ಜ್ಞಾನಜ್ಯೋತಿಯಲಿ ಜಗವ ಬೆಳಗಿದನೀತ
ಹೊಸ ಬದುಕಿನ ಹುಡುಕಾಟದಲ್ಲಿ ಲಂಡನ್ ಗೆ ಬಂದಮೇಲೆ, ಹಿಂದಿನ ಸೈದ್ಧಾಂತಿಕ ಅನ್ವೇಷಕ ವೃತ್ತಿಗಿಂತ ಸಂಪೂರ್ಣ ಭಿನ್ನವಾದ ವೃತ್ತಿ ಆರಂಭಿಸುವ ಅವಕಾಶ ಸಿಕ್ಕಿತು, “ರಾಯಲ್ ಮಿಂಟ್” ಎನ್ನುವ ಸರಕಾರಿ ಸ್ವಾಮ್ಯದ ನಾಣ್ಯ ತಯಾರಿ ಕಂಪೆನಿಯ ಉದ್ಯೋಗಿಯಾಗಿ. ಕ್ರಿಸ್ತಶಕ 886ರಲ್ಲಿ ಪ್ರಾರಂಭಗೊಂಡು ದೀರ್ಘ ಇತಿಹಾಸ ಇರುವ ಮಿಂಟ್ ಕಂಪೆನಿಯ ಮಾತ್ರವಲ್ಲದೇ ಬ್ರಿಟನ್ನಿನ ಆರ್ಥಿಕ ಸ್ಥಿತಿಯೂ ಆ ಸಮಯದಲ್ಲಿ ಹದಗೆಟ್ಟಿತ್ತು. ಕಳ್ಳನಾಣ್ಯಗಳು ಎಲ್ಲೆಲ್ಲೂ ಚಲಾವಣೆಯಲ್ಲಿದ್ದವು. ಬಳಕೆಯಲ್ಲಿದ್ದ ನಾಣ್ಯಗಳಲ್ಲಿ ಐದರಲ್ಲಿ ಒಂದು ನಕಲಿ ಆಗಿರುತ್ತಿತ್ತು. ಮಿಂಟ್ ನ ಮೇಲ್ವಿಚಾರಕನಾಗಿ ಖೋಟಾ ಹಣದ ಜಾಲವನ್ನು ನ್ಯೂಟನ್ ಸಮರ್ಥವಾಗಿ ಪ್ರತಿಬಂಧಿಸಿದ.
‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಸರಣಿಯಲ್ಲಿ ಸರ್ ಐಸಾಕ್ ನ್ಯೂಟನ್‌ರ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ