Advertisement

Category: ದಿನದ ಪುಸ್ತಕ

ಮನಃಶಾಸ್ತ್ರೀಯ ಗುಣದ ಕಾದಂಬರಿ!

“ಮಗನೂ ಕೂಡ ಅಪ್ಪನಂತೆ ಮಿಲ್ಟ್ರಿಗೆ ಸೇರಿಬಿಡುತ್ತಾನೋ, ದಾರಿ ತಪ್ಪುತ್ತಾನೋ ಎಂಬ ಆತಂಕದಲ್ಲಿ ತಾಯಿ ಶಾಂತಕ್ಕನ ಜೀವನ ತೊಳಲಾಡುತ್ತಾ ಕಾಯುತ್ತಿರುತ್ತದೆ. ಶಾಂತಕ್ಕ ತನಗೆ ತಾನೇ ಸಮಾಧಾನಪಡಿಸಿಕೊಳ್ಳುವ “ಕಣ್ಣಲ್ಲಿ ಎರಡುಹನಿ ನೀರ್ ಇರುವತನಕ ಮಗನನ್ನು ಕಟ್ಟಿ ಹಾಕುತ್ತೇನೆ.” ಎಂಬ ಸಮಾಧಾನದ ಮಾತು ಅಂತಃಕರಣ ಕಲಕುತ್ತದೆ. ಪಿತೃ ಪ್ರಧಾನ ಕುಟುಂಬಗಳು ಸಾಮಾನ್ಯವಾಗಿರುವ ಈ ಹೊತ್ತಿನಲ್ಲಿ ಮಾತೃ ಸಂಸ್ಕೃತಿಯನ್ನು ಇದು ಬಿಂಬಿಸುತ್ತದೆ.”
ನಟರಾಜ್‌ ಹುಳಿಯಾರ್‌ ಬರೆದ ‘ಕಾಮನ ಹುಣ್ಣಿಮೆ’ ಕಾದಂಬರಿ ಕುರಿತು ಆಲೂರು ದೊಡ್ಡನಿಂಗಪ್ಪ ಬರಹ

Read More

ನಿರಾಡಂಬರ ಕಥನ ಕ್ರಮದಲ್ಲಿ ಸಾಗುವ ‘ಸೂತ್ರಧಾರ..’

“ಫಣೀಂದ್ರನ ಗಲಿಬಿಲಿ ಸಂಸಾರ, ಕಾಣದ ಕೈ, ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ, ಹೃದಯಾಂತರಾಳದಲಿ, ತ್ಯಾಗ, ದೊಡ್ಡವರೆಲ್ಲ ಜಾಣರಲ್ಲ, ಕಂದಾ ನೀ ನಗುತಿರು ಮತ್ತು ಸೂತ್ರಧಾರ ಮತ್ತು ಇತರ ಕಥೆಗಳು ಇಲ್ಲಿ ತಮ್ಮ ವಸ್ತು ವಿಷಯಗಳಿಂದ ಗಮನ ಸೆಳೆಯುತ್ತವೆ. ಹೃದಯಾಂತರಾಳದಲ್ಲಿ ಮತ್ತು ಕಂದ ನೀನು ನಗುತಿರು ಕತೆಗಳು ಮಾನವೀಯತೆಯ ಆರ್ದ್ರವಾದ ದನಿಯನ್ನು ಬಿಂಬಿಸಿದರೆ, ದೂರದ ಬೆಟ್ಟ ಮತ್ತು ಕಾಣದ ಕೈಗಳು ಆ ಬಾಳಿನ ಸಹಜವಾದ ಚಿತ್ರವನ್ನು ನೆಚ್ಚಿಕೊಂಡಿವೆ.”
ಶೈಲಜಾ ಸುರೇಶ್‌ ರಾವ್‌ ನಾಯಕ್ ಕಥಾ ಸಂಕಲನಕ್ಕೆ ವಾಸುದೇವ ನಾಡಿಗ್‌ ಬರೆದ ಮುನ್ನುಡಿ

Read More

ಮರಾಠವಾಡಾದ ದಲಿತನ ಆತ್ಮಕಥನ ಕುರಿತು ಸುಧಾ ಆಡುಕಳ ಬರಹ

“ಪರಲಾದನಿಗೆ ಇನ್ನೊಂದು ಅಕ್ಕ ಇದ್ದಳಾದರೂ ಅವಳ ಗಂಡ ಸಾಕ್ಷಾತ್ ಯಮಸ್ವರೂಪಿ! ಅವನಿಗಂಜಿ ಅವಳ ಊರಿಗೆ ಹೋದರೂ ಈ ಹುಡುಗ ಮನೆಯವರೆಗೆ ಹೋಗಲಾರ. ಊರ ಮುಂದಿನ ಗುಡಿಯಲ್ಲಿಯೇ ಕುಳಿತು, ಮಲಗಿ ಕಾಲ ಕಳೆಯುವ ಇವನನ್ನು ಕಂಡು ಮಂದಿ ಅಕ್ಕನಿಗೆ ಸುದ್ದಿ ಮುಟ್ಟಿಸಬೇಕು. ಅವಳು ಬಂದು ಸಮಯ ನೋಡಿ ಮನೆಗೆ ಕರಕೊಂಡು ಹೋಗಿ ಬಡಿಸಬೇಕು.”
ಚಂದ್ರಕಾಂತ ಪೋಕಳೆ ಅನುವಾದಿಸಿದ ಮರಾಠಿ ಲೇಖಕ ಪ್ರ. ಈ. ಸೋನಕಾಂಬಳೆ ಅವರ ಆತ್ಮಕಥನ ‘ನೆನಪಿನ ಹಕ್ಕಿ’ಯ ಕುರಿತು ಸುಧಾ ಆಡುಕಳ ಬರಹ

Read More

ಸ್ಮಿತಾ ಅಮೃತರಾಜ್‌ ಪುಸ್ತಕದ ಕುರಿತು ವಸುಂಧರಾ ಕದಲೂರು ಬರಹ

“ಇಲ್ಲಿನ ಬಹುತೇಕ ಲಲಿತ ಪ್ರಬಂಧಗಳು ನಿರೂಪಣೆಯ ಮಾದರಿಯಲ್ಲಿವೆ. ಅವು ವಾಚಾಳಿಯಾಗಿವೆ, ಸರಳವಾಗಿವೆ. ಸಹಜ ನಿಯತ್ತಿನಿಂದ ಕೂಡಿವೆ. ಮುಚ್ಚುಮರೆಯಿಲ್ಲದೆ ಲೇಖಕರ ಹಳವಂಡಗಳನ್ನು ಪೆದ್ದುತನ, ಮುಗ್ಧತೆಯ ಭಾವನೆಯ ಹರವನ್ನು ಇವು ಒಳಗೊಂಡಿವೆ. ಇಲ್ಲಿನ ಪ್ರಬಂಧಗಳಲ್ಲಿನ ಕೆಲವಾರು ವಸ್ತು ವಿಚಾರಗಳನ್ನು ದೈನಂದಿನ ಚಕ್ರದಲ್ಲಿ ನಾವು ಕಂಡಿದ್ದರೂ ವಿಶೇಷ ಗಮನ ಹರಿಸದೆ ಕಡೆಗಣಿಸಿರುತ್ತೇವೆ.”
ಸ್ಮಿತಾ ಅಮೃತರಾಜ್‌ ಸಂಪಾಜೆ ಬರೆದ ‘ಒಂದು ವಿಳಾಸದ ಹಿಂದೆ’ ಪ್ರಬಂಧ ಸಂಕಲನ ಕುರಿತು ವಸುಂಧರಾ ಕದಲೂರು ಬರೆದ ಲೇಖನ

Read More

ಬಿ.ಆರ್.‌ಎಲ್ ಕವನ ಸಂಕಲನದ ಕುರಿತು ಕಾತ್ಯಾಯಿನಿ ಕುಂಜಿಬೆಟ್ಟು ಬರಹ

“ಹರೆಯದಲ್ಲಿ ಹೃದಯ ಕದ್ದ ಈ ಹುಡುಗಿ ಕವಿಯ ಬಾಳಿನುದ್ದಕ್ಕೂ ವ್ಯಾಪಿಸಿಕೊಳ್ಳುತ್ತಾಳೆ. ನಿನ್ನೆಯಿಂದ ಹಿಂಬಾಲಿಸುತ್ತ ಕವಿಯ ಪ್ರತಿ ಇಂದಿಗೂ ಕನಸಾಗುತ್ತ ಕಲ್ಪನೆಯಾಗುತ್ತ ಅಗಣಿತ ನಾಳೆಗಳ ಹಾಳೆಗಳಲ್ಲಿ ಮತ್ತೆ ಮತ್ತೆ ಹೊಸತು ಹೊಸತಾಗಿ ಅರಳುತ್ತ ಕಲಾಕೃತಿಯಾಗುತ್ತ ಓದುಗರ ಚಿತ್ತದಲ್ಲಿ ಉಳಿಯುವ ಮದುವೆಯಾಗದ ಲಾಲಿತ್ಯದ ಶಾಲೀನ ಚಿರಯವ್ವನದ ಕವನಕನ್ನಿಕೆ. ಕಾವ್ಯ ವಿಮಶೆ೯ಯ ಭಾಷೆಯಲ್ಲಿ ‘ನವನವೋನ್ಮೇಷ ಶಾಲಿನಿ’.”
ಬಿ.ಆರ್. ಲಕ್ಷ್ಮಣರಾವ್‌ ಬರೆದ ‘ನವೋನ್ಮೇಷ’ ಕವನ ಸಂಕಲನದ ಕುರಿತು ಕಾತ್ಯಾಯಿನಿ ಕುಂಜಿಬೆಟ್ಟು ಬರಹ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ