Advertisement

Category: ಅಂಕಣ

ಯಾರು ಹಿತವರು ನಮಗೆ?: ಗುರುಪ್ರಸಾದ ಕುರ್ತಕೋಟಿ ಅಂಕಣ

ಪಟ್ಟಣಗಳಲ್ಲಿ ಹಲವು ವರ್ಷಗಳು ಇದ್ದು ರೂಢಿಯಾದವರಿಗೆ ಹಳ್ಳಿಗೆ ಹೋಗಿ ಇರುವುದು ಅಷ್ಟು ಸುಲಭ ಅಲ್ಲ.. ಸೌಲಭ್ಯಗಳು ಅಲ್ಲಿ ಸುಧಾರಿಸಿವೆ, ಸಿಗ್ನಲ್‌ನಿಂದ ಹಿಡಿದು ಹಲವಾರು ವ್ಯವಸ್ಥೆಗಳು ಈಗ ಅಲ್ಲಿವೆಯಾದರೂ ಜನರ ಮನಸ್ಥಿತಿ ಹಾಗೂ ಕೆಲವು ಪ್ರಶ್ನೆಗಳು ಹೈರಾಣು ಮಾಡುತ್ತವೆ! ಆದರೆ ಕ್ರಮೇಣ ಅದನ್ನು ತಮಾಷೆಯಾಗಿ ತೆಗೆದುಕೊಂಡರೆ ನಮ್ಮ ತಲೆ ಹಾಳು ಮಾಡಿಕೊಳ್ಳುವುದು ತಪ್ಪುತ್ತದೆ!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣದ ಹೊಸ ಬರಹ ನಿಮ್ಮ ಓದಿಗೆ

Read More

ಇರುವುದನ್ನು ಕೈ ಬಿಟ್ಟು….: ಮಾಲತಿ ಶಶಿಧರ್ ಅಂಕಣ

ಎರಡು ಧ್ರುವಗಳಂತಿದ್ದ ನಮ್ಮ ಮಧ್ಯೆ ಇದ್ದ ಅದೃಶ್ಯ ಸೆಳೆತವೆಂದರೆ ನಮ್ಮಿಬ್ಬರ ಆದರ್ಶಗಳು ಮತ್ತು ಜೀವನ ಬಗ್ಗೆ ಇದ್ದ ನಿಲುವು ಮತ್ತು ಅವನಲ್ಲಿರುವ ಹಾಗು ನನ್ನಲ್ಲಿಲ್ಲದ ಪ್ರಬುದ್ಧತೆ. ಅದಷ್ಟನ್ನೇ ಇಟ್ಟುಕೊಂಡು ಎಷ್ಟು ತಾನೇ ಸಹಿಸಿಕೊಂಡಾನು. ಒಂದು ದಿನ ಅನತಿ ದೂರದಲ್ಲಿ ನಮ್ಮಿಬ್ಬರ ನಡುವೆ ದೊಡ್ಡ ಗೋಡೆಯೊಂದ ಏಳಿಸಿಯೇ ಬಿಟ್ಟ. ಗೋಡೆಯಾಚೆಯಿಂದ ಅವನು ಈಚೆಯಿಂದ ನಾನು. ಬರೀ ಔಪಚಾರಿಕವಾಗಿ ಮಾತುಕತೆ ನಡೆಸುತ್ತಿದ್ದೆವೆ ಹೊರೆತು ಮನಸ್ಸಿನಾಳದಿಂದೇನಲ್ಲ. ಅದು ನನ್ನಿಂದ ಕೆಡವಲಾಗದಂತ ಗೋಡೆ ಏನಲ್ಲ…
ಮಾಲತಿ ಶಶಿಧರ್ ಬರೆಯುವ “ಹೊಳೆವ ನದಿ” ಅಂಕಣ

Read More

ಐಪಿಎಲ್-2023: ಇ.ಆರ್.‌ ರಾಮಚಂದ್ರನ್‌ ಅಂಕಣ

ಚೆನ್ನೈ ಸೂಪರ್‌ ಕಿಂಗ್ಸ್ – ಸಿಎಸ್ಕೆ ಟೀಮಿನ ನಾಯಕ ಮಹೇಂದ್ರ ಸಿಂಘ್ ಧೋನಿಯವರ ಕೊಡುಗೆ ಅವರ ಟೀಮಿಗೆ ಈ ಸಲ ಬಹಳ ಅಪಾರವಾದದ್ದು. ಕಾಲಿಗೆ ಏಟು ಬಿದ್ದು ಅವರು ಕೊನೆಯ ತನಕ ಕುಂಟಿಕೊಂಡೇ ಆಡಬೇಕಾಯಿತು. ಅವರಿಗೆ ರವೀಂದ್ರ ಜಡೇಜ ಮತ್ತು ಮೊಯಿನ್ ಆಲಿಯಲ್ಲಿ ಇಬ್ಬರು ಒಳ್ಳೇ ಸ್ಪಿನ್ನರ್‌ಗಳಿದ್ದರು. ಜೊತೆಗೆ ಶ್ರೀಲಂಕಾದ ತೀಕ್ಷಣ, ಪಥಿರಾಣ ಎಂಬ ಯುವಕ ಬೋಲರ್‌ಗಳಿದ್ದರು. ಬ್ಯಾಟಿಂಗ್‌ನಲ್ಲಿ ರುತುರಾಜ್ ಗಾಯ್ಕ್ವಾಡ್, ಕಾನ್ವೆ, ರಾಯುಡು, ಶುಭಂ ದೂಬೆ ಮುಂತಾದ ಒಳ್ಳೆ ಆಟಗಾರರಿದ್ದರು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ

Read More

ಹಣದುಬ್ಬರ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಕಥೆಗಳು: ವಿನತೆ ಶರ್ಮ ಅಂಕಣ

ಒಂದು ರೀತಿಯಲ್ಲಿ ನೋಡುವುದಾದರೆ, ಈ ಶಿಕ್ಷಣ ಸಾಲವನ್ನು ನೇರವಾಗಿ ವಿದ್ಯಾರ್ಥಿಯೇ ಮುಂದೆ ಉದ್ಯೋಗಸ್ಥನಾದ ಮೇಲೆ ಕಟ್ಟುವುದರಿಂದ ಪೋಷಕರಿಗೆ ಅವನ ಶಿಕ್ಷಣದ ಶುಲ್ಕದ ಹೊರೆ ತಗುಲುವುದಿಲ್ಲ. ಇನ್ನೊಂದು ರೀತಿಯಲ್ಲಿ ನೋಡಿದರೆ, ಅಯ್ಯೋ ಪಾಪ ಕೇವಲ 18 ವರ್ಷ ವಯಸ್ಸಿನಿಂದಲೇ ಈ ಕಿರಿಯರು ಸಾಲಕ್ಕೆ ಸಿಲುಕುತ್ತಾರಲ್ಲಾ ಎಂದು ಬೇಸರವಾಗುತ್ತದೆ. ಹಾಗೆ ವ್ಯಥೆ ಪಡದೆ ಪೋಷಕರೇ ತಮ್ಮ ವಿದ್ಯಾರ್ಥಿಗಳ ಶಿಕ್ಷಣಶುಲ್ಕವನ್ನು ಕಟ್ಟಬಹುದು, ಆದರೆ ಸರಾಸರಿ ತಿಂಗಳ ಸಂಬಳಕ್ಕೆ ಹೋಲಿಸಿದರೆ ಶಿಕ್ಷಣದ ಫೀಸ್ ಬಲು ದುಬಾರಿ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಕೈ ಕೆಸರಾಗಿ ಬಾಯಿ ಮೊಸರು: ಗುರುಪ್ರಸಾದ್‌ ಕುರ್ತಕೋಟಿ ಅಂಕಣ

ಕೃಷಿಯನ್ನು ಕಲಿಯುವುದರ ಜೊತೆ ಜೊತೆಗೆ, ಉತ್ಪನ್ನಗಳನ್ನು ಹೇಗೆ ಮಾರಬೇಕು ಎಂಬುದನ್ನು ಕೂಡ ರೈತನಾಗುವವನು ಕಲಿಯಬೇಕು. ಹಿಂದೊಮ್ಮೆ ಬೆಂಗಳೂರನ್ನು ಬಿಟ್ಟು ಹಳ್ಳಿಗೆ ಖಾಯಂ ಆಗಿ ಬಂದು ಬಿಡಲೇ ಎಂದು ಯೋಚನೆ ಮಾಡುತ್ತಿದ್ದ ಸಮಯದಲ್ಲಿ ಅಲ್ಲಿನ ಸ್ನೇಹಿತರೊಬ್ಬರಿಗೆ ಹಳ್ಳಿಯಲ್ಲಿ ನಾನು ಸಂಪಾದನೆ ಮಾಡಲು ಏನು ಮಾಡಬಹುದು ಅಂತ ಕೇಳಿದಾಗ, ಅವರು ಬಿಳೆ (ಭತ್ತದ) ಹುಲ್ಲಿನ business ಮಾಡಿ ಅಂತ ನಕ್ಕಿದ್ದರು. ಆದರೆ ಅವರು ಹೇಳಿದ್ದು ತುಂಬಾ ಸತ್ಯ ಅಂತ ಈಗ ಅರಿವಾಗಿತ್ತು. ಭತ್ತದ ಹುಲ್ಲಿಗೆ ತುಂಬಾ ಬೆಲೆ ಹಾಗೂ ಬೇಡಿಕೆ ಇದೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ