ಜೇನ್ನೊಣದ ಬಿಲಿಯನ್ ಡಾಲರ್ ಕೊಡುಗೆ: ಡಾ. ವಿನತೆ ಶರ್ಮಾ ಅಂಕಣ
ನಮ್ಮ ಹವ್ಯಾಸಿ ಕೈತೋಟ ಸದಸ್ಯರಲ್ಲಿ ಒಂದು ನಿಯಮವಿದೆ – ತಾವು ಬೆಳೆಯುವ ತರಕಾರಿ ಹಣ್ಣುಗಳಿಗೆ ಯಾವುದೇ ರಾಸಾಯನಿಕ ಪದಾರ್ಥಗಳನ್ನು ಬಳಸುವಂತಿಲ್ಲ. ಹಾಗೇನಾದರೂ ಬಳಸಿದರೆ ಅಂತಹ ಆಹಾರವನ್ನು ಸದಸ್ಯರಲ್ಲಿ ಹಂಚಿಕೊಳ್ಳಬಾರದು. ಈ ನಿಯಮದಿಂದ ಸದಸ್ಯರಲ್ಲಿ ಪ್ರಕೃತಿಯ ಬಗ್ಗೆ ಕಾಳಜಿ ಹೆಚ್ಚುತ್ತದೆ. ತಮ್ಮ ತರಕಾರಿ ಹಣ್ಣು ಗಿಡಗಳನ್ನು ಕ್ರಿಮಿಕೀಟಗಳು ಭಾದಿಸುತ್ತಿವೆ ಎಂದಾದರೆ ಅವನ್ನು ತೊಲಗಿಸಲು ಸದಸ್ಯರು ತಮಗೆ ಗೊತ್ತಿರುವ ನೈಸರ್ಗಿಕ ವಿಧಾನಗಳನ್ನು ಸೂಚಿಸುತ್ತಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”