Advertisement

Category: ಅಂಕಣ

ಭಾವಾತಿರೇಕ ಎಂಬ ಖಾಯಿಲೆ: ಸುಕನ್ಯಾ ಕನಾರಳ್ಳಿ ಅಂಕಣ

ಈಗ ಬದುಕಿನ ಈ ಹಂತದಲ್ಲಿ ಅವರ ಕಾಳಜಿ ಒಂದೇ. ಬದುಕಿನುದ್ದಕ್ಕೂ ತಮ್ಮ ತಂಗಿಯರ ಬದುಕನ್ನು ದಡ ಹತ್ತಿಸಲು ಕಳೆದಾಗಿದೆ. ಅವರೆಲ್ಲ ತನ್ನನ್ನು ಪ್ರೀತಿಯಿಂದ ನೋಡಿಕೊಂಡರೂ ಸಹ ಈಗ ತನ್ನದೇ ಒಂದು ನೆಲೆ ಬೇಕೆನ್ನಿಸಿದೆ. ತನಗೆ ನಾಲ್ಕು ಗೋಡೆ, ಒಂದು ತಾರಸಿಯಾದರೂ ಇರುವ ಮನೆ ಕಟ್ಟಿಕೊಂಡು ಉಳಿದ ಬದುಕನ್ನು ಒಬ್ಬಳೇ ಕಳೆಯಲು ಒಂದು ಸೈಟು ಬೇಕು, ಅಷ್ಟೇ. ಅಸಂಖ್ಯಾತ ವಿದ್ಯಾರ್ಥಿಗಳು, ಸಾಹಿತ್ಯ ವಲಯದ ಹಲವಾರು ಆಪ್ತರು, ಭೋಪರಾಕ್ ಹೇಳುತ್ತಿರುವ ಅಪಾರವಾದ ಸ್ನೇಹಿತರ ಬಳಗ… ಇಷ್ಟೆಲ್ಲ ಇದ್ದು ಸುಮಾರು ಎಪ್ಪತ್ತರ ದಶಕದ ವಯಸ್ಸಿನ ಆಕೆ ಹೀಗೆ ಬಹಿರಂಗವಾಗಿ ಹೇಳಿಕೊಳ್ಳಬೇಕಾಯಿತೆ?
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತೊಂಭತ್ತನೆಯ ಬರಹ

Read More

ಬದುಕು ಈಗ ತುಂಬ ಸುಲಭ…: ವಿನಾಯಕ ಅರಳಸುರಳಿ ಅಂಕಣ

ಕಾಲ ಬದಲಾಯಿತು. ಆಧುನಿಕತೆ ಎದ್ದು ನಿಂತಿತು. ಕಟ್ಟಿಗೆ ಕಡಿಯುವುದು ಕಷ್ಟ ಎಂದು ಗೀಝರ್ ಬಂತು. ಮತ್ತಿ ಸೊಪ್ಪು ಸಿಗುತ್ತಿಲ್ಲ ಎಂದು ಶ್ಯಾಂಪೂ ಬಂತು. ಅಮ್ಮ ಊರಲ್ಲಿದ್ದಾಳೆ ಎಂದಾಗ ಜೊಮ್ಯಾಟೋ ಬಂತು. ಕಾಲಿಗೆ ಬದಲಾಗಿ ಕಾರು ಬಂತು. ಸಾಕ್ಷಾತ್ ದ್ವಾಪರ ಯುಗದ ಕಾಳಿಂಗವೇ ಮೆಟ್ರೋದ ರೂಪ ತಾಳಿ ಹರಿದು ಬಂತು. ಎಲ್ಲವೂ ಸುಲಭವಾಯಿತು. ಸುಲಲಿತವಾಯಿತು. ಇಡೀ ಪ್ರಪಂಚವೇ ಬೆರಳ ತುದಿಯಲ್ಲಿ ಸಿಕ್ಕಿಕೊಂಡಿತು. ಮನುಷ್ಯ ಲೋಕದ ಬಾವುಟವೊಂದು ಚಂದ್ರನ ಅಂಗಳದಲ್ಲಿ ಪಟಪಟಿಸಿತು. “ವಿ ಆರ್ ಅಡ್ವಾನ್ಸ್ಡ್.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ

Read More

ನೀಲು ಮತ್ತು ಲೂಸಿ: ಸುಕನ್ಯಾ ಕನಾರಳ್ಳಿ ಅಂಕಣ

ಲೂಸಿ ನಿಸರ್ಗದ ಕಂದ. ಹಳ್ಳಿಗಾಡಿನ ಮಳೆಬಿಸಿಲ ಕರುಣೆಯಲ್ಲಿ ಮಿಂದು ಹದವಾಗಿ ಅರಳಿದ್ದವಳು. ಕವಿ ಹೇಳುವಂತೆ ಅವಳಿಗೆ ಮೂರು ವರ್ಷವಿರುವಾಗ ಪ್ರಕೃತಿ ಈ ಸುಂದರ ಜೀವದ ಹೊಣೆ ಸಂಪೂರ್ಣವಾಗಿ ಹೊತ್ತುಕೊಳ್ಳಲು ಮುಂದೆ ಬಂತಂತೆ. ಬೆಟ್ಟ ನದಿ, ಗಿಡ ಮರ ಎಲ್ಲವೂ ತಮ್ಮ ಸತ್ವವನ್ನು ಅವಳಿಗೆ ಧಾರೆಯೆರೆದವಂತೆ. ಪ್ರಕೃತಿಯ ಅಂತಶ್ಚೇತನವೇ ಅವಳಲ್ಲಿ ಪೂರ್ತಿಯಾಗಿ ಮೈದಳೆಯಿತಂತೆ. ಇಷ್ಟೆಲ್ಲಾ ರೀತಿಯಲ್ಲಿ ನಳನಳಿಸಿದ ಲೂಸಿ ಬದುಕಿದ್ದು ಮಾತ್ರ ಕೆಲವೇ ವರ್ಷಗಳು. ಕೊನೆಯ ಐದನೆಯ ಪದ್ಯದಲ್ಲಿ ಕವಿ ಸಾವು ಮತ್ತು ಅಗಲಿಕೆಗಳು ತರುವ ವಿಷಾದದ ಆಳವನ್ನು ತೆರೆದಿಡುತ್ತಾನೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತೆಂಟನೆಯ ಬರಹ

Read More

ತಂತ್ರಜ್ಞಾನದ ಬಿಗಿಮುಷ್ಟಿಯಲ್ಲಿ ಕಲಿಕೆ: ಡಾ. ವಿನತೆ ಶರ್ಮ ಅಂಕಣ

ಆಧುನಿಕತೆಯನ್ನು ಹಿಗ್ಗಿಸುತ್ತಾ ನಾವೆಷ್ಟು ಮುನ್ನಡೆಯುತ್ತಿದ್ದೇವೊ ಅಷ್ಟೆ ಪ್ರಮಾಣದಲ್ಲಿ ನಮ್ಮ ಅವಲಂಬನೆಗಳೂ ಹೆಚ್ಚುತ್ತಿವೆ. ಕಾರ್ಪೊರೇಟ್, ಐಟಿ ವಲಯದಲ್ಲಿ ಕೆಲಸ ಮಾಡುವವರು ದಿನವೂ ಕುಡಿಯುವ ಕಾಫಿ ಅವಲಂಬನೆ, ನರ್ಸರಿ ಮಕ್ಕಳ ಕೈಯಲ್ಲಿ ಇರುವ ಐಪ್ಯಾಡ್ ಅವಲಂಬನೆ, ತನ್ನ ಇಡೀ ಯೂನಿವರ್ಸಿಟಿ ಡಿಗ್ರಿ ಕಲಿಕೆಯನ್ನು ಕೈಯಲ್ಲಿರುವ ಫೋನ್ ಮೂಲಕವೇ ಮಾಡಿ ಮುಗಿಸುವ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ, ಚಲಿಸುತ್ತಿರುವ ಬಸ್ಸಿನಲ್ಲಿ ಕೂತಿರುವ ಪ್ರಯಾಣಿಕನೊಬ್ಬ ಕೂತ ಜಾಗದಲ್ಲೆ ಲ್ಯಾಪ್-ಟಾಪ್ ಮತ್ತು ಹೆಡ್‌ಫೋನ್ಸ್ ಬಳಸುತ್ತಾ ಮೀಟಿಂಗ್‌ನಲ್ಲಿ ಭಾಗವಹಿಸುವುದು ಅದರ ಜೊತೆಗೆ ಸ್ಯಾಂಡ್ವಿಚ್ ತಿಂದು ಮುಂದಿನ ಮೀಟಿಂಗ್‌ಗೆ ತಯಾರಾಗುವುದು ಆಧುನಿಕತೆಯ ಕೆಲ ತಲ್ಲಣಗಳು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ವಿದ್ಯೆ ಹಾಗೂ ವಿವೇಕ – ಒಟ್ಟಿಗೆ ಇರುವುದಿಲ್ಲವೆ?: ಡಾ. ಎಲ್.ಜಿ. ಮೀರಾ ಅಂಕಣ

ವಿದ್ಯೆ ಮತ್ತು ವಿವೇಕದ ಪ್ರಶ್ನೆ ಬಂದಾಗ ನಮ್ಮ ಗ್ರಾಮೀಣ ಜನರಲ್ಲಿ ಸಾಕಷ್ಟು ವಿವೇಕವಿರುವುದನ್ನು ನಾವು ಗಮನಿಸುತ್ತೇವೆ. ಉದಾಹರಣೆಗೆ, ಭೂಮಿಯನ್ನು ಲಾಭ ತರುವ ಸರಕು ಎಂದು ನೋಡದೆ ತಾಯಿ ಎಂದು ಕರೆಯುವುದು, ಪರಿಸರವನ್ನು ಹಾನಿಗೊಳಪಡಿಸದಿರುವುದು, ಪ್ರಾಣಿ-ಪಕ್ಷಿ- ಪುಟ್ಟ ಪುಟ್ಟ ಜೀವಗಳಿಗೂ ತಮ್ಮ ಬದುಕಿನಲ್ಲಿ ಸ್ಥಳಾವಕಾಶ ಮಾಡಿಕೊಡುವುದು, ಮಣ್ಣು ಅಂದರೆ ನಗರದವರಂತೆ ಅಸಹ್ಯ ಪಟ್ಟುಕೊಳ್ಳದೆ ಇರುವುದು, ಮನೆಯಲ್ಲಿ ಮಾಡುವ ಸರಳ ಅಡಿಗೆಗಳಲ್ಲಿ ಸಂತೋಷವನ್ನು ಕಾಣುವುದು‌, ದೊಡ್ಡ ದೊಡ್ಡ ಕುಟುಂಬಗಳಲ್ಲಿ ಹೊಂದಿಕೊಂಡು ಹೋಗುವುದು‌ – ಇಂತಹ ಅನೇಕ ಜೀವನ ವಿವೇಕದ ನಿದರ್ಶನಗಳನ್ನು ನಾವು ಅವಿದ್ಯಾವಂತರಾದ ನಮ್ಮ ಹಳ್ಳಿಗರಲ್ಲಿ ಕಾಣಬಹುದು.‌
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ