Advertisement

Category: ಸರಣಿ

ಕೊನೆಯ ಬುಲೆಟ್ಟು ಹಾರುವ ಮುನ್ನ….

ದುನ್ಯಾ ಅವನ ಹತ್ತಿರವೇ ನಿಂತಿದ್ದಳು. ಸೇತುವೆಯ ಮೇಲೆ ಕಾಲಿಡುತ್ತಿದ್ದ ಹಾಗೇ ರಾಸ್ಕೋಲ್ನಿಕೋವ್ ಅವಳನ್ನ ನೋಡಿದ್ದ, ಗಮನಿಸದೆ ಮುಂದೆ ಹೋಗಿದ್ದ. ದುನ್ಯಾ ಹೀಗೆ ಯಾವತ್ತೂ ಅವನನ್ನ ರಸ್ತೆಯ ಮೇಲೆ ನೋಡಿರಲಿಲ್ಲ. ಈಗ ಹೀಗೆ ಅವನನ್ನು ನೋಡಿ ಭಯವಾಯಿತು. ನಿಂತಳು. ಹೇಮಾರ್ಕೆಟ್ಟಿನ ಕಡೆಯಿಂದ ಸ್ವಿದ್ರಿಗೈಲೋವ್ ಬರುತ್ತಿರುವುದನ್ನು ದುನ್ಯಾ ತಟ್ಟನೆ ಗಮನಿಸಿದ್ದಳು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

Read More

ಅತ್ತೆಯರ ಲೋಕದಲ್ಲಿ ನಾನೆಷ್ಟೋಂದು ಅತ್ತೆ…

ಒಂದು ದಿನ ಎದೆ ಬಡಿತವ ಸುಧಾರಿಸಿಕೊಂಡು ಎಲ್ಲರ ಜೊತೆ ಏನೋ ಜೋಕು ಹೇಳುತ್ತಾ ನಗಿಸುತ್ತಿದ್ದೆ. ಅಷ್ಟು ದೂರದ ಆಚೆ ಮೂಲೆಯಲ್ಲಿ ಮರದಡಿ ನಿಂತು ಯಾರೊ ಹೆಂಗಸರು ಗಮನಿಸುತ್ತಿದ್ದಾರೆಂಬ ಅನುಮಾನ ಬಂತು. ಗಮನಿಸಿ ಅವರತ್ತ ದಿಟ್ಟಿಸಿದೆ. ಅವರು ನನ್ನನ್ನು ಹೇಗೆ ನೋಡುತ್ತಿದ್ದರೆಂಬುದಕ್ಕೆ ನನ್ನ ಬಳಿ ವಿವರಿಸಲು ತಕ್ಕ ಶಬ್ದಗಳೇ ಇಲ್ಲ. ಮೈ ಜುಂ ಎಂದು ಕತ್ತಲಿಡಿದಂತಾಯಿತು. ಒಂದು ಕ್ಷಣ ಮೈ ನೀರು ತುಳುಕಿದಂತಾಗಿ ಕೆಳಗೆ ಒಂದು ಹನಿ ನೀರು ಜಾರಿತ್ತು. ಗಂಟಲು ಕೂಡಲೇ ಒಣಗಿತು.
ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಎರಡನೆಯ ಕಂತು

Read More

ಹದಿಮೂರನೇ ರೂಮಿನಲ್ಲಿ ವಾಸ್ತವ್ಯದ ಮಹಿಮೆ

ಯಾವುದಕ್ಕೂ ಕಂಡೀಷನ್ ಹಾಕದ ನಮ್ಮ ಸೀನಿಯರ್ಸ್ ಒಂದು ವಿಷಯಕ್ಕೆ ಮಾತ್ರ ನಿರ್ಬಂಧ ಹೇರಿದ್ದರು. ರೂಮಿನ ಹಿಂಗೋಡೆಯಲ್ಲಿ ಒಂದು ಕಿಟಕಿ ಇತ್ತು. ಆ ಕಿಟಕಿ ಹತ್ತಿರ ಮಾತ್ರ ನಮ್ಮನ್ನ ಕೂರಲು ಬಿಡುತ್ತಿರಲಿಲ್ಲ. ಬದಲಿಗೆ ರಂಗಸ್ವಾಮಿ ಮತ್ತು ಕೃಷ್ಣಮೂರ್ತಿ ಮಧ್ಯಾಹ್ನ ಕಾಲೇಜು ಮುಗಿಸಿಕೊಂಡು ಬಂದವರೇ ಕಿಟಕಿ ಓಪನ್ ಮಾಡಿಕೊಂಡು ಹಾಜರಿರುತ್ತಿದ್ದರು. ಅವರೇಕೆ ಈ ನಿರ್ಬಂಧ ಹೇರಿದ್ದಾರೆ ಎಂಬುದನ್ನು ನಾವು ಬಹಳ ತಡವಾಗಿ ಪತ್ತೆ ಮಾಡಿದ್ದೆವು.
‘ಟ್ರಂಕು ತಟ್ಟೆ’ ಸರಣಿಯಲ್ಲಿ ಗುರುಪ್ರಸಾದ್ ಕಂಟಲಗೆರೆ ಬರೆದ ಹಾಸ್ಟೆಲ್ ಜೀವನಾನುಭವದ ಬರಹ  ಇಲ್ಲಿದೆ.

Read More

ಪ್ರಸಂಗ ರಚನೆಯ ಕೌಶಲಕ್ಕೆ ಸಿಕ್ಕಿದ ವೇದಿಕೆ ‘ಪೊಳಲಿ’

ಕಿರಿಯ ಬಲಿಪರು ಪೂರ್ಣ ಪ್ರದರ್ಶನವೊಂದರಲ್ಲಿ ಮೊದಲು ಭಾಗವತಿಕೆ ಮಾಡಿದ್ದು ಪೊಳಲಿ ಎಂಬಲ್ಲಿ.  ಪ್ರಸಂಗ ಹೊಸದಾಗಿದ್ದರೆ ಆಟಕ್ಕೆ ಅವಕಾಶ ನೀಡಬಹುದು ಎಂದು ಆಡಿಸುವವರ ಷರತ್ತು.  ಪ್ರದರ್ಶನದ ದಿನದಂದೇ, ಹೊಸ  ಕಥೆಯನ್ನು ಪೊಳಲಿಯ ಶೀನಪ್ಪ ಹೆಗಡೆಯವರು ಹೇಳುವುದು ಎಂದು ನಿರ್ಧಾರವಾಯಿತು.  ಬಲಿಪರು ನಿರ್ಧಾರವಾದ ಆಟವನ್ನು ಯಾವುದೇ ಕಾರಣಕ್ಕೂ ಬಿಡುವಂತಿಲ್ಲ ಎಂದು ತೀರ್ಮಾನಿಸಿ ಬಳಿಯ ಅಂಗಡಿಯಲ್ಲಿ…

Read More

ವಿಷ ವರ್ತುಲದ ಒಂದು ವಿಚಿತ್ರ ವೃತ್ತಾಂತವು..

ಆಕೆಯ ಹೆಸರು ರೇಖಾ, ವಯಸ್ಸು ಇಪ್ಪತ್ತೈದು. ಗಂಡ ಕಾರ್ಯಪ್ಪನ ಪ್ರಕಾರ ಸಾಧಾರಣವಾಗಿ ಆರೋಗ್ಯವಾಗಿಯೇ ಇದ್ದ ಆಕೆ ಅಂದು ರಾತ್ರಿ ಪಕ್ಕನೆ ಎದೆ ನೋವು, ಸುಸ್ತು ಎನ್ನುತ್ತ ವಾಂತಿ ಮಾಡತೊಡಗಿದ್ದಳು. ತುಂಬಾ ಸುಸ್ತಾಗಿದ್ದ ಆಕೆ ನರಳುತ್ತಾ ತನಗೆ ಉಸಿರಾಡಲು ತೊಂದರೆಯಾಗುತ್ತಿದೆ, ತುಂಬಾ ತಲೆನೋವು, ತಲೆ ತಿರುಗುತ್ತಿದೆ, ಕಿವಿಯಲ್ಲಿ ಏನೋ ಶಬ್ಧ ರಿಂಗಣಿಸುತ್ತಿದೆ ಎನ್ನುತ್ತಿದ್ದಳು. ನಾನು ಚಿಕಿತ್ಸೆ ಮಾಡುತ್ತಿದ್ದಂತೆಯೇ, ಆಕೆಗೆ ಅಪಸ್ಮಾರ ಬಂತು.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ