Advertisement

Category: ಸರಣಿ

ಹಾರಿ ಹೋದ ಗುಂಡು, ಜಾರಿ ಹೋದ ನ್ಯಾಯ

ಅದೊಂದು ದಿನ ಅಲ್ಲಿಗೆ ಗುಂಡೇಟಿನಿಂದ ಗಾಯಗೊಂಡ ಓರ್ವ ವ್ಯಕ್ತಿಯನ್ನು ಕೆಲವರು ಕರೆದುಕೊಂಡು ಬಂದಿದ್ದರು. ಕರ್ತವ್ಯದಲ್ಲಿ ಇದ್ದ ವೈದ್ಯರು ಆಗಷ್ಟೇ ಸರಕಾರೀ  ಕೆಲಸಕ್ಕೆ ಸೇರಿಕೊಂಡಿದ್ದರು. ತಮ್ಮ ಶಿಕ್ಷಣದ ದಿನಗಳಲ್ಲಿ ಕೆಲವು ಅಪಘಾತದ ಕೇಸುಗಳನ್ನು ನೋಡಿದ್ದರೂ, ಗುಂಡೇಟಿನ ಗಾಯಾಳುವನ್ನು ಅವರು ಎಂದೂ ನೋಡಿರಲಿಲ್ಲ.  ರೋಗಿಯನ್ನು ಪರೀಕ್ಷಿಸಿದಾಗ, ಆತನ ಎದೆಯ ಎರಡೂ ಭಾಗದ ಮೇಲೆ ಒಂದೊಂದು ಗಾಯದ ಗುರುತುಗಳು ಕಂಡು ಬಂದು ಅವುಗಳಿಂದ ರಕ್ತಸ್ರಾವವಾಗುತ್ತಿತ್ತು. ಡಾ.ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’ ಸರಣಿಯ ಬರಹ:

Read More

ನಮ್ಮ ಭೂಮಿಯ ವಯಸ್ಸೆಷ್ಟು?

ಪ್ರಾಚೀನ ಗ್ರೀಕ್ ತತ್ವಶಾಸ್ತ್ರಜ್ಞರಿಂದ ಹಿಡಿದು, ಧಾರ್ಮಿಕ ಗುರುಗಳೂ, ಮೇಧಾವಿಗಳೂ ಈ ಪ್ರಶ್ನೆಗೆ ತಮ್ಮದೇ ವಿಧಾನಗಳಲ್ಲಿ ಉತ್ತರ ನೀಡಲು ಪ್ರಯತ್ನಿಸಿದ್ದಾರೆ.  ಉದಾಹರಣೆಗೆ, ಬೈಬಲ್ ಆಧಾರದ ಮೇಲೆ, “ಆದಿ ಮಾನವ” ಆಡಂ ನ ವರೆಗಿನ ತಲೆಮಾರುಗಳ ಲೆಕ್ಕದಲ್ಲಿ, ನಮ್ಮ ಭೂಮಿಗೆ, ಕೇವಲ ಆರರಿಂದ ಹತ್ತು ಸಾವಿರ ವರ್ಷದ ಹರೆಯ. ಆದರೆ, ಹತ್ತೊಂಬತ್ತನೆಯ ಶತಮಾನದ ಖ್ಯಾತ ಭೌತಶಾಸ್ತ್ರಜ್ಞ ಲಾರ್ಡ್ ಕೆಲ್ವಿನ್ನನ ಲೆಕ್ಕಾಚಾರದ ಪ್ರಕಾರ, ಭೂಮಿಗೆ ಸುಮಾರು ಹತ್ತು ಕೋಟಿ ವರ್ಷ ವಯಸ್ಸು. ಕೆಲ್ವಿನ್ನನ ಲೆಕ್ಕಾಚಾರ, ಅವನ ಸಮಕಾಲೀನನಾಗಿದ್ದ…

Read More

ಭಟ್ಟಿ ಇಳಿಸುವಿಕೆ ಮತ್ತು ಕಾರ್ಪೆಂಟರಿ ಕೆಲಸಗಾರರಾದುದು

ಸಾಮಾನ್ಯವಾಗಿ ಎಲ್ಲಾ ಅರಣ್ಯವಾಸಿ ಬುಡಕಟ್ಟುಗಳಲ್ಲಿ ಭಟ್ಟಿ ಇಳಿಸುವ ಕ್ರಿಯೆ ಸಾಮಾನ್ಯವಾಗಿರುವಂಥದ್ದು. ಅದರಲ್ಲೂ ಕ್ರಿಮಿನಲ್ ಟ್ರೈಬ್ಸ್ ಎಂದು ಹಣೆಪಟ್ಟಿಕಟ್ಟಿಕೊಂಡ ಸಮುದಾಯಗಳಲ್ಲಂತೂ ಈ ಪ್ರಕ್ರಿಯೆ ಸಹಜವಾಗಿತ್ತು. ಭಟ್ಟಿಸೆರೆ ಅಥವಾ ಕಳ್ಳು ಆಯಾ ಸಮುದಾಯದ ಆಚರಣೆ ಮತ್ತು ನಂಬಿಕೆಗಳ ಭಾಗವಾಗಿ ಬರೆತುಹೋಗಿತ್ತು. ಇದಕ್ಕೆ ಆಚರಣಾತ್ಮಕ ಮೌಲ್ಯವೂ ಬಂದಿತ್ತು. ಈ ಎಲ್ಲಾ ಕಾರಣದಿಂದಾಗಿ ಭಟ್ಟಿ ಸೆರೆ ತೆಗೆಯುವುದು ಗಂಟಿಚೋರ ಸಮುದಾಯಕ್ಕೆ ಸಹಜವಾದ ಕಸುಬಾಗಿತ್ತು.
ಡಾ.ಅರುಣ್ ಜೋಳದ ಕೂಡ್ಲಿಗಿ ಬರೆಯುವ ‘ಗಂಟಿಚೋರರ ಕಥನಗಳು’ ಸರಣಿಯ ಹನ್ನೊಂದನೆಯ ಕಂತು.

Read More

ಡೈರಿ ಆಫ್‌ ಅ ವಿಂಪಿ ಕಿಡ್ : ನಮ್ಮಂತೆಯೇ ಅವರು, ಅವರಂತೆಯೇ ನಾವು

ಅವನು ಒಂದು ದಿನ ಹೀಗೆ ಯೋಚಿಸುತ್ತಾನೆ: ತಾನು ಮಂದೆ ದೊಡ್ಡವನಾದಮೇಲೆ ಬಹಳ ಪ್ರಸಿದ್ಧ ವ್ಯಕ್ತಿಯಾದರೆ ಹೇಗಿರಬಹುದು, ಜನರೆಲ್ಲಾ ತನ್ನನ್ನು ಗುರುತಿಸುತ್ತಾರೆ, ಎಲ್ಲರಿಗೂ ತಾನೆಂದರೆ ಯಾರು ಅಂತ ತಿಳಿದಿರುತ್ತದೆ. ಹಾಗೆ ತನ್ನ ಹುಟ್ಟಿದ ಹಬ್ಬದಂದು ರಜಾ ದಿನ ಕೂಡಾ ಘೋಷಣೆಯಾಗಬಹುದು. ಅದು ಸಂತಸದ ವಿಷಯವೇ ಆದರೂ ಕೆಲವು ತನಗೆ ಮುಜುಗರ ತರಿಸಬಹುದು. ಉದಾಹರಣೆಗೆ – ‘ಗ್ರೆಗ್ ದಿನದ ಮೆಗಾ ಸೇಲ್. ಕಾಚಾ ಬನಿಯನ್ ಮೇಲೆ ಎಷ್ಟೋ ಪ್ರತಿಶತ ಕಡಿತ’ ಅನ್ನೋ ತರಹದ ಜಾಹಿರಾತುಗಳು ಬಂದು ತನ್ನ ಹುಟ್ಟುಹಬ್ಬಕ್ಕೆ ಬೆಲೆಯೇ ಇರದ ಸನ್ನಿವೇಶ ಬರಬಹುದು ಎಂದೂ ಚಿಂತಿಸುತ್ತಾನೆ.
‘ಓದುವ ಸುಖ’ ಅಂಕಣದಲ್ಲಿ “ಡೈರಿ ಆಫ್‌ ಅ ವಿಂಪಿ ಕಿಡ್ಸ್‌” ಸರಣಿಯ ಕುರಿತು ಗಿರಿಧರ್ ಗುಂಜಗೋಡು ಬರಹ

Read More

ಅಳುವ ಕಡಲಿನ ನಗೆಯ ದೋಣಿ

ಕರ್ನೊ ಕಂಪೆನಿ ಒದಗಿಸಿದ ಅವಕಾಶ ಚಾಪ್ಲಿನ್ ನ ಬದುಕಿಗೆ ದೊಡ್ಡ ತಿರುವು ಆಧಾರ ನೀಡಿತು. ಲಂಡನ್ನಿನ ಲಾಂಬೆತ್ ಪ್ರದೇಶದ “ಗ್ಲೇನ್ ಷಾ ಮ್ಯಾನ್ಷನ್ಸ್” ಎನ್ನುವ ಬಹುಮಹಡಿ ವಸತಿಯ 15 ನೆಯ ನಂಬ್ರದ ಫ್ಲಾಟ್ ಮೊದಲ ಸ್ವಂತದ ಬಿಡಾರವಾಯಿತು. ಚಾರ್ಲಿಯ ತಾಯಿಯ ಮೊದಲ ಸಂಗಾತಿಯ ಮಗ ಸಿಡ್ನಿ ಹಾಗು ಚಾರ್ಲಿ ಇಲ್ಲಿ ಜೊತೆಗೆ ಇರಲಾರಂಭಿಸಿದರು. ಮೂರನೆಯ ಮಹಡಿಯಲ್ಲಿದ್ದ ಈ ಮನೆಯನ್ನು “ಬದುಕಿನುದ್ದಕ್ಕೂ ಮೆಲುಕುಹಾಕುವ ಸ್ವರ್ಗ” ಎಂದು ಚಾರ್ಲಿ ಚಾಪ್ಲಿನ್ ಹೇಳಿಕೊಂಡದ್ದಿದೆ.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ