Advertisement

Category: ಪ್ರವಾಸ

ಆದಿಚುಂಚನಗಿರಿಯ ಕಾಲಭೈರವ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಮಂಡ್ಯಜಿಲ್ಲೆಯ ನಾಗಮಂಗಲ ತಾಲ್ಲೂಕಿಗೆ ಸೇರಿದ ಈ ಆದಿಚುಂಚನಗಿರಿ ಕ್ಷೇತ್ರ ನಾಥಪಂಥದ ಪ್ರವರ್ತಕನಾದ ಸಿದ್ಧಯೋಗಿಯಿಂದ ಸ್ಥಾಪಿತವಾದುದೆಂದು ಪ್ರತೀತಿ. ಸುದೀರ್ಘ ಗುರುಪರಂಪರೆಯ ಕೃಪೆಗೆ ಪಾತ್ರವಾದ ಈ ಕ್ಷೇತ್ರದ ಪೀಠವು ಈವರೆಗೆ ಎಪ್ಪತ್ತೊಂದು ಗುರುವರೇಣ್ಯರ ಆರೋಹಣದಿಂದ ಪಾವನವೆನಿಸಿಕೊಂಡಿದೆ. ಚೋಳರಿಂದ ಮೊದಲುಗೊಂಡು ಹೊಯ್ಸಳ, ಸಾಳ್ವ, ವಿಜಯನಗರ, ಯಲಹಂಕ ಮೊದಲಾದ ಅರಸುಮನೆತನಗಳವರೆಗೆ ಶತಶತಮಾನಗಳ ಕಾಲ…”

Read More

ನಾಡಕಲಸಿಯ ಜೋಡಿ ದೇಗುಲಗಳು: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಮಲ್ಲಿಕಾರ್ಜುನ ದೇವಾಲಯಕ್ಕೆ ಶಿಖರವಿಲ್ಲ. ರಾಮೇಶ್ವರ ಗುಡಿಗಿಂತ ವಿಸ್ತೀರ್ಣದಲ್ಲಿ ದೊಡ್ಡದಾದ ಈ ಗುಡಿ ನಕ್ಷತ್ರಾಕಾರದ ತಳಹದಿ ಹೊಂದಿದ್ದು ತೆರೆದ ಮಂಟಪದ ಕಕ್ಷಾಸನವೂ ನಕ್ಷತ್ರದ ಆಕಾರದಲ್ಲೇ ಮುಂದುವರೆದಿದೆ. ಮೂರು ಕಡೆ ತೆರೆದ ಬಾಗಿಲು. ಮುಂಭಾಗದ ಬಾಗಿಲಲ್ಲೇ ದೊಡ್ಡ ನಂದಿ ಶಿವನಿಗೆ ಅಭಿಮುಖನಾಗಿ ಕುಳಿತಿದ್ದಾನೆ. ನಂದಿಯ ಸಾಲಂಕೃತ ಶಿಲ್ಪ ಮುದ್ದಾಗಿದೆ. ನಂದಿಯ ಕಣ್ಣು, ಕಿವಿ, ಮುಖ…”

Read More

ಸೋಂದೆಯ ರಮಾ ತ್ರಿವಿಕ್ರಮ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಸೋಂದೆಯ ಶ್ರೀವಾದಿರಾಜಮಠದ ಆವರಣದಲ್ಲಿ ವಾದಿರಾಜ ಮತ್ತಿತರ ಯತಿಗಳ ವೃಂದಾವನಗಳಲ್ಲದೆ ಅನೇಕ ಪ್ರಾಚೀನ ಗುಡಿಗಳಿದ್ದು ಅವುಗಳಲ್ಲಿ ಶ್ರೀವಾದಿರಾಜರೇ (ಕ್ರಿ.ಶ.1585) ಸ್ಥಾಪಿಸಿದ ರಮಾ ತ್ರಿವಿಕ್ರಮದೇಗುಲವು ಪ್ರಮುಖವಾಗಿದೆ. ಮಠದ ಆವರಣದ ನಡುವೆ ಸ್ಥಿತವಾಗಿರುವ ಈ ಪ್ರಾಚೀನ ದೇಗುಲಕ್ಕೆ ಚಾಲುಕ್ಯಶೈಲಿಯ ಸರಳವಾದ ಶಿಖರ. ಆರು ಸ್ತರಗಳ ಮೇಲೆ ಲೋಹದ ಕಳಶ.”

Read More

ಶಾಲ್ಮಲಿಯ ಸಹಸ್ರಲಿಂಗ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ನೀರಿನಿಂದ ಮೇಲೆದ್ದ ದೊಡ್ಡ ಬಂಡೆಯೊಂದು ಶಿಲ್ಪಿಯೋರ್ವನಿಗೆ ಬಸವಣ್ಣನಂತೆ ತೋರಿ ಒಂದೆಡೆ ಮುಖಭಾಗವನ್ನೂ ಬಂಡೆಯ ಅಂಚಿಗೆ ಬೆನ್ನುಭಾಗವನ್ನೂ ಕೆತ್ತಿದ್ದಾನೆ. ನಡುವಣ ಬಂಡೆ ಯಥಾರೂಪದಲ್ಲೇ ಇದೆ. ಸಾಮಾನ್ಯವಾಗಿ ಶಿವಾಲಯಗಳ ಬಾಗಿಲಲ್ಲಿ ಕಂಡುಬರುವ ಪುರುಷಾಮೃಗಕ್ಕೂ ಇಲ್ಲಿ ಸ್ಥಾನ ಕಲ್ಪಿಸಲಾಗಿದೆ. ಮನುಷ್ಯನ ಮುಖ, ಪ್ರಾಣಿಯ ದೇಹವಿದ್ದು ಘಂಟಾನಾದ ಮಾಡುವ ಕಾಯಕದಲ್ಲಿ ಈ ಪುರುಷಾಮೃಗ…”

Read More

ದೊಡ್ಡಗದ್ದವಳ್ಳಿಯ ಲಕ್ಷ್ಮೀದೇವಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಕಾಳಿಕಾದೇವಿ ಅಷ್ಟಭುಜಗಳಲ್ಲಿ ಬಗೆಬಗೆಯ ಆಯುಧಗಳನ್ನು ಧರಿಸಿ ತಾನು ಸಂಹರಿಸಿದ ದೈತ್ಯನ ಮೇಲೆ ಕುಳಿತಿದ್ದಾಳೆ. ಶಿಲ್ಪದ ಪ್ರಭಾವಳಿಯಲ್ಲಿ ಬೇತಾಳಗಣಗಳು ಆಯುಧಗಳನ್ನು ಹಿಡಿದು ನರ್ತಿಸುತ್ತಿರುವಂತೆ ರೂಪಿಸಿರುವುದು ಸ್ವಾರಸ್ಯಕರವಾಗಿದೆ. ಗರ್ಭಗುಡಿಯ ಬಾಗಿಲವಾಡದ ಮೇಲೆ ಕಾಳಿಯ ಮುಖವನ್ನು ಚಿತ್ರಿಸಿದೆ. ಉಳಿದ ಗರ್ಭಗುಡಿಗಳಲ್ಲಿ ಭೈರವನ ಮೂರ್ತಿಯನ್ನೂ ಶಿವಲಿಂಗವನ್ನೂ ಇರಿಸಲಾಗಿದೆ. ಶಿವಲಿಂಗದ ಎದುರಿಗೆ ನವರಂಗದಲ್ಲಿ….”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ