ಲಕ್ಕೀ ನಂಬರ್ 55: ಸುಧಾ ಆಡುಕಳ ಅಂಕಣ
ಓಸಿಯೆಂಬುದು ಹೊಳೆಸಾಲಿನ ದಿನದ ಮಾತುಕತೆಯ ಭಾಗವಾಗಿಹೋಯಿತು. ಪಡ್ಡೆ ಹುಡುಗರು ಹಣ ಕಟ್ಟುವುದನ್ನು ನೋಡಿ ಕೆಲವು ವಯಸ್ಸಾದ ಗಂಡಸರು ರೂಪಾಯಿ, ಎರಡು ರೂಪಾಯಿಗಳನ್ನು ತಮ್ಮ ಹೆಂಡತಿಯರ ಕಣ್ತಪ್ಪಿಸಿ ಕಟ್ಟತೊಡಗಿದರು. ಆದರೆ ನಿಧಾನವಾಗಿ ಅವರಿಗೆಲ್ಲ ತಮ್ಮ ಹೆಂಗಸರೂ ಕೂಡ ಕವಳದ ಸಂಚಿಯಲ್ಲಿ ಬಚ್ಚಿಟ್ಟ ನಾಲ್ಕಾಣೆ, ಎಂಟಾಣೆಯನ್ನು ತಮಗೆ ಗೊತ್ತಿಲ್ಲದೇ ಕಟ್ಟುತ್ತಿರುವ ಸತ್ಯ ತಿಳಿಯಿತು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಇಪ್ಪತ್ತೆರಡನೆಯ ಕಂತು ನಿಮ್ಮ ಓದಿಗೆ