ಏಳು ಸುತ್ತಿನ ಕೋಟೆಯ ನಡುವೆ ಜಾಂಬಿಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ
ಜಾಂಬಿಯಾದ ಸುಮಾರು ಅರುವತ್ತೇಳು ಸಾವಿರ ಚದರ ಕಿಲೋಮೀಟರ್‌ಗಳಷ್ಟು ಕಾಡನ್ನು ಮೀಸಲು ಅರಣ್ಯ ಪ್ರದೇಶ ಎಂದು ಗುರುತಿಸಲಾಗಿದೆ. ಕಾಪರ್‌ಬೆಲ್ಟ್‌ನಲ್ಲಿ ವ್ಯಾಪಾರದ ಉದ್ದೇಶಕ್ಕಾಗಿಯೇ ಮರಗಳನ್ನು ನೆಡಲಾಗಿದೆ. ಇಲ್ಲಿ ಪ್ರಮುಖವಾಗಿ ಸಾಫ್ಟ್‌ವುಡ್ ಮರಗಳಿವೆ. ನೈಋತ್ಯ ಭಾಗದಲ್ಲಿ ಜಾಂಬೆಜಿ ನದಿತೀರದ ಪ್ರದೇಶಗಳಲ್ಲಿ ತೇಗದ ಮರಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ಜಾಂಬಿಯಾದಲ್ಲಿ ಅರಣ್ಯ ನಾಶವಾಗುತ್ತಿರುವುದಕ್ಕೆ ಪ್ರಮುಖ ಕಾರಣ ಅಡುಗೆಗಾಗಿ ಇದ್ದಿಲಿನ ಬಳಕೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಜಾಂಬಿಯಾ ದೇಶದ ಕುರಿತ ಬರಹ ನಿಮ್ಮ ಓದಿಗೆ