Advertisement

Category: ಸರಣಿ

ನವೋದಯದ ಶ್ರೇಷ್ಠಕವಿ ಕಡೆಂಗೋಡ್ಲು

ಕನ್ನಡ ಸಾಹಿತ್ಯ ಲೋಕದಲ್ಲಿ  ತಮ್ಮ ಕಾವ್ಯ ಪ್ರತಿಭೆಯ ಮೂಲಕ ಕಂಡೆಂಗೋಡ್ಲು ಶಂಕರ ಭಟ್ಟರು ಪ್ರಧಾನವಾಗಿ ಗುರುತಿಸಿಕೊಂಡಿದ್ದರೂ, ಅವರ ಜೀವನ ಪಥ ಬಹುಮುಖಿಯಾಗಿತ್ತು.  ಸ್ವಾತಂತ್ರ್ಯ ಚಳವಳಿಯಲ್ಲಿ ಅವರು ಎಷ್ಟೊಂದು ಸಕ್ರಿಯರಾಗಿದ್ದರು ಎಂಬುದಕ್ಕೆ ಅವರು 1921ರಲ್ಲಿ ಬರೆದ ‘ವಸ್ತ್ರಾಪಹರಣ’ ಖಂಡಕಾವ್ಯವೇ ಸಾಕ್ಷಿ. ಖಾದಿ ಮಾರಾಟ, ಮದ್ಯ ಮಾರಾಟ ವಿರೋಧ, ಸ್ತ್ರೀಪರ ಧ್ವನಿ, ಶೋಷಿತರ ಪರ ನಿಲುವುಗಳೊಂದಿಗೆ ತಮ್ಮ ಸಾಹಿತ್ಯ ಪ್ರಯಾಣವನ್ನು ಶ್ರೀಮಂತವಾಗಿಸಿಕೊಂಡಿದ್ದರು. ಡಾ.ಬಿ. ಜನಾರ್ದನ ಭಟ್ ಅವರು,  ಅಡಿಗರಿಗಿಂತ ಹಿಂದಿನ ಯುಗದ ಶ್ರೇಷ್ಠ ಕವಿ ಅಂದರೆ ಕಡೆಂಗೋಡ್ಲು ಶಂಕರ ಭಟ್ಟರ ಕುರಿತು ಬರೆದಿದ್ದಾರೆ. 

Read More

ಗಂಟಲೊಳಗೆ ಇಳಿಯಲೊಲ್ಲದ ಗುಲ್ಜಾರ್ ಖಾನ್ ಕಟ್ಟಿದ ಮುದ್ದೆಗಳು

ಡಬ್ಬಿಯಲ್ಲಿದ್ದ ತಿಂಡಿ ಕಳವಾಗುತ್ತಿರುವುದನ್ನು ನೋಡಿದ ‘ಹಾರ್ಟ್ ವೀಕ್’ ಮಾರನೆ ಬೆಳಗ್ಗೆ ಊಟವಾದ ಮೇಲೆ ಒಂದು ಉಪಾಯ ಮಾಡಿದ, ತನ್ನ ಟ್ರಂಕಿನ ಮುಂದೆ ನಿಂತುಕೊಂಡು ಎಲ್ಲ ವಿದ್ಯಾರ್ಥಿಗಳನ್ನುದ್ದೇಶಿಸಿ ತನ್ನ ತಿಂಡಿಬಾಕ್ಸ್ ಮುಚ್ಚಳವನ್ನು ತೆಗೆದು ಎಲ್ಲರಿಗೂ ಕಾಣುವಂತೆ ‘ನೋಡ್ರಪ್ಪ ನಾನು ನನ್ನ ತಿಂಡಿಗೆ ಬಾಯಿ ತುಂಬ ಉಗಿತಾ ಇದಿನಿ, ಯಾರಾದರೂ ತಿಂದರೆ ನನ್ನ ಎಂಜಲು ತಿಂದಂತೆ’ ಎಂದು ಕ್ಯಾಕರಿಸಿ ಕ್ಯಾಕರಿಸಿ ಚೆನ್ನಾಗಿ ಉಗಿದು, ನಂತರ ಬಾಯಿ ಮುಚ್ಚಿ ಟ್ರಂಕಿಗಿಟ್ಟು ಸ್ಕೂಲಿಗೆ ಹೋದ. ಮಧ್ಯಾಹ್ನ ಬಂದು ನೋಡಿದಾಗ ಆತನ ತಿಂಡಿ ಹೇಗಿತ್ತೋ ಹಾಗೆಯೇ ಇತ್ತು.
ಗುರುಪ್ರಸಾದ್ ಕಂಟಲಗೆರೆ ಬರೆಯುವ ‘ಟ್ರಂಕು-ತಟ್ಟೆ’ ಸರಣಿಯ ಮೂರನೆಯ ಕಂತು

Read More

ಸೀತೆ ನಡೆದ ‘ಪರ್ಯಾಯ ದಾರಿ’

ಅಪ್ಪ ತನ್ನ ಮಗಳನ್ನು ಗಡಂಗಿಗೆ ಪ್ಯಾಕೆಟ್ ತರಲು ಕಳುಹಿಸಲು ಶುರು ಮಾಡಿದ್ದು ಸೀತುವಿನ ಮನಸಿಗೆ ತುಂಬಾ ಕಸಿವಿಸಿಯನ್ನು ಉಂಟು ಮಾಡಿತ್ತು. ದಿನ ಕಳೆದಂತೆ ಗಡಂಗಿನಲ್ಲಿ ಚೋಮನ ದೋಸ್ತುಗಳ ಕಾಟವೂ ಹೆಚ್ಚತೊಡಗಿತು. ದಿನಾ ಸಾರಾಯಿಗೆ ಬರುತ್ತಿದ್ದ ಬೆಳ್ಳಿಯನ್ನು ಚುಡಾಯಿಸುವವರ ಸಂಖ್ಯೆ ಹೆಚ್ಚಿದಾಗ ಸೀತುವಿನ ಮನಸ್ಸು ಅಲ್ಲೋಲ ಕಲ್ಲೋಲವಾಗವಾಗ ತೊಡಗಿತ್ತು. ಸಂಜೆ ಬರುವಾಗಲೇ ಬೊಬ್ಬೆ ಹೊಡೆಯುತ್ತಿದ್ದ ಚೋಮ ಹೇಳದ ಮಾತಿಲ್ಲ. ಎಲ್ಲರೆದುರು ತನ್ನ ಹೆಂಡತಿ, ಮಗಳನ್ನು ತುಚ್ಚವಾಗಿ ಆಡುತ್ತಿದ್ದ ಚೋಮ ಮನೆಗೆ ಬಂದನೆಂದರೆ ಮಕ್ಕಳಾದ ತುಕ್ರ, ತನಿಯ ಓಡಿ ಮೂಲೆ ಸೇರುತ್ತಿದ್ದರು.”

Read More

ಸಾತ್ವಿಕ ಜೀವನವಿಧಾನವೇ ಬಹುದೊಡ್ಡ ಆಸ್ತಿ

ಒಂದು ಸಲ ಮಳೆಗಾಲದಲ್ಲಿ ರಾತ್ರಿ ಹೀಗೆ ಸಿಕ್ಕಿಹಾಕಿಕೊಂಡು ನಾವು ಮಕ್ಕಳು ಮತ್ತು ಹಿರಿಯರೆಲ್ಲ ಬಹಳ ಹಸಿದು ಆ ಹಾಸ್ಟೆಲ್ ಕೋಣೆಯಲ್ಲಿ ಕುಳಿತಿದ್ದೆವು. ಅಷ್ಟೊತ್ತಿಗೆ ಜಂಬಗಿಯವರು ರಾತ್ರಿ ಒಂಬತ್ತು ಗಂಟೆ ಹೊತ್ತಿಗೆ ಯಾವುದೋ ಖಾನಾವಳಿಯಿಂದ ನಮಗೆಲ್ಲ ಸಾಕಾಗುವಷ್ಟು ಬಿಸಿ ಅನ್ನ ಮತ್ತು ಸಾರು ತೆಗೆದುಕೊಂಡು ಬಂದರು. ಅವೆರಡೂ ರುಚಿ ಶುಚಿಯಾಗಿದ್ದವು. ಆ ಚಳಿ, ಆ ಹಸಿವು, ಆ ಬಿಸಿ ಬಿಸಿ ಅನ್ನ ಮತ್ತು ಸಾರಿನ ರುಚಿ ಎಂದೂ ಮರೆಯಲು ಸಾಧ್ಯವಿಲ್ಲ. ನಾನು ದೊಡ್ಡವನಾದ ಮೇಲೆ ಜಂಬಗಿಯವರನ್ನು ಹುಡುಕಲು ಯತ್ನಿಸಿ ವಿಫಲನಾದೆ.”

Read More

ಬದುಕಿನ ಹಡಗು ಮತ್ತೊಂದು ತೀರದೆಡೆಗೆ..

ಇನ್ನೇನು ಸುರಂಗ ಕೊರೆಯುವ ಕೆಲಸ ಮುಕ್ತಾಯವಾಗುತ್ತ ಬಂದಿತ್ತು. ಕೆಲವೇ ಅಡಿಗಳಷ್ಟೇ ಕೊರೆಯುವ ಕೆಲಸ ಬಾಕಿ ಉಳಿದಿತ್ತು. ಸುರಂಗ ಮುಂದೆ ಸಾಗಿದಂತೆ ಮರದ ದೊಡ್ಡ ದಿಮ್ಮಿಗಳನ್ನಿಟ್ಟು ಆಧಾರದಂತೆ ಕೊಡುವುದು ಇದಿನಬ್ಬನಿಗೆ ಮರೆತು ಹೋಗಿತ್ತು. ಆ ವಿಷಯ ನೆನಪಾಗುತ್ತಲೇ, ಓಡಿ ಓಡಿ ಎಂದು ಕಿರುಚಿದ. ಎಲ್ಲರೂ ದಿಕ್ಕಾಪಾಲಾಗಿ ಓಡಿದರು. ಇದಿನಬ್ಬನಿಗೆ ಓಡಲಾಗಲಿಲ್ಲ‌. ಇದ್ದಕ್ಕಿದ್ದಂತೆ ಭಾರೀ ಸದ್ದಿನೊಂದಿಗೆ ಗುಡ್ಡದ ಒಂದು ಭಾಗ ಜರ್ರನೆ ಕುಳಿತೇ ಬಿಟ್ಟಿತು. ಇದಿನಬ್ಬನೂ ಸೇರಿ ನಾಲ್ಕೈದು ಜ‌ನರು ಆ ಮಣ್ಣಿನೊಳಗೆ ಸಿಕ್ಕಿಹಾಕಿಕೊಂಡರು.
ಮುನವ್ವರ್ ಜೋಗಿಬೆಟ್ಟು ಬರೆಯುವ ಡರ್ಬನ್ ಇದಿನಬ್ಬ ಕಿರುಕಾದಂಬರಿಯ ಎಂಟನೆಯ  ಕಂತು.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ