Advertisement
ಗೀತಾ ಹೆಗಡೆ

ಕವಯತ್ರಿ, ಲೇಖಕಿ ಗೀತಾ ಹೆಗಡೆಯವರಿಗೆ ಸಂಗೀತ ಮತ್ತು ಪ್ರಕೃತಿಯಲ್ಲಿ ಆಸಕ್ತಿ. ‘ಅಕ್ಷರ ಚೈತನ್ಯ’ ಇವರ ಪ್ರಕಟಿತ ಕೃತಿ.

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು, ಮಹಿಳೆಯು ಸಮಾಜದ ಒಂದು ಅಂಗ ಎಂಬುದು ಅಂಬೇಡ್ಕರ್ ಶಕೆ ಆರಂಭಗೊಂಡಾಗಿನಿಂದ ಅನೇಕರ ಕಣ್ಣು ತೆರೆಸಲು ಯತ್ನಿಸುತ್ತಲೇ ಬಂದಿದೆ. ಅದಕ್ಕೆ ಪೂರಕವಾಗಿ ಹಬ್ಬು ಸರ್, ಇಲ್ಲಿ ಆಚಾರ್ಯ ಕೃಪಲಾನಿ ಹೇಳಿದ ಹೀಗೊಂದು ಮಾತನ್ನು ನೆನೆಯುತ್ತಾರೆ, ‘ಹಕ್ಕಿಗೆ ಒಂದೇ ರೆಕ್ಕೆಯಿಂದ ಹೇಗೆ ಹಾರಲು ಸಾಧ್ಯವಿಲ್ಲವೋ ಹಾಗೆಯೇ ಮಹಿಳೆಯ ಅಭಿವೃದ್ಧಿಯಾಗದೇ ಇದ್ದಂತಹ ಸಮಾಜ ಕೂಡ ಅಂಥದೊಂದು ಅಂಗವಿಕಲತೆಯಿಂದ ಬಳಲುತ್ತದೆ’ ಈ ಮಾತು ಮಹಿಳೆಯರ ಸಮಾನ ಹಕ್ಕುಗಳನ್ನು ಪ್ರತಿಪಾದಿಸುತ್ತದೆ.
ಅರುಣಕುಮಾರ ಹಬ್ಬು ಅವರು ಬರೆದ “ಮಹಿಳೆ ಮತ್ತು ಮಾಧ್ಯಮ – ಒಂದು ಅವಲೋಕನ” ಕೃತಿಯ ಕುರಿತು ಸುನಂದಾ ಪ್ರಕಾಶ ಕಡಮೆ ಬರಹ

Read More

ವಿಶಿಷ್ಟ ಅನುಭವಗಳ ಮೊತ್ತ ‘ಅಂಗೈ ಅಗಲದ ಆಕಾಶ’

ಇಂಥ ಸ್ಮೃತಿಚಿತ್ರಗಳಲ್ಲಿ ಸತ್ಯದ ಪರಿಧಿಯಿಂದ ಹೊರಹೋಗಲು ಸಾಧ್ಯವಿಲ್ಲ, ಅಂದರೆ ಶುದ್ಧ ನೆನಪುಗಳು ಯಾವಾಗಲೂ ವಾಸ್ತವದಲ್ಲಿ ಜೀವಿಸಿರುತ್ತವೆ ಹಾಗಾಗಿ ಬರೆಯುವಾಗ ನಿರೂಪಕಿಯೂ ವಾಸ್ತವದಲ್ಲೇ ಜೀವಿಸಿರಬೇಕಾಗುತ್ತದೆ, ಕಲ್ಪನೆ ಇಲ್ಲಿ ಕೆಲಸ ಮಾಡದು. ಆಗ ಎಲ್ಲ ಕೋನದಿಂದ ನಿಂತು ನೋಡುವ ಆಯಾಮಗಳು ಕಳೆದುಹೋಗುತ್ತವೆ. ಆದರೆ ಸುಮಿತ್ರಾ ಅವರು ಕೆಲವು ಘಟನೆಗಳನ್ನು ಇಂದಿನ ಸಂದರ್ಭದಲ್ಲಿಟ್ಟು ತೂಗಿ ನೋಡುತ್ತಾರೆ. ಹಾಗಾಗಿ ಸನ್ನಿವೇಶಗಳಿಗೊಂದು ಬೇರೆಯದೇ ಆದ ತೂಕ ಪ್ರಾಪ್ತವಾಗುತ್ತದೆ.
ಡಾ. ಎಲ್. ಸಿ. ಸುಮಿತ್ರಾ ಅವರ ಸ್ಮೃತಿ ಚಿತ್ರಗಳ ಸಂಕಲನ “ಅಂಗೈ ಅಗಲದ ಆಕಾಶ”ದ ಕುರಿತು ಲೇಖಕಿ ಸುನಂದಾ ಕಡಮೆ ಬರಹ

Read More

ನಿರೂಪಣೆಯ ಹೊಸತನವನ್ನು ಮೆರೆಯುವ ‘ಫೀ ಫೋ’

ಸಮಕಾಲೀನತೆಯ ಬಿಕ್ಕಟ್ಟುಗಳಿಗೆ ಯುವ ತಲೆಮಾರು ತಮ್ಮನ್ನು ತಾವು ಒಡ್ಡಿಕೊಳ್ಳುತ್ತ ಮುಂದೆ ಸಾಗಿರುವುದರಿಂದ ಹೊಸತಲೆಮಾರಿನ ಕತೆಗಾರರ ಜೀವನಾನುಭವದ ಸ್ವರೂಪ ಈಗ ಬೇರೆಯಾಗಿದೆ. ಅದಕ್ಕೆ ಇವರು ಇಲ್ಲಿ ಪುಸ್ತಕಕ್ಕೆ ಬಳಸಿದ ಶಿರೋನಾಮೆ ‘ಫೀಫೋ’ನೂ ಒಂದು ಸಣ್ಣ ಸಾಕ್ಷಿ. ಫೀಫೋ ಇದು ಕಂಪ್ಯೂಟರಿನ ಭಾಷೆ, ಫಸ್ಟ್ ಇನ್ ಫಸ್ಟ್ ಔಟ್. ನಮ್ಮ ನೆನಪುಗಳು ಮತ್ತು ಅನುಭವಗಳು ಸ್ಮೃತಿ ಪಟಲದಲ್ಲಿ ಸರತಿ ಸಾಲಿನಲ್ಲಿ ನಿಂತಿರುತ್ತವೆ, ಮೊದಲು ನಿಂತದ್ದು ಮೊದಲು ಹೊರಬರಲೇ ಬೇಕು.
ಮಧುಸೂದನ್ ವೈ.ಎನ್.‌ ಬರೆದ ‘ಫಿಫೋ’ ಕಥಾಸಂಕಲನದ ಕುರಿತು ಸುನಂದಾ ಪ್ರಕಾಶ್ ಕಡಮೆ ಬರೆದ ಬರಹ ಇಲ್ಲಿದೆ

Read More

ಸುನಂದಾ ಕಡಮೆ ಬರೆದ ಸಣ್ಣ ಕಥೆ `ಪತ್ರೊಡೆ’

ಯಮುನಜ್ಜಿ ತನ್ನ ಸವತಿಯ ಜೊತೆಗಿನ ಅನೇಕ ವರ್ಷಗಳ ಕೂಡು ಸಂಸಾರದಲ್ಲಿ ಕಂಡುಕೊಂಡ ಅನುಭವವನ್ನು ನೆನಪಿಸುತ್ತ ಕನವರಿಸುತ್ತಿದ್ದಾಳೆ

Read More

ಭಾನುವಾರದ ವಿಶೇಷ: ಗೌರೀಶರಿಗೆ ತೊಂಬತ್ತೇಳು- ಸುನಂದಾ ಬರಹ

ನಾವು ದೇವರಿಂದ ಗಳಿಸಿಕೊಳ್ಳಲಾರದ್ದನ್ನು, ಹಿರಿಯರೂ ತಂದೆ ಸಮಾನರೂ ಆದ ಗೌರೀಶರಿಂದ ಪಡೆದಿದ್ದೇವೆ ಎಂಬುದಕ್ಕೆ ಈ ಮೇಲಿನ ಪ್ರಸಂಗ ಹೇಳಿದೆ. ಗೌರೀಶರ ಮನೆ ಇಂದಿಗೂ ನಮ್ಮ ಪಾಲಿಗೆ ಒಂದು ಮಧುರ ಅನುಭೂತಿಯ ಮಂದಿರವೇ ಸರಿ.

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪೌರಾಣಿಕ ಚೌಕಟ್ಟಿನಲ್ಲಿ ವರ್ತಮಾನದ ಕರ್ಣನನ್ನು ದರ್ಶಿಸಿದ ಕಾದಂಬರಿ ‘ಕವಚ’: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರಹ

‘ಕವಚ’ ಕಾದಂಬರಿಯು ಸಮಕಾಲೀನ ಬದುಕಿಗೆ ಅನ್ವಯವಾಗಬಲ್ಲ ಅನೇಕ ಸಂಗತಿಗಳನ್ನು ಪ್ರಸ್ತಾಪಿಸಿದೆ. ಗುರು ಪರಶುರಾಮರು ಅಸ್ತ್ರಗಳ ಪ್ರಯೋಗಕ್ಕೆ ಸಂಬಂಧಪಟ್ಟಂತೆ ಬೋಧನೆಯನ್ನು ನೀಡುವ ಸಂದರ್ಭದಲ್ಲಿ, ಆಕ್ರಮಣಗಳು ಸ್ವ-ರಕ್ಷಣೆಗಾಗಿಯೇ ಹೊರತು ಆಕ್ರಮಣಕ್ಕಲ್ಲ.…

Read More

ಬರಹ ಭಂಡಾರ