ಕಾವ್ಯದಿಂದ ಏನನ್ನು ನಿರೀಕ್ಷಿಸುತ್ತೇವೆ?: ಕಮಲಾಕರ ಕಡವೆ ಕೃತಿಗೆ ಸಿರಾಜ್ ಅಹಮದ್ ಮುನ್ನುಡಿ
‘ಮುಗಿಯದ ಮಧ್ಯಾಹ್ನʼ ಸಂಕಲನದಲ್ಲಿ ಸೂಚಿಸುವ ಹಾಗೆ ನಿಧಾನ ನಿಧನದತ್ತ ಸಾಗಿರುವ ಸುತ್ತಲಿನ ಜಗತ್ತಿನ ಬಗೆಗೆ ಕವಿ ಬಹಳ ವ್ಯಾಕುಲನಾಗಿದ್ದಾನೆ. ಇನ್ನೊಂದು ಬಗೆಯಲ್ಲಿ ಇದರಿಂದ ಅವನ ಅಂತರಂಗವೂ ಕ್ರಮೇಣ ವಿಕೃತಗೊಂಡಿರುವ ಸೂಚನೆಗಳು ಇಲ್ಲಿ ಸಿಗುತ್ತವೆ. ಹಕ್ಕಿ ಕಂಡರೂ ಅದು ಏರುವ ವಿಸ್ತಾರವನ್ನು ಕಾಣದ ಅದರ ಹಾರಾಟವನ್ನು ಶಂಕಿಸುವ ಮನಸುಗಳಿಗೆ ಮೊದಲು ಅವರದೇ ಎದೆಯೊಳಗಿನ ಹಕ್ಕಿಯೊಂದು ಸೊರಗಿ ಹೋಗುವ ದುರಂತವನ್ನು ಕವಿ ಕಾಣಿಸುತ್ತಾನೆ.
ಕಮಲಾಕರ ಕಡವೆ “ವಲಸೆ ಹಕ್ಕಿಗಳ ಹುಯಿಲು” ಕವನ ಸಂಕಲನಕ್ಕೆ ಎಸ್ ಸಿರಾಜ್ ಅಹಮದ್ ಮುನ್ನುಡಿ
