Advertisement

Category: ಅಂಕಣ

ಬದಲಾಗಿದ್ದು ಕ್ಯಾಲೆಂಡರ್ ಮಾತ್ರವೇನಾ?:  ವಿನಾಯಕ ಅರಳಸುರಳಿ ಅಂಕಣ

ಫಸ್ಟ್ ಬರುವ ನಿರೀಕ್ಷೆಯಲ್ಲಿ ಶಾಲೆ-ಕಾಲೇಜುಗಳೇ ಮುಗಿದವು. ಏಳು, ಎಂಟಕ್ಕೆ ಏಳೇಳುತ್ತ ಹಗಲುಗಳೇ ಸವೆದವು. ಕೊನೆಯ ಬೆಂಚಿನ ಹುಡುಗಿಯ ಬದುಕಿನಲ್ಲಿ ಹೊಸ ವರ್ಷ, ಗಂಡ, ಮಕ್ಕಳೂ ಬಂದಿದ್ದಾಯಿತು. ಬೈಸಿಕೊಳ್ಳುತ್ತಲೇ ಅಮ್ಮ ಎದ್ದು ಹೋದಳು. ಕೆಲಸ ಮಾಡಿಸಿಕೊಳ್ಳದೆಯೇ ಅಪ್ಪ ಹೊರಟು ಹೋದ. ಬಂಕ್ ಮಾಡುತ್ತಿರುವಾಗಲೇ ಕಾಲೇಜಿನ ಕೊನೆಯ ದಿನ ತಲುಪಿದೆವು. ಹೊಸ ಕ್ಯಾಲೆಂಡರಿನ ಮೊದಲ ಪುಟ ತಿರುವುವ ಮೊದಲೇ ಗಂಡ/ಹೆಂಡತಿಯ ಜೊತೆ ಆಗಲೇ ಮೂರು ಬಾರಿ ಜಗಳವಾಡಿಯಾಗಿದೆ. ಅದೇ ಸೋಮಾರಿತನ, ಅದೇ ಅಶ್ರದ್ಧೆ, ಅದೇ ಸುಮ್ಮನೆ ವ್ಯಯವಾಗುವ ಮುನ್ನೂರರವತೈದು ದಿನಗಳ ಮತ್ತೊಂದು ಆವರಣಕ್ಕೆ ‘ಹೊಸ ವರ್ಷ’ ಎನ್ನುವ ಹೆಸರು ಕೊಟ್ಟು ಕುಣಿಯುತ್ತ, ಕುಡಿಯುತ್ತ, ಕೇಕೆ ಹಾಕುತ್ತ ಪ್ರವೇಶಿಸಿದೆವು!
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

Read More

ಹೊಸ, ಹಳೇ ಕಥೆಗಳಾಗುವ ನಾವು: ವಿನತೆ ಶರ್ಮ ಅಂಕಣ

ಹೊಸ ವರ್ಷದ ಮೊದಲ ದಿನದಂದು ಸಿಡ್ನಿ ಆಕಾಶದಲ್ಲಿ ಮೋಡಗಳು, ಸಣ್ಣನೆ ಮಳೆ, ಚಳಿ. ಸಮುದ್ರ ಭುಸುಗುಡುತ್ತಿತ್ತು. ಅಲೆಗಳ ರಭಸವನ್ನು ನೋಡಿದಾಗ ಮನುಷ್ಯರು ಮಾಡಿಕೊಂಡಿದ್ದ ಹಿಂದಿನ ದಿನದ ಪಾರ್ಟಿಯ ಗಮ್ಮತ್ತು ಅವಕ್ಕೆ ಇಷ್ಟವಾಗಲಿಲ್ಲವೇನೋ ಎಂಬಂತಿತ್ತು. ಅಲೆಗಳ ಹೊರಳಾಟ ಯಾಕೋ ನನ್ನಲ್ಲಿ ದುಃಖ ಉಕ್ಕಿಸಿತ್ತು. ನಗರದ ಪೂರ್ವ ತೀರದಲ್ಲಿರುವ ಸುಂದರ ಸಮುದ್ರತೀರದ ಸುಮಾರು ಮೂವತ್ತಕ್ಕೂ ಹೆಚ್ಚು ಬೀಚ್‌ಗಳನ್ನ ಮುಚ್ಚಿದ್ದರು. ಹೊಸವರ್ಷದ ಆಗಮನವನ್ನು ಅತಿಯಾಗೆ ಆಚರಿಸಲು ಹೋಗಿ ಹಲವಾರು ಕಡೆ ಸಮುದ್ರಕ್ಕಿಳಿದ್ದಿದ್ದ ಜನರು ಆಪತ್ತಿಗೀಡಾಗಿದ್ದು ವರದಿಯಾಗಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

 ಲೋಕೋಭಿನ್ನ ರುಚಿಃ – ಲೋಕೋಭಿನ್ನ ಖುಷಿಃ!: ಎಲ್.ಜಿ. ಮೀರಾ ಅಂಕಣ

ಒಬ್ಬೊಬ್ಬರ ಖುಷಿಯ ನಿರ್ವಚನವೂ ಬೇರೆ ಬೇರೆ. ಒಬ್ಬರಿಗೆ ಮಾತಿನಲ್ಲಿ ಖುಷಿ, ಇನ್ನೊಬ್ಬರಿಗೆ ಮೌನದಲ್ಲಿ. ಒಬ್ಬರ ಖುಷಿ ಹಾಡು ಕೇಳುವುದರಲ್ಲಾದರೆ, ಇನ್ನೊಬ್ಬರ ಖುಷಿ ಪದಬಂಧ ಬಿಡಿಸುವುದರಲ್ಲಿ. ಒಬ್ಬರ ಖುಷಿ ಹೊಸರುಚಿಯ ಅಡುಗೆಗಳನ್ನು ಸವಿಯುವುದರಲ್ಲಾದರೆ ಇನ್ನೊಬ್ಬರ ಖುಷಿ ಹೊಸ ಅಡುಗೆಗಳನ್ನು ಕಲಿತು ಮಾಡುವುದರಲ್ಲಿ. ಒಬ್ಬರಿಗೆ ದೇಶವಿದೇಶ ತಿರುಗುವ ಪ್ರವಾಸ ಇಷ್ಟ, ಇನ್ನೊಬ್ಬರಿಗೆ ಮನೆಯ ಆರಾಮಕುರ್ಚಿಯಲ್ಲಿ ಕುಳಿತು ದೇಶವಿದೇಶಗಳ ಬಗ್ಗೆ ಓದುವುದು ಇಷ್ಟ! ಖುಷಿಗಳು ವೈವಿಧ್ಯಮಯ. ಆದರೆ ಇವೆಲ್ಲದರ ಮೂಲದಲ್ಲಿರುವ ಒಂದು ಪ್ರಧಾನ ಸಂಗತಿಯು ಬಹುತೇಕ ಜನರ ಗಮನಕ್ಕೆ ಬರುವುದಿಲ್ಲ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಇಲ್ಲಿರಲಾರೆ… ಅಲ್ಲಿಗೆ ಹೋಗಲಾರೆ: ಸುಕನ್ಯಾ ಕನಾರಳ್ಳಿ ಅಂಕಣ

ಕಾಸರವಳ್ಳಿಯವರೇ ಹೇಳುವಂತೆ, ‘ಹಿಂದಿನ ಕಾಲದ ಗ್ರಾಮೀಣ ಬದುಕಲ್ಲಿ ಶಾಂತಿ ಇತ್ತು, ಸೌಹಾರ್ದತೆ ಇತ್ತು ಎನ್ನುವುದು ಒಂದು ರಮ್ಯ ಕಲ್ಪನೆ ಅಷ್ಟೇ. ಇವತ್ತಿನ ನಗರ ಕೇಂದ್ರದ ಬದುಕಿಗೆ ಹೋಲಿಸಿದಾಗ ಸ್ವಲ್ಪ ಮಟ್ಟಿನ ಸೌಹಾರ್ದತೆ ಇತ್ತು ಎನ್ನುವುದು ನಿಜವಾದರೂ ಜಾತಿ, ಅಂತಸ್ತು, ವೃತ್ತಿಯ ನೆಲೆಯಲ್ಲಿ ಅನ್ಯಾಯ, ದೌರ್ಜನ್ಯ, ಹಿಂಸೆ ನಡೆಯುತ್ತಲೇ ಇದ್ದವು.’ ಅದನ್ನೇ ನಾಗರಾಜನ ಹೆಂಡತಿ, ‘ಆ ದಿನಗಳಲ್ಲಿ ಸುಖ ಇರಲಿಲ್ಲ, ನೆಮ್ಮದಿ ಇತ್ತು. ಆದರೆ ಇವತ್ತು ಸುಖ ಇದೆ, ನೆಮ್ಮದಿ ಇಲ್ಲ’ ಎಂದು ಹೇಳುತ್ತಾಳೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಒಂಭತ್ತನೆಯ ಬರಹ

Read More

ಸಾಟಿಯಿಲ್ಲದ ಬ್ಯೂಟಿ ನಿನ್ನದು, ಭೂತಾನ್!: ಸುಕನ್ಯಾ ಕನಾರಳ್ಳಿ ಅಂಕಣ

ಭೂತಾನಿಯ ಮಂದಿಯನ್ನು ನಮ್ಮ ಗೈಡ್ ತಂಡದ ಮೂಲಕ ಸಾರಂಶೀಕರಿಸಬಹುದು ಅಂತನ್ನಿಸುತ್ತದೆ. ನಿರಾಳ ಮುಖ; ಮೆದುಮಾತು; ಸ್ತೂಪ ಕಂಡಾಗೆಲ್ಲ ಮಣಮಣ ಎಂದು ಹೇಳಿಕೊಳ್ಳುವ ಪ್ರಾರ್ಥನೆ; ಅಪಾರವಾದ ರಾಜಪ್ರೇಮ; ನಮ್ಮ ಬ್ಯಾಗುಗಳನ್ನೆಲ್ಲ ಹೊತ್ತು ಸೂಕ್ಷ್ಮವಾಗಿ ಗಮನಿಸುತ್ತಲೇ ಹಿಂದೆಯಿಂದ ಬರುವ ಆದರೆ ಸ್ವಲ್ಪ ದಣಿವಾದರೂ ದುತ್ತನೆ ಎದುರಿಗೆ ಅವತರಿಸಿ, ‘ನೀರು ಬೇಕಾ? ತಿನ್ನಲು ಏನಾದರೂ ಬೇಕಾ?’ ಎಂದು ಕೇಳುವ ಕರುಣೆ ತುಂಬಿದ ಕಣ್ಣುಗಳು… ಇತ್ಯಾದಿ ವೃತ್ತಿಪರತೆಯನ್ನೂ ಮೀರಿದ ಜನಪ್ರೀತಿ ಅಂತನ್ನಿಸಿತ್ತು. ಹೇಳಿಕೇಳಿದ್ದೆಲ್ಲದಕ್ಕೂ, ‘ಓಕೆ ಲಾ…’ ಎಂದು ಹೇಳುವ ಲಲಲಾ ರೀತಿ ಭೂತಾನ್ ಬಿಟ್ಟರೂ ನಮ್ಮನ್ನು ಹಿಂಬಾಲಿಸಿತ್ತು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಎಂಟನೆಯ ಬರಹ

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ