Advertisement

Category: ಸಂಪಿಗೆ ಸ್ಪೆಷಲ್

ಸ್ತ್ರೀ ವೇಷ: ಕೆಲವು ಬಿಡಿ ಆಲೋಚನೆಗಳು

ಶೈಲೀಕೃತ ಮಾಧ್ಯಮವಾದ ಯಕ್ಷಗಾನದಲ್ಲಿನ ಸ್ತ್ರಿ ಪಾತ್ರದ ಅತೀ ನಾಟಕೀಯತೆಯ ಶಕ್ತಿಯನ್ನು ಅರ್ಥಮಾಡಿಕೊಳ್ಳುವುದಕ್ಕೆ, ಅದು ನನಗೆ ಪ್ರತಿರೋಧದ ಮಾದರಿಯಾಗಿ ಕಾಣುವುದಕ್ಕೆ ಅಥವಾ ಹಲವು ಸಾಧ್ಯತೆಗಳಿವೆ ಎಂದು ಅನ್ನಿಸುವುದಕ್ಕೆ ಸ್ವಲ್ಪ ವಿವರಣೆ ಬೇಕಾಗಬಹುದು. ಪ್ರಸಂಗಗಳನ್ನು ನೋಡುವಾಗ ಸ್ತ್ರೀ ಪಾತ್ರಗಳ ಆಯಾಮ ಹೆಚ್ಚಾಗಿ ಹೇಗಿರುತ್ತದೆ ಎಂದರೆ ಮೇಲೆ ಹೇಳಿದ ಮೌಲ್ಯಗಳ ಪ್ರಸಾರ ಅಥವಾ ಬೋಧನೆ ರೂಪದಲ್ಲಿರುತ್ತದೆ. ಅಂದರೆ ಹೆಣ್ಣು ಹೇಗಿರಬೇಕೆಂದು ಉಪದೇಶ ಮುಗಿಸಿ, ಈಗ ಮುಂದಿನ ಕತೆಯೊ, ದೃಶ್ಯಕ್ಕೊ ಹೋಗುವುದು ಅನ್ನುವ ಹಾಗಿರುತ್ತದೆ.
ಕೃತಿ ಆರ್ ಪುರಪ್ಪೇಮನೆ ಬರೆಯುವ ಅಂಕಣ “ಯಕ್ಷಾರ್ಥ ಚಿಂತಾಮಣಿ”

Read More

ಸ್ಪರ್ಧೆಗಳ ಗುಂಗಿನಲ್ಲೊಂದು ಕಥಾ ಕಾಲಕ್ಷೇಪ

ಕಾವ್ಯ, ಪ್ರಬಂಧ, ನಾಟಕ, ಪದ್ಯ, ಕಂದ ಪದ್ಯಗಳು, ಚುಟುಕು, ಸುನೀತ ಎಂದೆಲ್ಲ ಹತ್ತಾರು ಪ್ರಕಾರಗಳನ್ನು ನಾವು ಸಾಹಿತ್ಯ ಲೋಕದಲ್ಲಿ ಗುರುತಿಸಿದರೂ, ಈ ಕತೆಯೆಂಬ ಮಾಯಾವಿ ಮಾತ್ರ ಈ ಎಲ್ಲ ಪ್ರಕಾರದೊಳಗೂ, ಹೂವೊಳಗೆ ಕಂಪು ಸೇರಿದಂತೆ ವ್ಯಾಪಿಸಿಕೊಂಡುಬಿಡುತ್ತದೆ. ಕಾವ್ಯದೊಳಗೊಂದು ಕತೆಯ ಛಾಯೆಯಿರುತ್ತದೆಯಲ್ಲವೇ. ಪ್ರಸ್ತುತ ಸಾಹಿತ್ಯ ಲೋಕದ ಸ್ಪರ್ಧೆಗಳನ್ನು ತೆಗೆದುಕೊಂಡರೂ, ಕಥಾ ಸ್ಪರ್ಧೆಗಳು ಸದ್ದು ಮಾಡಿದಷ್ಟು ಇತರ ಸ್ಪರ್ಧೆಗಳು ಸದ್ದು ಮಾಡುವುದು ಅಪರೂಪ. ಕೋಡಿಬೆಟ್ಟು ರಾಜಲಕ್ಷ್ಮಿ ಬರಹ ಇಲ್ಲಿದೆ.

Read More

ಸಹೃದಯರ ಅಂತರಂಗವನ್ನು ಘಾಸಿಗೊಳಿಸುವ ಕ್ಷಣಗಳಿವು

ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಭಿನ್ನಾಭಿಪ್ರಾಯಗಳನ್ನು ಒಪ್ಪಿಕೊಳ್ಳುವ, ತಪ್ಪುಗಳನ್ನು ತಿದ್ದಿಕೊಳ್ಳುವ ಸುಂದರ ವಾತಾವರಣವು ಮಾಸಿ ಹೋಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ಬರಹಗಾರರು ಗೊಂದಲದ ಮನಸ್ಥಿತಿಯಲ್ಲಿದ್ದಾರೆ. ನಿಜವಾಗಿಯೂ ಸಾಹಿತ್ಯ ಕೃತಿಯೊಂದರ ಉದ್ದೇಶವೇನಪ್ಪಾ ಎಂಬ ಪ್ರಶ್ನೆಯೊಂದು ಧುತ್ತನೇ ನಮ್ಮೆದುರು ನಿಂತಿರುವಂತಿದೆ. ಈ ಹಿನ್ನೆಲೆಯಲ್ಲಿ ಕಾದಂಬರಿಕಾರ ಶ್ರೀಧರ ಬಳಗಾರ ಅವರೊಡನೆ ಕೋಡಿಬೆಟ್ಟು ರಾಜಲಕ್ಷ್ಮಿ ನಡೆಸಿದ ಮಾತುಕತೆಯ ತುಣುಕೊಂದು ಇಲ್ಲಿದೆ.

Read More

ಚಹಾ ಎಂಬ ಖಾಸಾ ದೋಸ್ತನ ಕತಿಯಿದು

ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಚಹದಷ್ಟು ಪ್ರಿಯವಾದ ಪಾನೀಯ ಮತ್ತೊಂದಿಲ್ಲ. ಪರೀಕ್ಷೆಗೆ ಸಿದ್ಧತೆ ನಡೆಸುವ ಸಂದರ್ಭದಲ್ಲಿ ಚಹದ ಬೇಡಿಕೆ ಮತ್ತು ಪೂರೈಕೆ ತುಂಬ ಹೆಚ್ಚಾಗಿರುತ್ತದೆ. ಅರ್ಧ ತಾಸಿಗೊಮ್ಮೆ ಚಹ ಕುಡಿಯದಿದ್ದರೆ ಓದಲು ಮನಸ್ಸೇ ಬರುವುದಿಲ್ಲ. ಪರೀಕ್ಷೆಯ ಸೀಜನ್ನು ಬಂದಾಗ ಧಾರವಾಡದಲ್ಲಿ ಅರ್ಧ ರಾತ್ರಿಯವರೆಗೂ ಚಹದಂಗಡಿಗಳು ತೆರೆದಿರುತ್ತವೆ.
ಉತ್ತರ ಕರ್ನಾಟಕದಲ್ಲಿ ಜನಜೀವನದ ಭಾಗವೇ ಆಗಿರುವ ಚಹ ಸೇವನೆಯ ಕುರಿತು ವಿಕಾಸ ಹೊಸಮನಿ ಬರೆದ ಪ್ರಬಂಧ ನಿಮ್ಮ ಓದಿಗೆ

Read More

ಕಷ್ಟಸುಖಗಳಿಗೆ ಹೆಗಲಾಗಿದ್ದ ಶೆಟ್ಟರಂಗಡಿ

ಮುದ್ರಾಡಿ ಕೃಷ್ಣ ಶೆಟ್ಟರೆಂದರೆ ಸದಾ ಸುದ್ದಿಯಲ್ಲಿದ್ದ ಗಣ್ಯವ್ಯಕ್ತಿಯೇನಲ್ಲ. ಆದರೆ ಬಹರೈನ್ ಕನ್ನಡಿಗರಿಗೆ ಸದಾ ಬೇಕಾಗಿದ್ದ ಪ್ರೀತಿ ಪಾತ್ರರಾಗಿದ್ದ ಸರಳ ವ್ಯಕ್ತಿ. ಪುಟ್ಟದೊಂದು ಟೈಲರ್ ಅಂಗಡಿ ಇಟ್ಟುಕೊಂಡು ಅವರು ಕಳೆದ 21 ವರ್ಷಗಳಿಂದ ಬಹರೈನ್ ನಲ್ಲಿ ಜೀವನ ಸಾಗಿಸುತ್ತಿದ್ದರು. ತಮ್ಮೂರನ್ನುಬಿಟ್ಟು ಬಂದು ಸದಾ ದುಡಿಮೆಯಲ್ಲಿಯೇ ತೊಡಗಿಕೊಂಡು ಬಾಳುವ ಕರ್ನಾಟಕದ ಕರಾವಳಿಯ ಬೃಹ ತ್ ಸಮುದಾಯದ ಪ್ರತಿನಿಧಿಯಂತೆ ಗೋಚರಿಸುತ್ತಿದ್ದರು. ಅವರು ಇತ್ತೀಚೆಗೆ ಅಗಲಿದಾಗ, ಕಾಡಿದ ನೋವನ್ನೇ ಬರಹವಾಗಿಸಿದ್ದಾರೆ ಬಹರೈನ್ ನಿವಾಸಿ, ಕನ್ನಡಿಗ ವಿನೋದ್.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ