ವಿನಾಯಕ ಅರಳಸುರಳಿ ಹೊಸ ಅಂಕಣ “ಆಕಾಶ ಕಿಟಕಿ” ಇಂದಿನಿಂದ ಶುರು
ಮೊದಲಿನಿಂದ ಖಾಲಿಯೇ ಇರುವ ಕುರ್ಚಿಗಿಂತ ನಡುವೆ ಒಂದಷ್ಟು ಹೊತ್ತು ಯಾರೋ ಕುಳಿತಿದ್ದು ಎದ್ದು ಹೋದ ಆಸನ ಹೆಚ್ಚು ಖಾಲಿಯಾಗಿ ಕಾಣುತ್ತದೆ. ನವ ಮಾಸ ತುಂಬಿದ ಬಳಿಕ ಜೀವದ ಬದಲಿಗೆ ಶೂನ್ಯವನ್ನು ಹಡೆದ ಒಡಲು ಹೊಸದಾದ ಖಾಲಿತನಕ್ಕೀಡಾಗುತ್ತದೆ. ಬಂದೇ ಬರುವನೆಂದು ನಂಬಿದ್ದ ಅತಿಥಿ.. ಬರಲೇ ಬೇಕಿದ್ದ ಅತಿಥಿ.. ಅವನ ಸ್ವಾಗತಕ್ಕೆ ಏನೆಲ್ಲ ತಯಾರಾಗಿತ್ತು! ತಂದಿಟ್ಟುಕೊಂಡ ಮಲ್ಲಿಗೆ ಮೆದುವಿನ ಟೊಪ್ಪಿಯಿತ್ತು. ಮೊಲದ ತುಪ್ಪಳದಂಥಾ ಅಂಗಿಯಿತ್ತು. ಅದರ ಅಂಚಲ್ಲಿ ಕೈಯಲ್ಲೇ ಹೊಲಿದ ಕಸೂತಿಯಿತ್ತು.
ವಿನಾಯಕ ಅರಳಸುರಳಿ ಹೊಸ ಅಂಕಣ “ಆಕಾಶ ಕಿಟಕಿ” ಇಂದಿನಿಂದ, ಮಂಗಳವಾರಗಳಂದು, ಹದಿನೈದು ದಿಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ ಪ್ರಕಟವಾಗಲಿದೆ