Advertisement

Category: ಸರಣಿ

ಭಯೋತ್ಪಾದಕರ ಕೈಯಲ್ಲಿ ಕ್ರೀಡಾಪಟುಗಳು!: ಕಾರ್ತಿಕ್ ಕೃಷ್ಣ ಸರಣಿ

ಇಸ್ರೇಲಿ ಕ್ರೀಡಾಪಟುಗಳನ್ನು ಹೇಗಾದರೂ ರಕ್ಷಿಸಬೇಕೆಂದು ಜರ್ಮನ್ ಅಧಿಕಾರಿಗಳು ಫರ್ಸ್ಟೆನ್‌ಫೆಲ್ಡ್‌ಬ್ರಕ್ ವಾಯುನೆಲೆಯಲ್ಲಿ ಒಂದು ರಕ್ಷಣಾ ಕಾರ್ಯಾಚರಣೆಯನ್ನು ಕಾರ್ಯಗತಗೊಳಿಸಿದರು. ಭಯೋತ್ಪಾದಕರು ಮತ್ತು ಒತ್ತೆಯಾಳುಗಳನ್ನು ಆ ವಾಯುನೆಲೆಯಿಂದ ಹೆಲಿಕಾಪ್ಟರ್ ಮೂಲಕ ಸಾಗಿಸುವುದು ಆ ಯೋಜನೆಯ ಭಾಗವಾಗಿತ್ತು. ಆಗ ನಡೆಯಿತು ನೋಡಿ ಮತ್ತೊಂದು ದುರಂತ! ಸಾಕಷ್ಟು ಮುಂಜಾಗ್ರತೆ ವಹಿಸಿದ್ದರೂ, ರಕ್ಷಣಾ ಪ್ರಯತ್ನವು ಕಳಪೆಯಾಗಿ ಕಾರ್ಯಗತಗೊಂಡಿತ್ತು. ಜರ್ಮನ್ ಪೊಲೀಸರು ಅಂತಹ ಕಾರ್ಯಾಚರಣೆಯನ್ನು ನಿಭಾಯಿಸಲು ಶಕ್ತರಾಗಿರಲಿಲ್ಲ.
ಕಾರ್ತಿಕ್‌ ಕೃಷ್ಣ ಬರೆಯುವ “ಒಲಂಪಿಕ್ಸ್‌ ಅಂಗಣ” ಸರಣಿ

Read More

ಅಪ್ಪನಿಗೇ ನನ್ನನ್ನು ಪರಿಚಯ ಮಾಡಿಕೊಂಡಿದ್ದೆ!: ಎಚ್. ಗೋಪಾಲಕೃಷ್ಣ ಸರಣಿ

ನಮ್ಮ ಅಪ್ಪಂಗೆ ಅವರ ಮಕ್ಕಳ ಪರಿಚಯವೇ ಇಲ್ಲ ಅಂತ ಅಮ್ಮ ಆಗಾಗ ಮನೆಗೆ ಬಂದವರೆಲ್ಲರ ಮುಂದೆ ಹೇಳುತ್ತಿದ್ದಳು. ಅಪ್ಪ ನನ್ನ ಗುರುತು ಹಿಡಿತಾನೋ ಇಲ್ಲವೋ ಅಂತ ನನ್ನ ತಲೆಗೆ ಆಗ ಹೊಳಿಬೇಕಾ..? ಅಪ್ಪ ನನ್ನನ್ನು ನೋಡಿದ್ರಾ, ಮುಂದೆ ಸರಿದೆ. ಅಪ್ಪಾ, ನಾನು ಗೋಪಿ ನಿಮ್ಮ ಕೊನೇ ಮಗ.. ಅಂತ ವಿವರಿಸಲು ಹೊರಟೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ಕೂರಾಪುರಾಣ ೬: ಪರಚುವ ಉಗುರುಗಳು ಮತ್ತು ಮೊಂಡು ನಾಯಿಗಳು

ನಾಯಿಗಳ ಸಲೂನಿನಲ್ಲಿ ಉಗುರುಗಳನ್ನು ಕತ್ತರಿಸುತ್ತಾರೆಂದು ಗೊತ್ತಾಗಿ ಅಲ್ಲಿಗೆ ಕರೆದುಕೊಂಡು ಹೋದೆವು. ಅಲ್ಲಿ ಅವನ ಯಾವ ತಂತ್ರಗಳು ನಡೆಯದೇ, ಆಕೆಗಿರುವ ಅನುಭವದಿಂದ ಉಗುರುಗಳನ್ನು ಕತ್ತರಿಸಿಯೇ ತೀರುತ್ತಾಳೆ ಎಂದು ನಾವು ಮನಸ್ಸಿನಲ್ಲಿ ಮಂಡಿಗೆ ಮೆಲ್ಲುತ್ತ ಹೊರಗೆ ಕಾಯುತ್ತಿದ್ದೆವು. ಸ್ವಲ್ಪ ಹೊತ್ತಿನ ನಂತರ ಹೊರಗೆ ಬಂದ ಆಕೆಯನ್ನು ನೋಡಿ ಬೆಟ್ಟದ ಚಾಮುಂಡಿದೇವಿಯೇ ದರ್ಶನ ಕೊಟ್ಟಂತಾಯಿತು. ಆದರೆ.. ಅವಳು ಸಹ ತನಗೆ ಆಗಲಿಲ್ಲ ಎಂದು ಕೂರಾನನ್ನು ಕರೆತಂದು ಕೊಟ್ಟು ಬಿಟ್ಟಳು!
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ಆರನೆಯ ಕಂತು

Read More

‘ಕಂಪ್ಯೂಟರ್’ಗೇ ಪಾಠ ಕಲಿಸಿದ ‘ಮೃತ್ಯು!’: ಪೂರ್ಣೇಶ್‌ ಮತ್ತಾವರ ಸರಣಿ

ಇನ್ನೂ ಕಂಪ್ಯೂಟರ್ ಸರ್‌ರ ವರ್ಣನೆಯನ್ನೆಲ್ಲಾ ಕೇಳಿ ಅವರೆಂದೂ ನಗು ಮೊಗದಿಂದ ಪಾಠ ಮಾಡಲೇ ಇಲ್ಲವೆಂದು ತಿಳಿಯಬೇಡಿ. ನಮ್ಮ ಕಂಪ್ಯೂಟರ್ ಸರ್‌ರಂತಹ ಕಂಪ್ಯೂಟರ್ ಸರ್ ಕೂಡ ನಗು ಮೊಗದೊಂದಿಗೆ ಪಾಠ ಹೇಳಿ ಕೊಡುವ ರಸ ಗಳಿಗೆಗಳಿಗೆ ನಾವು ಸಾಕ್ಷೀಭೂತರಾಗಿದ್ದೆವು. ಆದರೆ, ಆ ಅದೃಷ್ಟ ಇದ್ದದ್ದು ಮಾತ್ರ ನಮಗಲ್ಲ. ಬದಲಿಗೆ, ಕೆಲದಿನಗಳ ಮಟ್ಟಿಗೆ ಪಕ್ಕದ ಶೃಂಗೇರಿಯಿಂದ ಬರುತ್ತಿದ್ದ, ನೋಡಲು ಸುರಸುಂದರಿಯಂತಿದ್ದ ಅತಿಥಿ ಶಿಕ್ಷಕಿಯೊಬ್ಬರಿಗೆ ಮಾತ್ರ!
ಪೂರ್ಣೇಶ್‌ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿಯ ಎರಡನೆಯ ಬರಹ

Read More

ನಮ್ಮೂರಿನ ಕತೆಗಳು: ಸುಮಾ ಸತೀಶ್ ಸರಣಿ

ಅವರ ಮನ್ಯಾಗೆ ಲೆಟ್ರಿನ್ ಇತ್ತು. ಇಲ್ಲಿ ಬಯಲಿಗೆ ಹೋಗೋಕೆ ಸುತ್ರಾಂ ಒಪ್ತಿಲ್ಲ. ಚೊಂಬು ಹಿಡಿಯಾಕಿಲ್ಲ ಅಂದ್ಲು. ಕೊನೀಗೆ ಸಣ್ಣ ಹುಡ್ಗಿ ಅಂತ ನನ್ನ ಅವಳ ಹಿಂದೆ ಚೊಂಬು ಹಿಡ್ಕೊಂಡು ಮೆರವಣಿಗೆ ಕಳಿಸಿದ್ರು. ಥೋ, ನಂಗೋ ಕೋಪ. ಅವಳ ಹಿಂದೆ ಹೋಗಿ, ಚೊಂಬು ಕೊಟ್ಟೆ. ಆ ನೀರು ಸಾಲಲಿಲ್ಲ ಅಂತ ಅಲ್ಲೇ ಕುಂತ್ಲು. ಇನ್ನೊಂದು ಚೊಂಬು ತರಾಣಿ ಅಂತ ಹೊಂಟ್ರೇ, ಚೊಂಬು ಸಾಲಾಕಿಲ್ಲ, ಬಿಂದಿಗೇಲಿ ತತ್ತಾ ಅಂತ‌ ಹಠ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮೂರಿನ ಕುರಿತ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ