Advertisement

Category: ಸಾಹಿತ್ಯ

ನಟರಾಜ್ ಹುಳಿಯಾರರ ಪುಸ್ತಕದ ಕುರಿತು ಎಚ್.ಆರ್. ರಮೇಶ್ ಬರಹ

“ಯಾವಾಗಲೋ ಚಿಕ್ಕ ವಯಸ್ಸಿನಲ್ಲಿ ನೋಡಿದ ಒಂದು ಸಾವನ್ನು ಬಿಟ್ಟರೆ ಮತ್ತೆ, ಮತ್ತೊಂದು ಸಾವನ್ನು ನೋಡುವುದು 1998 ರ ಆಗಸ್ಟ್ ನಡುರಾತ್ರಿಯ ಡಿ.ಆರ್ ಅವರ ಸಾವು. ಇದರ ಬಗ್ಗೆ ಬರೆಯುವಾಗ ಹುಳಿಯಾರ್ ತಮ್ಮ ಕರುಳ ಬಳ್ಳಿಯ ಯಾವುದೋ ಒಂದು ಕುಡಿ ಕಡಿದು ಹೋದಾಗ ಆಗುವಷ್ಟೇ ನೋವು, ವಿಷಾದ, ಖಾಲಿತನ, ತೀವ್ರವಾಗಿ ಅವರಿಗೂ ಆಗುವುದನ್ನು ಕಾಣಬಹುದು. ಅದೇ ಥರ 2000 ರ ಇಸ್ವಿಯಲ್ಲಿ ಜರುಗಿದ ಲಂಕೇಶ್ ಸಾವು.”

Read More

“ನಟನೆ”: ಸಚೇತನ ಭಟ್ ಅನುವಾದಿಸಿದ ಹರುಕಿ ಮುರಕಮಿ ಬರೆದ ಜಪಾನೀ ಕತೆ

“ಒಂದು ಕಾಲದಲ್ಲಿ ತಾನು ಪ್ರೀತಿಸಿದ್ದ, ಜೊತೆಗೆ ತಬ್ಬಿ ಮಲಗಿದ್ದ ರಕ್ತ ಮಾಂಸಗಳಿಂದ ತುಂಬಿದ್ದ ಸುಂದರ ದೇಹ ಇವತ್ತು ಕೇವಲ ಬೂದಿ ಎನ್ನುವದನ್ನು ಜೀರ್ಣಿಸಿಕೊಳ್ಳುವದು ತಕತ್ಸುಕಿಯ ಶಕ್ತಿ ಮೀರಿದ ಕಾರ್ಯವಾಗಿತ್ತು. ಕಾಫುಕ ಈ ಶೂನ್ಯವನ್ನು ಚೆನ್ನಾಗಿ ಬಲ್ಲವನಾಗಿದ್ದ. ತಕಾತ್ಸುಕಿಯ ಕಣ್ಣುಗಳು ಅವಳ ನೆನಪಿನಿಂದ ಮಂಜಾದಾಗ ಕಾಫುಕನಿಗೆ ಅವನನ್ನು ತಬ್ಬಿಕೊಂಡು ಸಂತೈಸಬೇಕೆನಿಸಿತ್ತು. ಅವನು ತನ್ನ ಭಾವನೆಗಳನ್ನು ಮುಚ್ಚಿಡಲಾರದ ಮನುಷ್ಯನೆನಿಸಿತು. “

Read More

ಅಶೋಕ್ ಕುಮಾರ್ ಅನುವಾದಿಸಿದ ಸುಭಾಷ್ ಚಂದ್ರನ್ ಅವರ ಕಾದಂಬರಿಯ ಒಂದು ಭಾಗ

“ಮಳೆ ಜೋರಾಗಿ ಮರವನ್ನೇ ಮುಳುಗಿಸುವಂತೆ ಸುರಿಯತೊಡಗಿದಾಗ ರಣಹದ್ದಿನ ಪುಕ್ಕಗಳು ತೊಯ್ದು ತೊಪ್ಪೆಯಾಗುವುದನ್ನು ತನ್ನ ಕಡೆಗಣ್ಣಿಂದ ನೋಡುವುದು ಅಯ್ಯಾಪಿಳ್ಳೆಗೆ ಸಾಧ್ಯವಾಯಿತು. ಪಂಜರಕ್ಕೆ ಒತ್ತಿಕೊಂಡಂತಿದ್ದ ಜುಟ್ಟಿನ ಗಂಟು ಕಳಚಿಕೊಂಡು ಹಿಂದಕ್ಕೆ ಚದುರಿದ್ದ ಕೂದಲಿಗೆ ಕುತ್ತಿಗೆಯನ್ನೊತ್ತಿ ಅಯ್ಯಾಪಿಳ್ಳೆ ತಲೆಯನ್ನು ಹೊರಳಿಸಲು ನೋಡಿದನಾದರೂ ಸಾಧ್ಯವಾಗಲಿಲ್ಲ. ಭೋರ್ಗರೆದು ಸುರಿಯುತ್ತಿರುವ ಮಳೆಯಲ್ಲಿ ಆತ ಬಾಯಾರಿ ತಹತಹಿಸಿದ.”

Read More

ಓಬಿರಾಯನ ಕಾಲದ ಕತೆಗಳ ಸರಣಿಯಲ್ಲಿ ಕಡೆಂಗೋಡ್ಲು ಶಂಕರಭಟ್ಟರು ಬರೆದ ಕತೆ “ದುಡಿಯುವ ಮಕ್ಕಳು”

“ಸಂಜೆ ಆಯಿತು; ನೆರಳು ಉದ್ದುದ್ದವಾಗಿ ಎಲ್ಲಾ ಕಡೆಗಳಲ್ಲಿಯೂ ಕತ್ತಲಿಸುತ್ತಿದೆ. ಮನುಷ್ಯ ಸಂಚಾರ ಕಡಿಮೆಯಾಗುತ್ತಿದೆ. ದೂರದೂರದಲ್ಲಿ ಯಾರೋ ಯಾರನ್ನೋ ಕರೆಯುವ ಒಂದೊಂದು ಧ್ವನಿ ಅಲೆಯಾಗಿ ಮಾತ್ರ ಕಿವಿಯನ್ನು ಹೊಡೆಯುತ್ತಿದೆ. ಇತರರಲ್ಲಿ ಕರೆಯುವವರೂ ಇದ್ದಾರೆ. ಕರೆಯಿಸಿಕೊಳ್ಳುವವರೂ ಇದ್ದಾರೆ ! ಈ ಬಡ ಕುಟುಂಬದಲ್ಲಿ ಮಾತ್ರ ಅಂಥವರು ಯಾರೂ ಇಲ್ಲವೆ? ಅನ್ಯಾಯವಿದು. ಲಿಂಗಪ್ಪ ಇನ್ನೂ ಬರಲಿಲ್ಲ.”

Read More

ಶೂದ್ರ ಶ್ರೀನಿವಾಸ್ ಪುಸ್ತಕದ ಕುರಿತು ಎಚ್.ಆರ್. ರಮೇಶ್ ಬರಹ

“ಲಂಕೇಶರ ಜೊತೆಯ ತಮ್ಮ ಸುದೀರ್ಘ ಪಯಣದಲ್ಲಿ ನಿಷ್ಠುರತೆಯನ್ನು ಕಾಪಾಡಿಕೊಂಡು ಹೋಗುತ್ತಲೇ ಅವರಿಂದ ಸಾರಾಸಗಟಾಗಿ ಬಿಡಿಸಿಕೊಂಡು ಹೋಗದೆ ಮುನಿಸು, ಜಗಳ, ಟೀಕೆಗಳನ್ನು ಸಹಜವಾಗಿಯೇ ಸ್ವೀಕರಿಸಿ ಕೇವಲ ಸ್ವಚ್ಛಂದ ಪ್ರೀತಿ-ಸ್ನೇಹಗಳನ್ನಷ್ಟೇ ನೆಚ್ಚಿ ಮುನ್ನಡೆದುದರಲ್ಲಿ ಅವರ ತಾಳ್ಮೆ ಹಾಗೂ ಝೆನ್ ತತ್ವದಲ್ಲಿ ಕಾಣುವಂತಹ ಸುಮ್ಮನೆ ಬದುಕುತ್ತ ಇರುತ್ತ ಹೋಗುವ ಕ್ರಮ ಗಮನಸೆಳೆಯುತ್ತದೆ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ