ಉನ್ನತ ವಿಜ್ಞಾನ ಶಿಕ್ಷಣದಲ್ಲಿ ಕನ್ನಡ ಭಾಷೆ: ಡಾ.ಎಲ್.ಜಿ.ಮೀರಾ ಅಂಕಣ
ಮಾತೃ಼ಭಾಷೆ/ಪ್ರಾದೇಶಿಕ ಭಾಷೆಯಲ್ಲಿನ ಶಿಕ್ಷಣಕ್ಕೆ ಒತ್ತು ನೀಡುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿ – 2020 ಈ ವಿಷಯದಲ್ಲಿ ಹೊಸ ಬಾಗಿಲುಗಳನ್ನು ತೆರೆಯುವ ಸಾಧ್ಯತೆಯನ್ನು ತೋರಿಸಿದೆ. ವಿಶ್ವೇಶ್ವರಯ್ಯ ತಂತ್ರಜ್ಞಾನ ವಿಶ್ವವಿದ್ಯಾಲಯ (ವಿಟಿಯು)ದ ಉಪಕುಲಪತಿಗಳಾದ ಡಾ.ಕರಿಸಿದ್ಧಪ್ಪನವರ ಮುಂಚೂಣಿಯಲ್ಲಿ ಯಂತ್ರಜ್ಞಾನಗಳ (ಇಂಜಿನಿಯರಿಂಗ್) ವಿಷಯಗಳಲ್ಲಿ ಕನ್ನಡ ವಿಜ್ಞಾನ ಬೋಧನೆಯ ಪ್ರಯತ್ನಗಳು ಪ್ರಾರಂಭವಾಗಿವೆ. ಇಲ್ಲಿನ ಮೊದಲನೆಯ ವರ್ಷದ ಯಂತ್ರಜ್ಞಾನ ಶಿಕ್ಷಣದ ವಿದ್ಯಾರ್ಥಿಗಳಿಗೆ ಕನ್ನಡ ಪಠ್ಯಪುಸ್ತಕಗಳನ್ನು ಮುತುವರ್ಜಿ ವಹಿಸಿ ತಯಾರಿಸುತ್ತಿರುವುದು ಒಂದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ
