ಕಳ್ಳನಿದ್ರೆ ಮತ್ತು ಕ್ಯಾಮೆರಾಗೂ ಕಾಣದ ಕಳ್ಳ!: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ
ನಾವು ಹೀಗೆ ಆಳವಾಗಿ ನಿದ್ದೆ ಮಾಡಿದಾಗ, ನಮ್ಮ ಮಾಂಸಖಂಡಗಳು ರಿಪೇರಿ ಆಗ್ತಾ ಇರತ್ವೆ, ನಮ್ಮ ಮೆದುಳಿನ ಸುತ್ತ ಒಂದು ಲಿಕ್ವಿಡ್ ಇರತ್ತಲ್ಲ. ಅದು ಮೆದುಳಿನ ಮತ್ತು ಸ್ಪೈನಲ್ ಕಾರ್ಡ್ ಸುತ್ತ ಓಡಾಡಿ, ಕೊಳೆಯಾದ ಪಾತ್ರೆ ತೊಳೆಯೋ ಹಾಗೆ ತೊಳೆದು, ಬೇಡದ ವೇಸ್ಟ್ ಅಂಶಗಳನ್ನ ತೆಗೆದು ಕ್ಲೀನ್ ಮಾಡತ್ತೆ. ಮಕ್ಕಳಂತೂ ನಿದ್ದೇಲೇ ಬೆಳೀತಾರೆ ಅಂತಾರಲ್ಲ ಹಿರಿಯರು? ಅದು ನಿಜಾನೇ. ನಿದ್ದೆಯ ಮೂರನೇ ಹಂತ ಇದ್ಯಲ್ಲ, ಆಗ ದೇಹದಲ್ಲಿ ಬೆಳವಣಿಗೆಗೆ ಬೇಕಾದ ಗ್ರೋಥ್ ಹಾರ್ಮೋನುಗಳು ಬಿಡುಗಡೆಯಾಗತ್ವೆ. ಅದರಿಂದಲೇ ನೀವು ಎತ್ತರವಾಗ್ತೀರ, ಅಂಗಾಂಗಗಳು ಬೆಳೆಯತ್ವೆ.
ಕ್ಷಮಾ ವಿ. ಭಾನುಪ್ರಕಾಶ್ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಇಪ್ಪತ್ತನೆಯ ಕತೆ

