ಯಾವುದೀ “ಮುಳ್ಳು, ನಾಲಿಗೆ…?”: ವಸಂತಕುಮಾರ್ ಕಲ್ಯಾಣಿ ಬರಹ
ಹಾಗಾಗಿ ಕೆಲವು ಗಂಡು ಮಕ್ಕಳು ಹೆಣ್ಣು ಮಕ್ಕಳು ಕೂತ ಭಾಗದಲ್ಲಿನ ಕೊನೆಯ ಬೆಂಚ್‌ಗಳಲ್ಲಿ ಕೂರಬೇಕಿತ್ತು. ಅವರ ಪೆನ್ನಿನಲ್ಲಿ ಇಂಕ್ ಖಾಲಿಯಾದಾಗ, ಒಬ್ಬಳು ಇನ್ನೊಬ್ಬಳಿಂದ ಸಾಲ ಪಡೆಯುತ್ತಿದ್ದಳು. ಅದು ಹೇಗೆಂದರೆ, ಪೆನ್ನಿನ ಮೇಲ್ ಭಾಗದ ತಿರುಪು ತಿರುಗಿಸಿಕೊಂಡು, ಕೆಳಮುಖವಾಗಿ ಇಟ್ಟುಕೊಂಡು ಪುನಃ ತಿರುಪು ಟೈಟ್ ಮಾಡುವಾಗ ಒಂದೊಂದೇ ತೊಟ್ಟು ಇಂಕ್ ಕೆಳಗೆ ಬೀಳುತ್ತಿತ್ತು, ಅದನ್ನು ಇಂಕ್ ಬೇಕಾದವರು ತಮ್ಮ ಪೆನ್ನನ್ನು ಸಿದ್ಧವಾಗಿಟ್ಟುಕೊಂಡು ನಾಜೂಕಾಗಿ ಒಳಗೆ ಬೀಳುವಹಾಗೆ ಮಾಡಿಕೊಂಡು, ಎಷ್ಟು ತೊಟ್ಟು ಬಿತ್ತು ಗಮನಿಸಿ, ಪುನಃ ಸಾಲ ವಾಪಸ್ ಮಾಡಬೇಕು.
ವಸಂತಕುಮಾರ್ ಕಲ್ಯಾಣಿ ಬರಹ