾದೇವಿ!: ಸುಕನ್ಯಾ ಕನಾರಳ್ಳಿ ಅಂಕಣ

ಅಧಿಕಾರಿಗಳಿಗೆ ಈಗ ಪೇಚಿಗಿಟ್ಟುಕೊಂಡಿತು. ಸದ್ಯಕ್ಕೆ ಅಲ್ಲಿಂದ ತೊಲಗಿ ನಂತರ ಬಂದರೆ ಹೇಗೆ? ಆದಿವಾಸಿ ಹೆಂಗಸರಿಗೆ ಸರಕಾರದ ಕುತಂತ್ರಗಳೇನೂ ಅಪರಿಚಿತವಲ್ಲ. ಅವರ ಆಯುಧಗಳನ್ನು ಹೊತ್ತೊಯ್ದು ಕೊಡುವ ನೆಪದಲ್ಲಿ ತಾತ್ಕಾಲಿಕವಾಗಿ ಕಟ್ಟಿದ್ದ ಸೇತುವೆಯನ್ನು ಅದೇ ಅಸ್ತ್ರಗಳಿಂದ ಉರುಳಿಸಿದಾಗ ಸರಕಾರ ಇತ್ತ ಕಡೆಯಲ್ಲಿ, ಇವರೆಲ್ಲ ಅತ್ತ ಕಡೆಯಲ್ಲಿ. ಇಡೀ ರಾತ್ರಿ ಸರಕಾರದ ಮಂದಿ ಮತ್ತೆ ಕಾಡೊಳಗೆ ನುಸುಳದಂತೆ ಹೆಂಗಸರು ಕಾವಲಿದ್ದರು. ಮಾರನೆಯ ದಿನ ಹಳ್ಳಿಗೆ ಹಿಂತಿರುಗಿದ ಗಂಡಸರಿಗೆ ಆಶ್ಚರ್ಯ ಕಾದಿತ್ತು. ಮಾರ್ಚ್ ೩೧, ೧೯೭೪ ರಂದು ಕಣಿವೆಯಲ್ಲಿ ತಮಟೆ ಕಹಳೆಗಳ ಸಮೇತ ಬೃಹತ್ ಪ್ರದರ್ಶನ ನಡೆಯಿತು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಹನ್ನೆರಡನೆಯ ಬರಹ

Read More

ಎರಡು-ನಾಲಿಗೆಗಳ ನಡುವೆ ನಾನು!: ಸುಕನ್ಯಾ ಕನಾರಳ್ಳಿ ಅಂಕಣ

ಕರ್ನಾಟಕದಲ್ಲಿ ಕಲಿಯುವ ಮಕ್ಕಳ ಜೊತೆ ಒಂದು ಭಾವನಾತ್ಮಕ ಸಂಬಂಧವನ್ನು ಕಟ್ಟಿಕೊಳ್ಳುವುದಕ್ಕೆ ನನ್ನ ಕನ್ನಡ ಇನ್ನಿಲ್ಲದಂತೆ ಸಹಾಯ ಮಾಡಿದೆ. ಕೆಲವೊಮ್ಮೆ ಪರಿಕಲ್ಪನೆಗಳನ್ನ ಅರ್ಥಮಾಡಿಸುವಾಗ ಬಳಸಿಕೊಳ್ಳುತ್ತಿದ್ದ ದಿನನಿತ್ಯದ ಉದಾಹರಣೆಗಳಿಗೆ ಮತ್ತು ಹಾಸ್ಯಕ್ಕೆ ಕನ್ನಡವೇ ಜೀವವಾಗಿರುತ್ತಿತ್ತು. ಅದನ್ನೇ ಇಂಗ್ಲೀಷಿನಲ್ಲಿ ಹೇಳಿದ್ದಿದ್ದರೆ ಮಕ್ಕಳು ನಗುವುದಿರಲಿ, ನನಗೇ ಅಳು ಬರುತ್ತಿತ್ತೋ ಏನೋ. ಆದರೂ ಹೊರನಾಡಿನಿಂದ ಬಂದಿದ್ದ ಕೆಲವು ಮಕ್ಕಳಿಗೆ ಇಂಗ್ಲೀಷಿನಲ್ಲೂ ಹೇಳುವ ಪ್ರಯತ್ನ ಮಾಡುತ್ತಿದ್ದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಹನ್ನೊಂದನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ