Advertisement

Category: ದಿನದ ಪುಸ್ತಕ

ನಟರಾಜ್ ಹುಳಿಯಾರರ ಪುಸ್ತಕದ ಕುರಿತು ಎಚ್.ಆರ್. ರಮೇಶ್ ಬರಹ

“ಯಾವಾಗಲೋ ಚಿಕ್ಕ ವಯಸ್ಸಿನಲ್ಲಿ ನೋಡಿದ ಒಂದು ಸಾವನ್ನು ಬಿಟ್ಟರೆ ಮತ್ತೆ, ಮತ್ತೊಂದು ಸಾವನ್ನು ನೋಡುವುದು 1998 ರ ಆಗಸ್ಟ್ ನಡುರಾತ್ರಿಯ ಡಿ.ಆರ್ ಅವರ ಸಾವು. ಇದರ ಬಗ್ಗೆ ಬರೆಯುವಾಗ ಹುಳಿಯಾರ್ ತಮ್ಮ ಕರುಳ ಬಳ್ಳಿಯ ಯಾವುದೋ ಒಂದು ಕುಡಿ ಕಡಿದು ಹೋದಾಗ ಆಗುವಷ್ಟೇ ನೋವು, ವಿಷಾದ, ಖಾಲಿತನ, ತೀವ್ರವಾಗಿ ಅವರಿಗೂ ಆಗುವುದನ್ನು ಕಾಣಬಹುದು. ಅದೇ ಥರ 2000 ರ ಇಸ್ವಿಯಲ್ಲಿ ಜರುಗಿದ ಲಂಕೇಶ್ ಸಾವು.”

Read More

ಅಶೋಕ್ ಕುಮಾರ್ ಅನುವಾದಿಸಿದ ಸುಭಾಷ್ ಚಂದ್ರನ್ ಅವರ ಕಾದಂಬರಿಯ ಒಂದು ಭಾಗ

“ಮಳೆ ಜೋರಾಗಿ ಮರವನ್ನೇ ಮುಳುಗಿಸುವಂತೆ ಸುರಿಯತೊಡಗಿದಾಗ ರಣಹದ್ದಿನ ಪುಕ್ಕಗಳು ತೊಯ್ದು ತೊಪ್ಪೆಯಾಗುವುದನ್ನು ತನ್ನ ಕಡೆಗಣ್ಣಿಂದ ನೋಡುವುದು ಅಯ್ಯಾಪಿಳ್ಳೆಗೆ ಸಾಧ್ಯವಾಯಿತು. ಪಂಜರಕ್ಕೆ ಒತ್ತಿಕೊಂಡಂತಿದ್ದ ಜುಟ್ಟಿನ ಗಂಟು ಕಳಚಿಕೊಂಡು ಹಿಂದಕ್ಕೆ ಚದುರಿದ್ದ ಕೂದಲಿಗೆ ಕುತ್ತಿಗೆಯನ್ನೊತ್ತಿ ಅಯ್ಯಾಪಿಳ್ಳೆ ತಲೆಯನ್ನು ಹೊರಳಿಸಲು ನೋಡಿದನಾದರೂ ಸಾಧ್ಯವಾಗಲಿಲ್ಲ. ಭೋರ್ಗರೆದು ಸುರಿಯುತ್ತಿರುವ ಮಳೆಯಲ್ಲಿ ಆತ ಬಾಯಾರಿ ತಹತಹಿಸಿದ.”

Read More

ಫಿಯಟ್ ಲಕ್ಸ್…. ಬೆಳಕಾಗಲಿ: ಕೆ.ವಿ. ತಿರುಮಲೇಶ್ ಲೇಖನ

“ಈಗ ಈ ಚಿಮಿಣಿ ಕೈದೀಪಕ್ಕೆ ಬಂದರೆ, ಇದು ಬಹೂಪಯೋಗಿಯಾಗಿದ್ದರೂ, ಇದಕ್ಕೆ ಕೆಲವು ಮಿತಿಗಳೂ ಇದ್ದುವು. ಇದು ಗಾಳಿಗೆ ನಿಲ್ಲುವುದಿಲ್ಲವಾದ ಕಾರಣ, ಮನೆಯ ಹೊರಗೆ ಉಪಯೋಗವಿಲ್ಲ; ಮನೆಯೊಳಗೂ ಗಾಳಿ ಹೆಚ್ಚು ಬಂದರೆ ಇದು ಇದೀಗ ನಂದೀತು ಎನ್ನುವ ಆತಂಕ ಉಂಟುಮಾಡುತ್ತ ಇರುತ್ತದೆ. ಹತ್ತಿರ ಇರಿಸಿ ಪುಸ್ತಕ ಓದಲು ಪರವಾಯಿಲ್ಲ. ರಾತ್ರಿ ಊಟದ ಸಮಯ ನಾವು ಚಿಮಿಣಿಯ ತೂಗುದೀಪವನ್ನು ಉಪಯೋಗಿಸುತ್ತಿದ್ದೆವು.”

Read More

ಶೂದ್ರ ಶ್ರೀನಿವಾಸ್ ಪುಸ್ತಕದ ಕುರಿತು ಎಚ್.ಆರ್. ರಮೇಶ್ ಬರಹ

“ಲಂಕೇಶರ ಜೊತೆಯ ತಮ್ಮ ಸುದೀರ್ಘ ಪಯಣದಲ್ಲಿ ನಿಷ್ಠುರತೆಯನ್ನು ಕಾಪಾಡಿಕೊಂಡು ಹೋಗುತ್ತಲೇ ಅವರಿಂದ ಸಾರಾಸಗಟಾಗಿ ಬಿಡಿಸಿಕೊಂಡು ಹೋಗದೆ ಮುನಿಸು, ಜಗಳ, ಟೀಕೆಗಳನ್ನು ಸಹಜವಾಗಿಯೇ ಸ್ವೀಕರಿಸಿ ಕೇವಲ ಸ್ವಚ್ಛಂದ ಪ್ರೀತಿ-ಸ್ನೇಹಗಳನ್ನಷ್ಟೇ ನೆಚ್ಚಿ ಮುನ್ನಡೆದುದರಲ್ಲಿ ಅವರ ತಾಳ್ಮೆ ಹಾಗೂ ಝೆನ್ ತತ್ವದಲ್ಲಿ ಕಾಣುವಂತಹ ಸುಮ್ಮನೆ ಬದುಕುತ್ತ ಇರುತ್ತ ಹೋಗುವ ಕ್ರಮ ಗಮನಸೆಳೆಯುತ್ತದೆ.”

Read More

ಕಪಿಲ ಕಾದಂಬರಿಗೆ ಬಾಳಾಸಾಹೇಬ ಲೋಕಾಪೂರ ಮತ್ತು ಕೇಶವ ಮಳಗಿ ಮಾತುಗಳು

“`ಹಾಣಾದಿ’ ಕಾದಂಬರಿ ತನ್ನ ಕಥಾವಸ್ತು, ನಿರೂಪಣಾ ವಿಧಾನ ಮತ್ತು ಲೇಖಕ ಹೀಗೆ ಹಲವು ಕಾರಣಗಳಿಂದ ಗಮನ ಸೆಳೆಯುವ ಕೃತಿ. ವರ್ತಮಾನ ಮತ್ತು ಭೂತಕಾಲ ಜತೆಜತೆಗೆ ಸಾಗುವ, ನೆನಪುಗಳ ಸಿಕ್ಕುಗಳಲ್ಲಿ ಓದುಗನನ್ನು ಸಿಲುಕಿಸುವ ಕಾದಂಬರಿ. `ಗಾರುಡಿ ವಾಸ್ತವತೆ’ಯ ತಂತ್ರವನ್ನು ಬಳಸುತ್ತದೆ. ಕಥೆಯೊಳಗೆ ಕಥೆ, ಅದರೊಳಿನ್ನೊಂದು ಕಥೆ ಎಂಬಂತೆ ಇದರ ನಿರೂಪಣೆ. ಕಾದಂಬರಿಯಲ್ಲಿ…”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ