ಕರುಣಾಳು ಬಾ ಬೆಳಕೆ-ನವೋದಯ ಕನ್ನಡ ಕಾವ್ಯದಲ್ಲಿ ಪ್ರಾರ್ಥನೆ: ಸುಕನ್ಯಾ ಕನಾರಳ್ಳಿ ಅಂಕಣ
ನಾಗರಿಕತೆಯ ಇತಿಹಾಸ ಬರ್ಬರತೆಯ ಇತಿಹಾಸವೂ ಹೌದು ಎಂದು ಕಾರ್ಲ್ ಮಾರ್ಕ್ಸ್ ಹೇಳುತ್ತಾನೆ. ವೈಚಾರಿಕತೆ, ವಿಜ್ಞಾನ, ತಂತ್ರಜ್ಞಾನಗಳು ಹೊರಗಿಂದ ಬಂದು ಎರಡು ದಿನವಿದ್ದು ಮರಳಿ ಹೋದ ನೆಂಟರಾಗಿರಲಿಲ್ಲ. ಬದಲಿಗೆ ನಮ್ಮ ದೃಷ್ಟಿಕೋನಗಳನ್ನೇ ಪಲ್ಲಟಿಸಿದ, ಅಸಹನೆ ಮತ್ತು ಕ್ರೌರ್ಯಗಳನ್ನು ಸಾಮಾನ್ಯವಾಗಿಸಿದ ಪ್ರಚಂಡ ಶಕ್ತಿಯವು. ಯಂತ್ರವೇ ಬೃಹತ್ತಾಗಿ ಬೆಳೆದು ಮನುಷ್ಯ ಕುಲವನ್ನು ಆತ್ಮಹೀನವಾಗಿಸುವ ನಾಗರಿಕತೆ ಎಂಬ ದಮನಶಕ್ತಿಯ ಬಗ್ಗೆ ಎಚ್ಚರಿಸಲು ಇಂಗ್ಲೀಷ್ ರೊಮ್ಯಾಂಟಿಕ್ಕರು ಪ್ರಕೃತಿಯ ದನಿಯಾದ ಕಾವ್ಯವನ್ನೇ ಬಳಸಿಕೊಂಡರು. ಚಾರ್ಲಿ ಚಾಪ್ಲಿನ್ ತನ್ನ ಆ ಸತ್ಯವನ್ನೇ ತನ್ನ ‘ಮಾಡರ್ನ್ ಟೈಮ್ಸ್’ ಎಂಬ ದೃಶ್ಯಕಾವ್ಯದಲ್ಲಿ ಸಾರಿದ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಏಳನೆಯ ಬರಹ
