Advertisement
ಡಾ. ವಿನತೆ ಶರ್ಮ

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

ವನ್ಯಮೃಗಗಳ ಸಂರಕ್ಷಣೆ ಮತ್ತು ಟೂರಿಸಂ ನಡುವಿನ ದ್ವಂದ್ವಗಳು: ಡಾ. ವಿನತೆ ಶರ್ಮಾ ಅಂಕಣ

“ಒಂದು ನಿಸರ್ಗದಲ್ಲಿ ಸ್ವತಂತ್ರವಾಗಿ ಜೀವಿಸುತ್ತಿರುವ ಆನೆಗಳು ನಶಿಸುತ್ತಿರುವುದು. ಮತ್ತೊಂದು, ಮಾನವರ ಪೋಷಣೆಯಲ್ಲಿರುವ ಬಂಧಿತ ಮತ್ತು ಪಳಗಿದ ಆನೆಗಳನ್ನು ನಾವುಗಳು ಬಳಸಿಕೊಳ್ಳುತ್ತಿರುವ ಕ್ರೂರ ವಿಧಾನಗಳು, ಧೋರಣೆಗಳು, ಮತ್ತು ಅವುಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಸಲಹಿ ಪೋಷಿಸುವ ಮಾವುತರನ್ನು ನಿರ್ಲಕ್ಷಿಸಿರುವುದು. ಈ ಅಪಾಯಕಾರಿ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಆನೆಗಳ ಸಂತತಿಯನ್ನು ಕಾಪಾಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲಿಫೆಂಟ್ ಟೂರಿಸಂ ಚರ್ಚೆಗಳು ವ್ಯಾಪಕವಾಗಿವೆ. “

Read More

“ಆಸ್ಟ್ರೇಲಿಯಾ ಡೇ” ಹಿಂದಿನ ಥಳುಕು ಮತ್ತು ಹುಳುಕುಗಳು:ವಿನತೆ ಶರ್ಮಾ ಅಂಕಣ

ಬಹುತೇಕ ಅಬರಿಜಿನಿಗಳಿಗೆ ಇದು ದುಃಖದ ದಿನ. ಶೋಕಾಚರಣೆಯ ದಿನ. ಅದನ್ನು ಬಾಯಿಬಿಟ್ಟು ಹೇಳುವ ಧೈರ್ಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಅದನ್ನು ವ್ಯಕ್ತಪಡಿಸುತ್ತಾ ಅಬರಿಜಿನಿಗಳು ಅಲ್ಲಲ್ಲಿ ಪ್ರತಿಭಟನಾ ನಡಿಗೆಯನ್ನು ಆಯೋಜಿಸುತ್ತಾರೆ. ಅವರನ್ನು ಬೆಂಬಲಿಸುವ ಜನರು ಹೆಚ್ಚುತ್ತಿದ್ದಾರೆ.

Read More

ಸೌಂದರ್ಯ ಉಪಾಸನೆಯಲ್ಲಿ ಕಳೆದುಹೋದವರು: ವಿನತೆ ಶರ್ಮಾ ಅಂಕಣ

“ದಶಕದ ಹಿಂದೆ ಸಮುದ್ರಕ್ಕೆ, ಪಾರ್ಕುಗಳಿಗೆ, ಹೋದಾಗಲೆಲ್ಲಾ ನನ್ನಂತೆ ಕರಿಕಂದು ಚರ್ಮದ ಜನ ಕಂಡರೆ ಸಾಕು ಉತ್ಸಾಹ ಗರಿಗೆದರುತ್ತಿತ್ತು. ನಂತರ ಮನಸ್ಸು ಚಿಂತೆಗೊಳಗಾಗುತ್ತಿತ್ತು. ಬಿಳಿಯರಲ್ಲದ ಇತರರು ಅಷ್ಟಾಗಿ ಕಾಣದಿದ್ದದ್ದು ಇನ್ನಷ್ಟು ಎತ್ತಿಕಾಣುತ್ತಿತ್ತು. ಯಾಕೆಂದು ಪ್ರಶ್ನೆ ಮೂಡುತ್ತಿತ್ತು. ನೇರ ಕಾರಣವೆಂದರೆ ಪಾಳೆಗಾರಿಕೆಯಿಂದ ದೇಶವನ್ನು ಆಕ್ರಮಿಸಿಕೊಂಡು ಆಸ್ಟ್ರೇಲಿಯಾವನ್ನು ಬಿಳಿಯರ ಪಾಶ್ಚಿಮಾತ್ಯ ಸಮಾಜವನ್ನಾಗಿ ಪರಿವರ್ತಿಸಿದ್ದು.”

Read More

ಹವಾಮಾನ ಬದಲಾವಣೆ ಎಂಬ ಗೊಗ್ಗಯ್ಯ: ವಿನತೆ ಶರ್ಮಾ ಅಂಕಣ

ನಾವು ಈಗಲೂ ಪ್ರಜೆಗಳೇ, ಮುಂದೆಯೂ ಪ್ರಜೆಗಳೇ. ಈಗ ನಾವು ಕ್ರಮ ಕೈಗೊಳ್ಳದಿದ್ದರೆ ಈ ದಿನವೂ ಕೆಟ್ಟದ್ದೇ, ಮುಂದಿನ ದಿನಗಳಂತೂ ಇನ್ನೂ ಭಯಂಕರ. ನಮ್ಮ ಸರ್ಕಾರಗಳು, ಜನ ಪ್ರತಿನಿಧಿಗಳು ಈ ದಿನವನ್ನೂ, ನಾಳೆಯನ್ನೂ ಎರಡನ್ನೂ ಕುರಿತು ಆಲೋಚಿಸಬೇಕು, ಅಲ್ಲವೇ.”

Read More

“ಒಂಟಿ” ಅಲೆಮಾರಿ ರಾಬಿನ್ ಡೇವಿಡ್ಸನ್: ವಿನತೆ ಶರ್ಮಾ ಅಂಕಣ

ತನ್ನ ಪಯಣದಲ್ಲಿ ನೆಲದ, ಮಣ್ಣಿನ ಜೊತೆ, ತನ್ನ ಸುತ್ತಲೂ ಇದ್ದ ‘ಎಲ್ಲದರ’ ಜೊತೆ ತಾನು ಒಂದಾಗಿ ನಾನು ಎನ್ನುವುದನ್ನ ಮರೆತು ಪ್ರಕೃತಿಯ ಸೌಂದರ್ಯವನ್ನು ಎಲ್ಲಾ ರೂಪಗಳಲ್ಲೂ ನೋಡುತ್ತಾ ಲೀನವಾಗಿ, ಬೆರೆತುಹೋಗುವ ಕ್ಷಣಗಳು ಅವರನ್ನು ಇನ್ನಷ್ಟು ಮತ್ತಷ್ಟು ಬಹಳಷ್ಟು ಪ್ರಭಾವಿಸಿತು.”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ