ಪೂರಂ ಎಂಬ ಸಂಭ್ರಮವೂ ಆನೆಗಳ ಗಾಂಭೀರ್ಯವೂ
ನಾವು ಅಲ್ಲಿಗೆ ಹೋಗಿ ತಾಸು ಹೊತ್ತಿನ ಮೇಲೆ ಒಂದೊಂದೇ ಆನೆಗಳು ಮೆಲ್ಲಗೆ ತಮ್ಮ ಮೇಲೆ ನಿಂತಿದ್ದ ಎರಡು-ಮೂರು ಜನ ಹಾಗೂ ಮಾವುತರೊಟ್ಟಿಗೆ, ದೇವಸ್ಥಾನದ ಒಳಗೆ ಹೊರಡಲಾರಂಭಿಸಿದವು. ನಮಗೆ ಮೂರ್ನಾಲ್ಕು ಆನೆಗಳನ್ನು ಹತ್ತಿರದಿಂದಲೇ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿತು. ಇನ್ನೇನು ಆ ಕಾರ್ಯಕ್ರಮ ಮುಗಿಯುವ ಹಂತಕ್ಕೆ ಬಂದಾಗ, ನಾವು ಮೆಲ್ಲನೆ ಅಲ್ಲಿಂದ ಹೊರಟು, ಕಾಂಪೌಂಡ್‌ನ ಇನ್ನೊಂದು ಬದಿಗೆ ಬಂದು, ಆನೆಗಳ ಸಾಲು ನಿಂತಿದ್ದಲ್ಲಿಗೆ ಹೋದಾಗ, ಅಲ್ಲಿ ಆಗಲೇ ಜನರ ಗುಂಪು ಮೆಲ್ಲನೆ ಕರಗಲಾರಂಭಿಸಿದ ಕಾರಣ, ಅಲ್ಲಿ ಇನ್ನೊಂದಷ್ಟು ಹತ್ತಿರದಿಂದ ಆನೆಗಳನ್ನು ಕಾಣಲು ಸಿಕ್ಕಿತು.
ಕೇರಳದ ತ್ರಿಶ್ಶೂರ್ ಪೂರ ಕುರಿತು ತಮ್ಮ ಅನುಭವಗಳನ್ನು ಬರೆದಿದ್ದಾರೆ ರೂಪಶ್ರೀ ಕಲ್ಲಿಗನೂರ್
