Advertisement

Category: ಅಂಕಣ

ದ್ರಾವಿಡ್ ಮತ್ತು ಗಂಗೂಲಿ: ಒಂದು ಅಪೂರ್ವ ಜೋಡಿ

ಅವರ ಕ್ರಿಕೆಟ್ಟನ್ನು ಸದಾಕಾಲ ಸ್ಮರಿಸಲು ಕರ್ನಾಟಕದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ, ‘ದ ವಾಲ್‌ʼಗೆ ಒಂದು ಗೋಡೆ ಮೀಸಲಿಟ್ಟು ಅವರ ಚಿತ್ರವನ್ನು ಮಾಡಿಸಿದ್ದಾರೆ. ಇದು ಒಂದು ರೀತಿ ಜನಗಳು, ಕ್ರೀಡಾಭಿಮಾನಿಗಳು, ಮುಂದಿನ ಪೀಳಿಗೆಯವರು ರಾಹುಲ್ ದ್ರಾವಿಡ್‌ರ ಆಟವನ್ನು ಇಲ್ಲಿ ಬಂದು ನೋಡಿ ಅವರ ಆಟವನ್ನು ಸ್ಮರಿಸುವುದಕ್ಕೆ ಅವಕಾಶ. ಅದರ ಮೇಲೆ ಕನ್ಸಿಸ್ಟೆನ್ಸಿ, ಕಮಿಟ್ಮೆಂಟ್, ಕ್ಲಾಸ್ ಎಂದು ಬರೆಸಿದ್ದಾರೆ. ಅರ್ಥಾತ್‌ ಸ್ಥಿರತೆ, ಭದ್ಧತೆ ಮತ್ತು ಆಡುವ ಶಿಸ್ತು ಅನ್ನುವ ಅರ್ಥ ಕೊಡುತ್ತೆ. ಇದೆಲ್ಲವೂ ಅವರ ಆಟಗಾರಿಕೆಯಲ್ಲಿ ನೋಡಬಹುದು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ

Read More

ಆಡಿಕೊಳ್ಳುವ ಬಾಯಿಗೊಂದು ಬೀಗ…

ಯಾವ ಯಾವ ಕಾರಣಕ್ಕೆ ದಾಂಪತ್ಯಗಳು ಮುರಿದು ಬೀಳ್ತಿವೆ ಎಂಬುದು ಚರ್ಚೆಗೆ ನಿಲುಕುವ ವಿಷಯವೇ ಅಲ್ಲ. ಈಗ ಪ್ರತಿಮನೆಯಲ್ಲೂ ವಿಚ್ಚೇದನದ ಕೇಸ್‌ಗಳು, ಹೆಣ್ಣು-ಗಂಡಿನ ವರ್ತನೆ, ಮನಃಸ್ಥಿತಿಯ ಕುರಿತಾದ ದೂರುಗಳು, ಸ್ತ್ರೀವಾದ, ನೊಂದಗಂಡಂದಿರ ಸಂಘದ ಅಳಲುಗಳು ಯಥೇಚ್ಛವಾಗಿವೆ. ಯಾರ ಪರವೂ, ವಿರುದ್ಧವೂ ನಿಲ್ಲಲಾಗದ, ನಿಂತು ಸಾಧಿಸಲಾಗದ ಸಿಕ್ಕಾಗಿ ಉಳಿದಿವೆ. ಆದರೆ ಮಕ್ಕಳು ಬೇಕು ಅಥವಾ ಬೇಡ ಎಂಬ ಕಾರಣಕ್ಕಾಗಿ ನಡೆಯುತ್ತಿರುವ ದಾಂಪತ್ಯ ಸಮರಗಳ ಬಗ್ಗೆ ಸ್ವಲ್ಪ ಗಮನಹರಿಸಬಹುದು.
ಎಸ್. ನಾಗಶ್ರೀ ಅಜಯ್ ಬರೆಯುವ ಲೋಕ ಏಕಾಂತ ಅಂಕಣ ನಿಮ್ಮ ಓದಿಗೆ

Read More

ಸಿಹಿ ಕೊಟ್ಟರೆ ಅಳುತ್ತಿದ್ದ ಮಂದಿ…

ಸುತ್ತ ಎತ್ತ ನೋಡಿದರೂ ರಾಕ್ಷಸಾಕಾರದ ಗುಡ್ಡಗಳು, ತುಂಬಿ ಹರಿಯುತ್ತಿದ್ದ ನದಿಗಳು. ಅಲ್ಲಿ ನಮ್ಮಂತೆ ಗುಂಪು ಗುಂಪು ಮನೆಗಳಾಗಲಿ ಹಳ್ಳಿಗಳಾಗಲಿ ಇಲ್ಲ. ಗುಡ್ಡಗಳಲ್ಲಿಯೇ ಹಳ್ಳಿಗಳು. ಅರ್ಧ ಕಿಲೋಮೀಟರ್ ಒಂದು, ಕಿಲೋಮೀಟರ್ ಅಂತರದಲ್ಲಿ ಒಂದೊಂದು ಮನೆಗಳು. ವಾಹನಗಳಿಗಿಂತ ಕುದುರೆಗಳೆ ಸಂಚಾರಕ್ಕೆ ಆಸರೆಗಳು. ನಮ್ಮ ತಂಡ ಮೊದಲೆ ತಯಾರಿಸಿ ಇಟ್ಟ ಅಡುಗೆ ಸಾಮಗ್ರಿಗಳ, ಬಟ್ಟೆ, ಹಾಸಿಗೆ ಹೊದಿಕೆಗಳ ಕಿಟ್ಟನ್ನು ಪ್ರತಿ ಮನೆಗೂ ತಲುಪಿಸಿ ಅವರಿಗೊಂದಿಷ್ಟು ಸಾಂತ್ವಾನ ಹೇಳಿ ಬರುತ್ತಿತ್ತು. ಶಾಲೆಗೆ, ದುಡಿಯಲು, ಕೊಂಡಕೊಳ್ಳಲು ಹೊರಗೆ ಹೋದವರು ಮರಳಿ ಹೆಣವಾಗಿ ಸಿಗುತ್ತಿದ್ದರು.
ಇಸ್ಮಾಯಿಲ್‌ ತಳಕಲ್‌ ಬರೆಯುವ ‘ತಳಕಲ್‌ ಡೈರಿ’ಯಲ್ಲಿ ಹೊಸ ಬರಹ ನಿಮ್ಮ ಓದಿಗೆ

Read More

ರೂಪಾತೀತ, ಗಾತ್ರಾತೀತ, ಕಾಲಾತೀತ ಶಿವ….

ಮಧ್ಯಪ್ರದೇಶದ ಭೋಜಪುರದಲ್ಲಿರುವ ಭೋಜೇಶ್ವರ, ತಮಿಳುನಾಡಿನ ತಂಜಾವೂರಿನ ಬೃಹದೇಶ್ವರ ಲಿಂಗ ನೆನಪಾಗುತ್ತದೆ. ಕೆಲವು ಮನೆತನಗಳ ಸಂಪ್ರದಾಯದಲ್ಲಿ ನದಿ ಮತ್ತು ಸಮುದ್ರ ತೀರದಲ್ಲಿ ವಾಸಿಸುವ ಜನರು ಪ್ರತಿದಿವಸ ಅದೇ ನೀರಿನಲ್ಲಿ ಸ್ನಾನ ಮಾಡಿ ಅಲ್ಲಿ ಸಿಗುವ ಮರಳಿನಲ್ಲಿ ಒಂದು ಲಿಂಗವನ್ನು ರಚಿಸಿ ಪೂಜಿಸಿ ಮತ್ತೆ ಅದನ್ನು ನೀರಿನಲ್ಲಿ ಅಂದೇ ವಿಸರ್ಜಿಸಿ ಮನೆಗೆ ಬರುವುದೂ ಉಂಟು. ಇದನ್ನು ವಿದ್ಯಾನಿವಾಸ್‌ ಮಿಶ್ರಾ ಒಂದು ಕಡೆ ಬರೆಯುತ್ತಾರೆ. ಮನುಷ್ಯ ಕಟ್ಟಿರುವ ಲಿಂಗಗಳಲ್ಲದೆ ಅನೇಕ ಕಡೆಗಳಲ್ಲಿ ಉದ್ಭವ ಲಿಂಗಗಳು ಸಿಗುತ್ತವೆ.
‘ದೇವಸನ್ನಿಧಿ’ ಅಂಕಣದಲ್ಲಿ ಶಿವನ ಹಲವು ರೂಪ, ರೂಪಕಗಳ ಕುರಿತು ಬರೆದಿದ್ದಾರೆ ಗಿರಿಜಾ ರೈಕ್ವ

Read More

ಮೂಡ್ನಾಕೂಡು ಚಿನ್ನಸ್ವಾಮಿ ಅವರ ಕೊರೊನಾ ಕವಿತೆಗಳು

ದಾರಿ ತಪ್ಪಬಾರದೆಂದು ರೈಲು ಹಳಿಯ ಹಿಡಿದು ಹೊರಟ ಮುಗ್ಧ ಜನಗಳು ದೇಶದೆಲ್ಲೆಡೆ ಸಾರ್ವಜನಿಕ ಸಮಚಾರ ನಿರ್ಬಂಧವಾಗಿರುವಾಗ ಈ ಹಳಿಯಮೇಲೆ ಒಂದಿಷ್ಟು ಹೊತ್ತು ವಿರಮಿಸೋಣವೆಂದು ಮಲಗಿರುತ್ತಾರೆ. ದುರಾದೃಷ್ಟವಶಾತ್ ಗೂಡ್ಸ್ ರೈಲು ಹರಿದು ಹಳಿಯ ಮೇಲೆ ಮಲಗಿದ್ದವರು ಶವಗಳಾಗುತ್ತಾರೆ. ಅವರ ಪಕ್ಕವೇ ಬಿದ್ದಿದ್ದ ರೊಟ್ಟಿ ಚೂರುಗಳು, ರಕ್ತಸಿಕ್ತ ಮಾಂಸದ ತುಂಡುಗಳಾದ ಅಮಾಯಕ ಹೆಂಗಸರು ಮಕ್ಕಳು ಇಡೀ ದೇಶವನ್ನು ಮರುಗುವಂತೆ ಮಾಡುತ್ತವೆ.
ಅಭಿಷೇಕ್‌ ವೈ.ಎಸ್. ಬರೆಯುವ “ಕಾವ್ಯದ ಹೊಸ ಕಾಲ” ಅಂಕಣದಲ್ಲಿ ಮೂಡ್ನಾಕೂಡು ಚಿನ್ನಸ್ವಾಮಿಯವರ “ಕೊರೊನಾ” ಕವನ ಸಂಕಲನದ ಕುರಿತ ಬರಹ ಇಲ್ಲಿದೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ