Advertisement

Category: ಅಂಕಣ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಹೊಸ ಅಂಕಣ “ಇನ್ನೊಂದು ಬದಿ” ಇಂದಿನಿಂದ

ನಮ್ಮ ಪುರಾಣಗಳನ್ನು ಕೆದಕುತ್ತಾ ಹೋದರೆ ಇಂತಹ ಬಹಳಷ್ಟು ಮಾದರಿಗಳು ಸಿಗಬಹುದು. ಪ್ರತಿಯೊಬ್ಬರ ಪರಿಸ್ಥಿತಿಗಳು ಪ್ರತಿಯೊಬ್ಬರ ಋಣದ ಬೇರುಗಳು ಭಿನ್ನವಾಗಿರಬಹುದು. ಆದರೆ ಧರ್ಮಸಂಕಟದ ಆ ಉತ್ಕಟ ಕ್ಷಣಗಳಲ್ಲಿ ಅವರು ತೆಗೆದುಕೊಂಡ ನಿರ್ಧಾರಗಳು ಖಂಡಿತವಾಗಿಯೂ ನಮ್ಮ ಬದುಕಿನ ಸಮಸ್ಯೆಗಳಿಗೂ ಒಂದು ದಾರಿಯನ್ನು ತೋರಿಸಬಹುದು. ಬದುಕಿನ ಅನಾಮಿಕ ತಿರುವಿನಲ್ಲಿ ಎದುರಾಗುವ ದ್ವಂದ್ವಗಳಲ್ಲಿ ಇಲ್ಲಿದ್ದು ಇಲ್ಲಿಲ್ಲ; ಅಲ್ಲಿದ್ದು ಅಲ್ಲಿಲ್ಲ ಅನ್ನುವಂತಾಗಿ ಇದು ಅಥವಾ ಅದು ಅನ್ನುವ ಆಯ್ಕೆ ಮಾಡಲೇಬೇಕಾದ ಪರಿಸ್ಥಿಗಳಲ್ಲಿ ನಮ್ಮ ಮುಂದೆ ಇವರು ಕೊಟ್ಟು ಹೋದ ಮಾದರಿಗಳಿವೆ.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಹೊಸ ಅಂಕಣ “ಇನ್ನೊಂದು ಬದಿ” ಇಂದಿನಿಂದ

Read More

ಸುಕನ್ಯಾ ಕನಾರಳ್ಳಿ ಹೊಸ ಅಂಕಣ “ಕಡೆಗಣ್ಣಿನ ಬಿಡಿನೋಟ” ಇಂದಿನಿಂದ

‘ನಿಮ್ಮ ಮನೆಯಲ್ಲೂ ಪಾತಿ ಮಾಡಿದಾರಾ?’ ಎಂದು ಸುಮ್ಮನೆ ಮಾತಿಗೆ ಒಮ್ಮೆ ಕೇಳಿದ್ದೆ. ‘ನಮ್ಮನೆ ಮುಂದೆ ಲಾಲ್ ಬಾಗೇ ಇದೆಯಲ್ಲ?’ ಎಂದು ಫಟ್ಟನೆ ಹೇಳಿದಾಗ ಬೆಚ್ಚಿಬೀಳುವ ಹಾಗಾಯಿತು. ಅದೊಂದು ಮಹಾವಾಕ್ಯದಂತೆ ಕೇಳಿಸಿತ್ತು. ಲಾಲ್ ಬಾಗಿನ ಎದುರು ಇರುವ ಸ್ಲಮ್ಮಿನಲ್ಲಿ ಅವರದ್ದು ಜೋಪಡಿ ವಾಸ. ಹೈದರ್ ಅಲಿ ಟಿಪ್ಪು ಸುಲ್ತಾನರು ದೇಶ ವಿದೇಶಗಳಿಂದ ತರಿಸಿ ಬೆಳೆಸಿರುವ ಅಪರೂಪದ ವೃಕ್ಷಗಳ ನಡುವೆಯೇ ಬೆಳೆಯುತ್ತಿರುವ ಮಗು ಅವಳು.
ಖ್ಯಾತ ಲೇಖಕಿ, ಅನುವಾದಕಿ ಸುಕನ್ಯಾ ಕನಾರಳ್ಳಿ ಹೊಸ ಅಂಕಣ “ಕಡೆಗಣ್ಣಿನ ಬಿಡಿನೋಟ” ಇಂದಿನಿಂದ ಪ್ರತಿ ಬುಧವಾರಗಳಂದು ನಿಮ್ಮ ಓದಿಗೆ…

Read More

ಸ್ನೇಹ-ಸಂಬಂಧಗಳ ಮೊಕದ್ದಮೆಗಳಲ್ಲಿ ಸಾಕ್ಷಿ ಕೊಡಬೇಕಾದವರು ನಿರಪರಾಧಿಗಳೇ!: ವಿನಾಯಕ ಅರಳಸುರಳಿ ಅಂಕಣ

ನಿಜವಾದ ಸಂಗತಿಯೇನೆಂದರೆ ಎಷ್ಟೋ ಬಾರಿ ಇಂಥಾ ಅಪವಾದ, ಅಪನಂಬಿಕೆಗಳು ಆ ಕ್ಷಣಕ್ಕೆ ಹುಟ್ಟಿದವುಗಳಾಗಿರುವುದೇ ಇಲ್ಲ. ಒಬ್ಬ ವ್ಯಕ್ತಿಯ ಸ್ನೇಹ, ಸಾಂಗತ್ಯದಲ್ಲಿರುವಾಗಲೇ ಮನುಷ್ಯ ಇಂಥಾದ್ದೊಂದು ಅಗಲಿಕೆಗೆ ತಯಾರಿ ಮಾಡಿಕೊಳ್ಳುತ್ತಿರುತ್ತಾನೆ. ತನಗೆ ಇಷ್ಟವಾಗದ ಆತನ ವ್ಯಕ್ತಿತ್ವಗಳನ್ನು ಹೆಕ್ಕಿಟ್ಟುಕೊಳ್ಳುತ್ತಿರುತ್ತಾನೆ! ಇಂಥಾದ್ದೊಂದು ಸಮಯ ಬಂದಾಗ ಥಟ್ಟನೆ ಅವನ್ನೆಲ್ಲ ಆಚೆ ತೆಗೆದು ‘ಅಕಾರ್ಡಿಂಗ್ ಟೂ ಆ್ಯಕ್ಟ್ ತ್ರೀ ನಾಟ್ ಟೂ’ ಎಂದು ಅವನ್ನು ಹಾಜರುಪಡಿಸಿಯೇ ಬಿಡುತ್ತಾನೆ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

Read More

ಹಿರಿಮೆ-ಗರಿಮೆ ಲೋಕದಲ್ಲಿ ಸಿಕ್ಕ ಆಸ್ಟ್ರೇಲಿಯನ್ ಹಕ್ಕಿ: ಡಾ. ವಿನತೆ ಶರ್ಮಾ ಅಂಕಣ

ಕುತೂಹಲಕಾರಿ ವಿಷಯವೆಂದರೆ ಈ ವರ್ಷ ೨೦೨೫ರಲ್ಲಿ ಅಮೆರಿಕಾ ದೇಶವು ಹನ್ನೆರಡನೇ ಸ್ಥಾನಕ್ಕೆ ಇಳಿದಿದೆ. ಯು.ಎಸ್.ಎ ಪಾಸ್ಪೋರ್ಟ್ ಇರುವವರು ೧೮೦ ದೇಶಗಳಿಗೆ ವೀಸಾ ಪಡೆಯದೆ ಹೋಗಬಹುದು. ಹೆನ್ಲಿ ಸಂಸ್ಥೆಯ ಅಧ್ಯಯನದ ಪ್ರಕಾರ ೨೦೧೪ ನೇ ಇಸವಿಯಲ್ಲಿ ಅಮೆರಿಕೆಯು ಮೊಟ್ಟಮೊದಲ ಸ್ಥಾನದಲ್ಲಿದ್ದು ಪ್ರಪಂಚದ ಅತ್ಯಂತ ಪ್ರಭಾವಶಾಲಿ ಪಾಸ್‌ಪೋರ್ಟ್ ಎನ್ನುವ ಹಿರಿಮೆ, ಮಾನ್ಯತೆಯಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಕನ್ನಡದ ಡಿಜಿಟಲ್ ನವೋದಯ ಮತ್ತು ವಿಜ್ಞಾನ ಬರವಣಿಗೆ: ಎಲ್.ಜಿ.ಮೀರಾ ಅಂಕಣ

ಹಲವಾರು ಲೇಖಕ-ಲೇಖಕಿಯರು ತಮ್ಮ ಕೊಡುಗೆಗಳನ್ನು ಕೊಟ್ಟಿದ್ದಾರೆ, ಕೊಡುತ್ತಿದ್ದಾರೆ. ಆದರೂ ಕರ್ನಾಟಕದ ಜನಮಾನಸದಲ್ಲಿ ಮತ್ತು ಉನ್ನತ ಶಿಕ್ಷಣ ಕ್ಷೇತ್ರದ ವಿಜ್ಞಾನದ ಅಧ್ಯಾಪಕರಲ್ಲಿ ಮತ್ತು ಸಂಶೋಧಕರಲ್ಲಿ `ವಿಜ್ಞಾನವೆಂದರೆ ಇಂಗ್ಲಿಷಿನಲ್ಲಿ ಇರುವಂಥದ್ದು, ಇರಬೇಕಾದದ್ದುʼ ಎಂಬ ಗಾಢ ಭಾವನೆ ಬೇರೂರಿದೆ. ಈ ಭಾವನೆ-ಚಿಂತನೆಯ ತಿರುಳು ಎಂದರೆ “ತೀರಾ ಗಂಭೀರ ವಿಜ್ಞಾನ ವಿಚಾರಗಳನ್ನು ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನ ಲೇಖನಗಳನ್ನು ಕನ್ನಡದಲ್ಲಿ ಬರೆಯಲಾಗದು, ಹಾಗೆ ಬರೆಯಲು ಸೂಕ್ತ ಪದಗಳೇ ಸಿಗುವುದಿಲ್ಲ” ಎಂಬ ಅನಿಸಿಕೆ ಅಥವಾ ಪೂರ್ವಗ್ರಹ. ಇದು ವಿಜ್ಞಾನಕ್ಷೇತ್ರದ ಹಲವು ಅಧ್ಯಾಪಕರು ಮತ್ತು ವಿಜ್ಞಾನಿಗಳಲ್ಲಿದೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಇಪ್ಪತ್ತೊಂಭತ್ತನೆಯ ಬರಹ

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ